ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೧೦ ಶ್ರೀಮದ್ಭಾಗವತವು [ಅಧ್ಯಾ. ೧೧, ಒಬ್ಬರನ್ನೊಬ್ಬರು ತಿವಿಯುವುದು! ಎತ್ತುಗಳಂತೆ ಗುಟುರುಹಾಕುವುದು! ಮತ್ತೊಮ್ಮೆ ಕಾಡುಹಕ್ಕಿಗಳಂತೆಯೂ, ಕಾಡುಮೃಗಗಳಂತೆಯೂ ಬೇರೆಬೇರೆ ಧ್ವನಿಯಿಂದ ಕೂಗುವುದು. ಹೀಗೆ ನಾನಾವಿನೋದಗಳಿಂದ ಸಾಮಾನ್ಯ ಬಾ ಲಕರಂತೆ ಕ್ರಿಡಿಸುತಿದ್ದರು. ಓ ರಾಜಾ ! ಹೀರುವಾಗ ಒಮ್ಮೆ, ರಾಮಕೃಷ್ಣರಿಬ್ಬರೂ ತಮ್ಮ ಸಂಗಡಿಗರಾದ ಬೇರೆ ಕೆಲವು ಗೊಲ್ಲಹುಡುಗರೊಡನೆ ಯಮುನಾತೀರದಲ್ಲಿ ದ ನಗಳನ್ನು ಮೇಯಿಸುತ್ತಿದ್ದ.ಸಮಯದಲ್ಲಿ ಕಂಸನಿಂದ ಪ್ರೇರಿತನಾದ ಒಬ್ಯಾ ನೊಬ್ಬ ರಾಕ್ಷಸನು, ಒಂದು ಕರುವಿನ ಆಕಾರದಿಂದ ಮಂದೆಯಲ್ಲಿ ಸೇರಿಕೊಂ ಡನು. ಸತ್ವಜ್ಞನಾದ ಕೃಷ್ಣನು ಒಡನೆಯೇ ಈ ಸಂಗತಿಯನ್ನು ತಿಳಿದು. ಬಲರಾಮನೊಡನೆ ಆ ಅಸುರನಿದ್ದ ಸ್ಥಳಕ್ಕೆ ಬಂದು, ( ಅಣ್ಣಾ! ಈ ಕ ರುವನ್ನು ನೋಡು !” ಎಂದು ಅದರ ರೂಪವನ್ನು ವರ್ಣಿಸುತ್ತ, ಏನೂ ತಿಳಿಯದವನಂತೆ ಮೆಲ್ಲಗೆ ಬಂದು ಅದರ ಹಿಂದೆ ನಿಂತನು. ಆ ಕರುವು ತನ್ನ ಮೇಲೆ ಹಾರುವುದಕ್ಕೆ ಯತ್ನಿಸುವ ಸಂಚನ್ನು ತಿಳಿದು, ತಟ್ಟನೆ ಅದರ ಬಾಲ ವನ್ನೂ, ಹಿಂದಿನ ಕಾಲುಗಳೆರಡನ್ನೂ ಒಂದಾಗಿ ಸೇರಿಸಿ ಹಿಡಿದು, ಒಂದೇ ಕೈಯಿಂದ ಮೇಲಕ್ಕೆತ್ತಿ, ಗಿರಗಿರನೆ ತಿರುಗಿಸಿದನು. ಹೀಗೆ ತಿರುಗಿಸುವಾಗಲೇ ಆ ವತ್ಯಾಸುರನಿಗೆ ಉಸಿರಾಟವು ನಿಂತುಹೋಗಿ ಅವನು ಮೃತನಾದನು. ಆಗ ಕೃಷ್ಣನು ತನ್ನ ಕೈಯಲ್ಲಿದ್ದ ಆ ಮೃತಶರೀರವನ್ನು ಸಮೀಪದಲ್ಲಿದ್ದ ಒಂ ದಾನೊಂದು ಬೇಲದ ಮರದಮೇಲಕ್ಕೆ ಗುರಿಯಿಟ್ಟು ಬೀಸಿದನು. ಆಗ ಆ ಮರ ದಿಂದ ಬೇಕಾದಷ್ಟು ಹಣ್ಣುಗಳು ಉದಿರಿದುದಲ್ಲದೆ, ಆ ಹಣ್ಣುಗಳೊಡನೆ ಭಯಂಕರವಾದ ಆ ರಾಕ್ಷಸದೇಹವೂ ಕೆಳಗೆ ಬಿದ್ದಿತು. ಇದನ್ನು ನೋಡಿ ಅಲ್ಲಿದ್ದ ಬಾಲಕರೆಲ್ಲರೂ ಆಶ್ಚರದಿಂದ ಬೆರಗಾಗಿ (ಭಲೆ!ಭಲೆ” ಎಂದುಕೃಷ್ಣ ನನ್ನು ಕೊಂಡಾಡುತ್ತಿದ್ದರು. ದೇವತೆಗಳು ಈ ರಾಕ್ಷಸವದರಿಂದತಮಗುಂಟಾ ದಸಂತೋಷಕ್ಕೆ ಸೂಚಕವಾಗಿ ಕೃಷ್ಣನಮೇಲೆ ಪುಷ್ಪವರ್ಷವನ್ನು ಕರೆದರು. ++ ಬಕಾಸುರ ವಧವು. ww ಓ ಪರೀಕ್ಷಿದ್ರಾಜಾ ! ಆ ರಾಮಕೃಷ್ಣರಿಬ್ಬರೂ, ಸಮಸ್ತಲೋಕಗ ಳಿಗೂ ತಾವೇ ಪಾಲಕರಾಗಿದ್ದರೂ, ಗೊಲ್ಲರೊಡನೆ ತಾವೂ ಗೊಲ್ಲರಾಗಿ, ಬೆ