ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೦೪ ಶ್ರೀಮದ್ಭಾಗವತವು [ಅಧ್ಯಾ. ೧೧ w+ ಶ್ರೀಕೃಷ್ಣನ ಬಾಲಕ್ರೀಡೆಗಳು ww ಆತ್ತಲಾಗಿ ಬೇರೆಬೇರೆ ಕಾರಾಂತರದಲ್ಲಿದ್ದ ನಂದಾದಿಗೋಪಾಲ ಕರೆಲ್ಲರೂ, ಇತ್ತಲಾಗಿ ಈ ಮತ್ತಿಯ ಮರಗಳು ಮುರಿದುಬಿದ್ದ ಮಹಾಧ್ಯ ನಿಯನ್ನು ಕೇಳಿ, ಅಕಸ್ಮಾತ್ತಾಗಿಬರಸಿಡಿಲು ಬಡಿದಿರಬಹುದೆಂದು ಭಯಪಟ್ಟು ಕೃಷ್ಣನಿದ್ದ ಕಡೆಗೆ ಬಂದರು. ಅಲ್ಲಿ ಬಹುಕಾಲದಿಂದಿದ್ದ ಮತ್ತಿಯ ಮರಗಳೆರ ಡೂ ಮುರಿದುಬಿದ್ದನ್ನು ಕಂಡು, ಅದರ ಕಾರಣವೇನೆಂದು ತಿಳಿಯದೆಭಾಂ ತರಾಗಿ ನೋಡುತಿದ್ದರು. ಮತ್ತು ಅಲ್ಲಿ ಹಗ್ಗದಿಂದ ಬಿಗಿಯಲ್ಪಟ್ಟಿದ್ದ ಕೃಷ್ಣನನ್ನೂ, ಅವನು ಆ ಹಗ್ಗಕ್ಕೆ ಕಟ್ಟಿದ್ದ ಒರಳುಕಲ್ಲನ್ನೂ ತನ್ನೊಡನೆ ಎಳೆದುಕೊಂಡು ಅತ್ತಿತ್ತ ಸುತ್ತಾಡುತ್ತಿರುವುದನ್ನೂ ಕಂಡು « ಆಹಾ ! ಇದು ಯಾರ ಕೆಲಸವು ! ಇದೇನಾಶ್ಚ ಲ್ಯವು ! ಇದೇನೋ ದೊಡ್ಡ ಉತ್ಸಾ ತದಂತೆ ತೋರುವುದು”ಎಂದು ಭಯಭ್ರಾಂತರಾಗಿದ್ದರು. ಆಗ ಸಮೀಪದಲ್ಲಿ ದ ಕೆಲವುಬಾಲಕರು. ( ಅಯ್ಯೋ ! ಇದೆಲ್ಲವೂ ನಿಮ್ಮು ಕೃಷ್ಣನ ಕಾಧ್ಯವೇ? ಇವನು ಈ ಒರಳುಕಲ್ಲನ್ನೆಳೆಡುತ್ತ, ಈ ಅವಳಿಮರಗಳ ನಡುವೆ ನುಸಿದು ಹೋದನು. ಆಗ ಮರಗಳ ನಡುವೆ ಅಡ್ಡಲಾಗಿ ಸಿಕ್ಕಿಕೊಂಡ ಒರಳನ್ನು ಈತನು ಬಲಾತ್ಕಾರದಿಂದೆಳೆದಾಗ, ಈ ಮರಗಳೆರಡೂ ಮುರಿದುಬಿದ್ದುವು. ಮತ್ತೊಂದಾಸ್ಯವೇನೆಂದರೆ, ಅವುಗಳಿಂದ ಇಬ್ಬರು ದಿವ್ಯಪುರುಷರು ಬಂ ದು, ಈತನಿಗೆ ನಮಸ್ಕಾರಮಾಡಿ ಹೊರಟುಹೋದರು. ಇದೆಲ್ಲವನ್ನೂ ನಾವು ಕಣ್ಣಾರೆ ನೋಡಿದೆವು ” ಎಂದರು ಅದನ್ನು ಕೇಳಿಯೂ ನಂವಾದಿಗಳು, 11 ಈ ಸಣ್ಣ ಮಗುವೆಂದರೇನು ? ಇವನ ಎಳೆದಾಟಕ್ಕೆ ಅಷ್ಟು ದೊಡ್ಡ ಮರಗಳು ಮುರಿಯುವುದೆಂದರೇನು ? ಎಂಖಗೂ ಹೀಗಿರಲಾರದು” ಎಂದು ಅವರ ಮಾತಿನಲ್ಲಿ ಸ್ವಲ್ಪವೂ ನಂಬಿಕೆಯಿಲ್ಲದ ಭ್ರಮಿಸುತಿದ್ದರು. ಮತ್ತೆ ಕೆಲವರು ಅನುಮಾನಿಸುತಿದ್ದರು. ಇಷ್ಟರಲ್ಲಿ ನಂದನು ಮುಂದೆಬಂದು, ಆ ಕೃಷ್ಣ ನು ಹಗ್ಗದಿಂದ ಬಿಗಿಯಲ್ಪಟ್ಟಿರುವುದನ್ನೂ, ಬಹಳ ಭಾರವಾದ ಒರಳು ಕಲ್ಲ ನ್ನು ತನ್ನ ಹಿಂದೆ ಎಳೆದಾಡುತ್ತ ನಡೆಯಲಾರದೆಆಲ್ಲಲ್ಲಿ ಸುತ್ತಾಡುವುದನ್ನೂ ನೋಡಿ,ಕನಿಕರದಿಂದ ಹಸನ್ಮುಖನಾಗಿ ಬಂದು,ಆ ಕಟ್ಟನ್ನು ಬಿಚ್ಚಿ ಬಿಟ್ಟನು,