೧da ಅಧ್ಯಾ. ೧೧.] ದಶಮಸ್ಕಂಧವ. . ಕೃಷ್ಣನು ಧಾನ್ಯವನ್ನು ಕೊಟ್ಟು ಹಣ್ಣನ್ನು ಕೊಂಡು • ಕೃಷ್ಣನು ಧಾನ್ಯವನ್ನು ಇಷ್ಟರಲ್ಲಿ ಹಣ್ಣು ಮಾರುವವಳೊಬ್ಬಳು, ಕುಕ್ಕೆಯಲ್ಲಿ ಹಣ್ಣನ್ನಿಟ್ಟು ಕೊಂಡು “ ಹಣ್ಣು ಬೇಕೇ ಹಣ್ಣು?” ಎಂದು ಬೀದಿಯಲ್ಲಿ ಕೂಗುತ್ತಬಂದ *ು. ಇದನ್ನು ಕೇಳಿ ನಂದನು, “ಕೃಷ್ಟ ! ಬೀದಿಯಲ್ಲಿ ಹಣ್ಣು ಮಾರುತ್ತಿರು ವದು, ತೆಗೆದುಕೊಡುವೆನು ಬಾ”ಎಂದು ಕರೆಯಲು, ಕೃಷ್ಣನು ತಟ್ಟನೆ ತನ್ನ ತಾಯಿಯಬಳಿಗೆ ಬಂದು “ ಅಮಾ ! ಒಂದಿಷ್ಟು ಧಾನ್ಯವನ್ನು ಕೊಡು ! ಹಣ್ಣನ್ನು ಕೊಂಡುಕೊಳ್ಳುವೆನು ” ಎಂದನು. ಹೀಗೆ ಕೃಷ್ಣನು ತಾನೇ ಸ ರೈಫಲಪ್ರದವನಾಗಿದ್ದರೂ, ತಾನು ಫಲವನ್ನು ಪಡೆಯಬೇಕೆಂಬ ಆತುರ ಬಂದ,ತನ್ನ ಪುಟ್ಟ ಕೈಗಳಲ್ಲಿ ಒಂದೆರಡುಧಾನ್ಯದ ಕಾಳನ್ನೆತ್ತಿಕೊಂಡು, ಹೊರ ಕ್ಕೆ ಬಂದುದನ್ನು ನೋಡಿ ಹಣ್ಣು ಮಾರುವವಳು, ಆ ಮಗುವಿನ ಕೈಯ * ಕಾಳುಗಳನ್ನು ತನ್ನ ಕುಕ್ಕೆಗೆ ಸುರಿಸಿಕೊಂಡು, ಆ ಮಗುವಿನ ಎರಡು ಕೈಗಳಿಗೂ ಹಣ್ಣುಗಳನ್ನು ತುಂಬಿದಳು. ಅವಳ ಹಣ್ಣಿನ ಕುಕ್ಕೆಗೆ ಕೃಷ್ಣನ ಕೈಯಲ್ಲಿದ್ದ ಧಾನ್ಯವು ಬಿದ್ದೊಡನೆ, ಆ ಕುಕ್ಕೆಯು ರತ್ನಗಳಿಂದ ತುಂಬಿ ಹೋಯಿತು. ಓ ಪರೀಕ್ಷಿದ್ರಾಜಾ ! ಹೀಗೆ ಕೃಷ್ಣನು ಆಗಾಗ ತನ್ನ ಆಶ್ಚರಚರಿತ್ರ ಗಳನ್ನು ನಂದಾದಿಗಳಿಗೆ ತೋರಿಸುತ್ತಿದ್ದನು ಮತ್ತೊಮ್ಮೆ ಕೆಲವು ಗೋಪಾಂ ಗನೆಯರು, ಕೃಷ್ಣನನ್ನು ಸಮೀಪಕ್ಕೆ ಕರೆದು, “ಕೃಷ್ಣಾ'ಎಲ್ಲಿ! ಆಟವಾಡು! ನೋಡುವವು” ಎಂದು ಪ್ರೋತ್ಸಾಹಿಸಲು, ಅವರಮುಂದೆ ಕೃಷ್ಣನು ತನ್ನ ಪಾಲಕ್ರೀಡೆಗಳನ್ನು ತೋರಿಸತೊಡಗಿದನು. ಆ ಬ್ರಹ್ಮಸ್ತಂಬವರಂತ ವಾದ ಸಮಸ್ತ ಪ್ರಪಂಚವನ್ನೂ ತಾನೇ ಆಡಿಸತಕ್ಕವಾಗಿದ್ದರೂ, ಆ ಗೋ ಪಸಿಯರು ಹಾಡುತ್ತಿರುವಾಗ,ಅವರಮುಂದೆ ಬೊಂಬೆಯಂತೆ ಲಯಕ್ಕೆ ಸ ಏಯಾಗಿ ಕುಣಿದಾಡುವನು! ಅವರೊಡನೆ ತಾನೂ ಹಾಡುವನು! ಸೇವಕನಂತೆ ಆಗಾಗ ಅವರವರು ಹೇಳಿದ ಸಣ್ಣಕಾರಗಳನ್ನು ಅಕ್ಕರೆಯಿಂದ ನಡೆಸುವನು. ಅಲ್ಲಿರುವ ಪೀಠಗಳನ್ನಾಗ), ಪಾತ್ರಗಳನ್ನಾಗಲಿ ತರಬೇಕೆಂದು ಹೇಳಿ ದಾಗ, ಅವುಗಳನ್ನು ಹೊರಲಾರದವನಂತೆ ಪ್ರಯತ್ನ ಪೂರಕವಾಗಿ ತಂದಿಡು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೧೭
ಗೋಚರ