ಅಧ್ಯಾ. ೧೨.] ದಶಮಸ್ಕಂಧವು. ೧೮೧ ವಾದ ದುಃಖಗಳೊಂದನ್ನೂ ತಿಳಿಯದೆ,ಮುಕ್ತಿದಶೆಯಲ್ಲಿರುವಂತೆ ನಿತ್ಯ ಸುಖಿಗಳಾಗಿದ್ದರು. ಓಪರೀಕ್ಷಿದ್ರಾಜಾ ! ರಾಮಕೃಷ್ಣರಿಬ್ಬರೂ ಹೀಗೆ ನಾ ನಾವಿಧವಾಗಿ ತಮ್ಮ ಸಾಮಥ್ಯವನ್ನು ತೋರಿಸುವುದರಿಂದಲೂ, ಮನೆಕ ಟ್ಯುವುದು, ಸೇತುವೆಗಳನ್ನು ಕಟ್ಟುವುದು,ಕೋತಿಗಳಂತೆ ಹಾರುವುದು, ಇವೇ ಮೊದಲಾದ ಆಟಪಾಟಗಳಿಂದಲೂ ತಮ್ಮ ಕೌಮಾರಾವಸ್ಥೆಯನ್ನು ಕಳೆದ ರು. ಇದು ಹನ್ನೊಂದನೆಯ ಅಧ್ಯಾಯವು. + ಅಘಾಸುರಸಂಹಾರವು.++- - ರಾಜಾ! ಕೇಳು ! ಮತ್ತೊಮ್ಮೆ ಕೃಷ್ಣನು, ಬೆಳಿಗ್ಗೆ ಎದ್ದು ತನ್ನ ಸಂಗ ಡಿಗರಾದ ಗೋಪಬಾಲಕರನ್ನೂ ಎಬ್ಬಿಸಿಕೊಂಡು, ತಾವೆಲ್ಲರೂ ಸೇರಿ ವನಭೋಜನವನ್ನು ಮಾಡಬೇಕೆಂದು ಪ್ರೋತ್ಸಾಹಿಸಿದನು.ಎಲ್ಲರೂ ಆಹಾರ ಸಾಮಗ್ರಿಗಳನ್ನೂ,ಕೊಂಬು,ಕಲ್ಲಿ ದೊಣ್ಣೆ ಮುಂತಾದುವುಗಳನ್ನೂ ಸೇರಿಸಿ ಕೊಂಡು, ಕರುಗಳನ್ನು ಮುಂದೆ ಬಿಟ್ಟುಕೊಂಡು, ಉತ್ಸಾಹದಿಂದ ಕೊಂಬು ಗಳನ್ನೂ ದುತ್ತ ಹೊರಟರು. ಅಲ್ಲಲ್ಲಿ ಸೊಂಪಾಗಿಬೆಳೆದ ಹುಲ್ಲಿನ ಮೈದಾನಗ ರಲ್ಲಿ ಕರುಗಳನ್ನು ಮೇಯುವುದಕ್ಕೆ ಬಿಟ್ಟು, ತಮತಮಗೆ ತೋರಿದ ಆಟಪಾಟಗ ಳಿಂದ ವಿಹರಿಸುತ್ತಿದ್ದರು. ಈ ಬಾಲಕರೆಲ್ಲರೂ ಕೆಂಪ, ವಜ್ರ, ಮೊದಲಾದ ರತ್ನಾಭರಣಗಳಿಂದಲೂ,ಸುವರ್ಣಭೂಷಣಗಳಿಂದಲೂ ಅಲಂಕೃತರಾಗಿ ಬಂ ದಿದ್ದರೂ, ಕಾಡಿನಲ್ಲಿ ಬೆಳೆದ,ಎಲೆ,ಚಿಗುರು, ಹಣ್ಣು, ಹೂಗೊಂಚಲು, ಕರೀಮ ಣ, ಗುಲಗಂಜಿ ಮೊದಲಾದುವುಗಳಿಂದಲೂ, ಆರಿದಳ ಮೊದಲಾದ ಗೈರಿಕ ಧಾತುಗಳಿಂದಲೂ, ಚಿತ್ರವಿಚಿತ್ರಗಳಾದ ಭೂಷಣಗಳನ್ನು ಮಾಡಿ, ಅವು ಗಳಿಂದ ತಮ್ಮ ದೇಹವನ್ನಲಂಕರಿಸಿಕೊಳ್ಳುತಿದ್ದರು. ಆ ಬಾಲಕರ ಆಟಪಾ ಟಗಳನ್ನು ಕೇಳಬೇಕ? ಒಬ್ಬನ ಕಲ್ಲಿ, ಕವಣೆ, ಮುಂತಾದ ವಸ್ತುಗಳನ್ನು ಮ ತೊಬ್ಬನು ಬಚಿ ಡುವುದು! ಸ್ವಂತಗಾರನು ಅದನ್ನು ಕಂಡುಹಿಡಿಯಬಹು ಬಹುದಾದ ಸಂದರ್ಭದಲ್ಲಿ, ಮತ್ತೊಬ್ಬನು ಹಿಂದಿನಿಂದ ಅದನ್ನು ಅವ ನಿಗೆ ತಿಳಿಯದಂತೆ ಅವನಹಿಂದೆ ಬಿಸಾಡುವುದು! ಆ ಸ್ವಂತಗಾರನು ಆ ದನ್ನು ಕೈಗೆತ್ತಿಕೊಳ್ಳುವಷ್ಟರಲ್ಲಿ,ಸಮೀಪದಲ್ಲಿದ್ದ ಮತ್ತೊಬ್ಬನು, ಅದನ್ನೆತ್ತಿ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೨೬
ಗೋಚರ