೧೮೧೧ ಅಧ್ಯಾ. ೧೧.] - ದಶಮಸ್ಕಂಧವು. ಳಿಗೆ ತಂಗಳೂಟವನ್ನು ಂಡು ದನಗಳನ್ನು ಕಾಯುತ್ತ, ಕಾಡುಕಾಡಾಗಿ ತಿರುಗುತಿದ್ದರು. ಹೀಗೆ 'ಗೋಪಾಲಬಾಲಕರೆಲ್ಲರೂ, ದನಗಳನ್ನು , ಮೇ ಯಿಸುತ್ತ, ಒಮ್ಮೆ ದಾಹದಿಂದ ನೀರುಕುಡಿಯುವುದಕ್ಕಾಗಿ ಯಮು ನಾನದಿಯ ಮಡುವಿಗೆ ಬಂದರು, ಅಲ್ಲಿ ತನ್ನ ಹಸುಗಳಿಗೆ ನೀರನ್ನು ಕುಡಿಸಿ, ತಾವೂ ಬಾಹಶಾಂತಿಯನ್ನು ಮಾಡಿಕೊಂಡು ವಿನೋದದಿಂದಿರುವಾಗ, ಆ ಮಡುವಿನ ದಡದಲ್ಲಿ, ವಜಾಹತವಾಗಿ ಮುರಿದುಬಿದ್ದ ಪ್ರತಶಿಖ ರದಂತೆ ಮಹಾದೇಹವುಳ್ಳ ಒಂದಾನೊಂದು ಬಕಪಕ್ಷಿಯು ಗ೦ಚ • ಬಿಸಿತು. ಓ ರಾಜೇಂದ್ರಾ! ಇದನ್ನು ಸಾಮಾನ್ಯಪಕ್ಷಿಯೆಂದು ತಿಳಿಯಬೇಡ! ಕೃಷ್ಣನನ್ನು ಕೊಲ್ಲಬೇಕೆಂಬ ಉದ್ದೇಶದಿಂದ ಒಬ್ಬರಾಕ್ಷಸನೇ ಈ ಆಕಾರ ದಿಂದ ಆರ್ಭಟಿಸಿ ಕೂಗುತ್ತ, ನೆಟ್ಟಗೆ ಆ ಕೃಷ್ಣಸಿದಕಡೆಗೆ ಬಂದು, ತೀಕ್ಷವಾದ ತನ್ನ ಕೊಕ್ಕಿನಿಂದ ಆ ಕೃಷ್ಣನನ್ನು ನುಂಗುವದಕ್ಕೆ ಬಾಯಿ ಕ್ಕಿದನು. ಇತರಬಾಲಕರಿಲ್ಲರೂ ಕ್ಷ:ಾತ್ರವ5ುಗೆ ಕೃಷ್ಣನನ್ನು ಕಾಣದೆ ಪ್ರಾಣವಿಲ್ಲದ ಇಂದ್ರಿಯಗಳಂತೆ ಏನೊಂದೂ ತೋರದೆ ಭಯದಿಂದಲೂ, ದುಃಖದಿಂದಲೂ ಬೆರಗಾಗಿರು ಸತ್ವಲೋಕ ಜನಕನಾದ ಬ್ರಹ್ಮನಿಗೂ ತಾನು ಜನಕನೆನಿಸಿಕೊಂಡ ಕೃಷ್ಣನನ್ನು ಕೊಲ್ಲ ಬೇಕೆಂದರೆ ಆ ಬಕಾಸುರನಿಗೆ ಸಾಧ್ಯವೆ ? ಕೃಷ್ಣನನ್ನು ಕೊಕ್ಕಿನಿಂದ ಹಿಡಿ ದಾಗಲೇ ಅವನ ತೇಜಸ್ಸು, ಬಕಾಸುರನ ದವಡೆಗಳೆರಡನ್ನೂ, ಬೆಂಕಿ ಯಂತೆ ದಹಿಸಲಾರಂಭಿಸಿತು ಒಡನೆಯೇ ಆ ಬಕಾಸುರನು ಆ ಕೃಷ್ಣನನ್ನು ನುಂಗಲಾರದೆ ಹೊರಕ್ಕೆ ಕಕ್ಕಿಬಿಟ್ಟನು. ತನ್ನ ಪ್ರಯತ್ನವು ವಿಫಲವಾದು ದಕ್ಕಾಗಿ ಬಕನು, ಮಿತಿಮೀರಿದ ಕೋಪದಿಂದ ಆ ಕೃಷ್ಣನನ್ನು ಕುಕ್ಕಿಕೊಲ್ಲಬೇಕೆಂದು ತಿರುಗಿ ಮೇಲೆ ಬಿದ್ದು ಬರುತಿದ್ದನು ಇದನ್ನು ನೋಡಿ ಕೃಷ್ಣನು, ಕಂಸನಿಗೆ ಸಖನಾದ ಆ ರಾಕ್ಷಸನನ್ನು ಹುಂಕಾರದಿಂದ ಗದರಿ ಸುತ್ತ, ಮುಂದೆಬಂದು, ತನ್ನ ಸಂಹಡಿಗರಾದ ಬಾಲಕರೆಲ್ಲರೂ ನೋಡುತ್ತ ರುವಹಾಗೆಯೇ, ಅವನ ಕೊಕ್ಕುಗಳನ್ನು ಹಿಡಿದು, ಕಾಲಿಂದ ಮೆಟ್ಟಿಕೊಂಡು ಹಂಚಿಯಕಡ್ಡಿಯನ್ನು ಸೀಳುವಂತೆ ಎರಡು ತುಂಡಾಗಿ ಸೀಳಿಬಿಟ್ಟನು. ಈ ರಾಕ್ಷಸವಧವನ್ನು ನೋಡಿ ದೇವತೆಗಳೆಲ್ಲರೂ ಕೃಷ್ಣನಮೇಲೆ, ನಂದವನ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೨೫
ಗೋಚರ