ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮of ಆಧ್ಯಾ. ೧೧.] ದಶಮಸ್ಕಂಧನು. ಮಗಳನ್ನಿಟ್ಟುಕೊಂಡು, ತಮ್ಮ ತಮ್ಮ ಯೋಗ್ಯತಾನುಸಾರವಾಗಿ ತಮ್ಮಲ್ಲಿ ಈ ಹಾರ, ಪದಕ ಮೊದಲಾದ ಕಂಠಾಭರಣಗಳನ್ನು ಧರಿಸಿ,ಬಣ್ಣದ ಸೀರೆಗ ಳನ್ನು ಟ್ಟು, ಬಂಡಿಯಲ್ಲಿ ಕುಳಿತು, ಸಂತೋಷದಿಂದ ಕೃಷ್ಣನ ಲೀಲೆ ಗಳನ್ನು ಕೊಂಡಾಡುತ್ತ ಹೊರಟರು. ರೋಹಿಣೇಯಶೋದೆಯರಿಬ್ಬರೂ ರಾಮಕೃಷ್ಣರೊಡನೆ ಒಂದು ಬಂಡಿಯಲ್ಲಿ ಕುಳಿತು, ಆ ಬಾಲ ಕರ ಮುದ್ದು ಮಾತುಗಳನ್ನು ಕೇಳಿ ಆನಂದಿಸುತ್ತ ಬರುತಿಡ್ಡರು ಹೀಗೆ ಆ ವರೆಲ್ಲರೂ ನಿತ್ಯಸುಖಾಸ್ಪದವಾದ ಬೃಂದಾವನಕ್ಕೆ ಸೇರಿದೊಡನೆ, ಅಲ್ಲಿ ಅರ್ಧಚಂದ್ರವ್ಯೂಹದಂತೆ ತಮ್ಮ ಬಂಡಿಗಳನ್ನು ಸಾಲಾಗಿ ನಿಲ್ಲಿಸಿ, ಅದರ ನ ಡುವೆ ತಮ್ಮ ಮಂದೆಗೆ ಅನುಕೂಲವಾದ ವಾಸಸ್ಥಾನವನ್ನೂ ಮಾಡಿಟ್ಟ ರು. ಅಲ್ಲಿನ ಸ್ಥಳಸು ವೇಶಗಳನ್ನೂ, ಅದರ ಸಮೀಪದಲ್ಲಿರುವ ಗೋವರ್ಧನವೆಂಬ ಮೃತವನ್ನೂ, ಸಮೀಪದಲ್ಲಿರುವ ಯಮುನಾನದಿಯ ಮಳಲುದಿಣ್ಣೆಗಳನ್ನೂ ನೋಡಿದಾಗಲೇ, ಬಲರಾಮಕೃಷ್ಣರಿಗೆ ಎಷ್ಟೋ ಉಲ್ಲಾಸವುಂಟಾಯಿತು. ಅವರಿಬ್ಬರೂ ಅಲ್ಲಿನ ವನಪ್ರದೇಶಗಳಲ್ಲಿ ಯ ಥೇಚ್ಛವಾಗಿ ವಿಹರಿಸುತ್ತ, ತಮ್ಮ ಬಾಲಕ್ರೀಡೆಗಳಿಂದಲೂ, ತಮ್ಮ ಮುದ್ದು ಮಾತುಗಳಿಂದಲೂ, ಎಲ್ಲರ ಮನಸ್ಸನ್ನೂ ಆಕರ್ಷಿಸುತ್ತಿದ್ದರು. ಕ್ರಮಕ್ರಮ ವಾಗಿ ಅವರಿಗೆ ಬಾಲ್ಯದಶೆಯು ಕಳೆಯುತ್ತ ಕೌಮಾರವಯಸ್ಸು ಬಂದಿತು. ಕರುಗಳನ್ನು ಕಾಯುವುದಕ್ಕೆ ತಕ್ಕಸಾಮರವುಂಟಾಯಿತು. ಪ್ರತಿದಿನವೂ, ಮಂದೆಯ ಹಸುಗಳನ್ನು ಮೇಯುವುದಕ್ಕಾಗಿ ಕಾಡಿಗೆ ಅಟ್ಟೆ ಕೊಂಡು ಹೋಗುತಿದ್ದರು. ಆ ಬೃಂದಾವನದ ಸುತ್ತಿನ ಪ್ರದೇಶಗಳಲ್ಲಿ ದನ ಗಳನ್ನು ಮೇಯಿಸುವಾಗಲೂ, ತಮಗೆ ಬೇಕಾದ ಕ್ರೀಡಾಪರಿಕರಗಳನ್ನು ಸಂಗ್ರಹಿಸಿಕೊಂಡು, ಇತರ ಗೋಪಬಾಲಕರೊಡನೆ ನಾನಾವಿಧವಾದ ಆಟ ಗಳನ್ನಾಡುತ್ತ ಸಂತೋಷದಿಂದ ಕಾಲವನ್ನು ' ಕಳೆಯುತಿದ್ದರು. ಒಮ್ಮೆ ಕೊಳಲೂದುವುದು! ಮತ್ತೊಮ್ಮೆ ಕಾಡುಹಣ್ಣುಗಳನ್ನು ಕಿತ್ತು ಒಬ್ಬರಮೇ ಲೊಬ್ಬರು ಸ್ಪರ್ಧೆಯಿಂದ ಬಿಸುಡುವುದು! ಇನ್ನೊಮ್ಮೆ ಕಾಲುಗೆಜ್ಜೆಗಳ ಫು ರೈಲಧ್ವನಿಯೊಡನೆ ಕುಣಿದಾಡುವುದು ! ಮತ್ತೊಮ್ಮೆ ಕರಿಕಂಬಳಿಗಳನ್ನು ಮೈಗೆ ಮುಚ್ಚಿಕೊಂಡು, ಹಸುಗಳಂತೆ ಕೈ ಕಾಲುಗಳನ್ನೂರಿ ನಡೆಯುತ್ತ 114 B