ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೧೪ ಶ್ರೀಮದ್ಭಾಗವತವು [ಅಧ್ಯಾ. ೧೦ ದೂರಕ್ಕೆಸೆಯುವುದು ! ಕೃಷ್ಣನು ವನವನ್ನು ನೋಡಿಬರುವುದಕ್ಕಾಗಿ ದೂರಕ್ಕೆ ಹೋಗಿದ್ದ ಸಂದರ್ಭದಲ್ಲಿ, ಅವನನ್ನು ಮುಟ್ಟುವುದಕ್ಕಾಗಿ ನಾನು ಮೊದಲು! ತಾನು ಮೊದಲೆಂದು ಹಟದಿಂದ ಓಡುವುದು! ಮೊದಲು ಕೃಷ್ಣನನ್ನು ಮುಟ್ಟಿದವರು ಸಂತೋಷದಿಂದ , ಕೇಕೆಹಾಕುವುದು! ಕೆಲವರು ಕೊಳಲೂದುತ್ತಿರುವುದು! ಕೆಲವರು ಕೊಂಬುಗಳನ್ನೂ ದು ವುದು! ಮತ್ತೆ ಕೆಲವರು ಭ್ರಮರಝಂಕಾರವನ್ನೇ ಶ್ರುತಿಯಾಗಿಟ್ಟುಕೊಂ ಡು ಹಾಡುತ್ತಿರುವುದು! ಕೋಗಿಲೆಗಳೊಡನೆ ಕೂಗುವುದು! ಆಕಾಶದಲ್ಲಿ ಹಕ್ಕಿಗಳು ಹಾರಾಡುವಾಗ, ಅವುಗಳ ನೆಳಲನ್ನು ಹಿಡಿದು ಓಡುವುದು! ನಡೆ ಯುವ ಹಂಸಗಳೊಡನೆ ಮಂದಗನದಿಂದ ನಡೆಯುವುದು! ಬಕಪಕ್ಷಿಗಳೊಡನೆ ಅವುಗಳಂತೆಯೇ ನಿಶ್ಚಲವಾಗಿ ಕುಳಿತಿರುವುದು! ಕುಣಿಯುವ ನವಿಲುಗಳೊಡನೆ ಕುಣಿದಾಡುವುದು! ಕಪಿಗಳ ಬಾಲವನ್ನೆಳೆಯುವುದು! ಆ ಬಾಲವನ್ನು ಹಿಡಿದು ಅದರ ಆಧಾರದಿಂದಲೇ ಮರಕ್ಕೇರುವುದು! ಕಪಿಗಳಂತೆ ವಿಕೃತಚೇ ಪೈಗಳನ್ನು ಮಾಡುವುದು! ಮರವನ್ನೇರಿ ಕೊಂಬೆಗಳಿಂದ ಕೊಂಬೆಗಳಿಗೆ ಹಾರುವುದು! ಕಪ್ಪೆಗಳೊಡನೆ ಕುಪ್ಪವುದು! ನೀರಿನಲ್ಲಿ ಮುಳುಗಾಡುವು ದು! ಜಲದಲ್ಲಿ ಒಬ್ಬರ ಪ್ರತಿಬಿಂಬವನ್ನು ನೋಡಿ ಮತ್ತೊಬ್ಬರು ಹಾಸ್ಯಮಾ ಡುವುದು! ಪ್ರತಿಧ್ವನಿಗಳನ್ನು ಕೇಳಿ ಅವುಗಳೊಡನೆ ಜಗಳವಾಡುವಂತೆ ಬೈ ಯುವುದು! ಹೀಗೆ ಆ ಗೋಪಬಾಲಕರೆಲ್ಲರೂ ರಾಮಕೃಷ್ಣರೊಡನೆ ಉಲ್ಲಾ ಸದಿಂದ ವಿಹರಿಸುತಿದ್ದರು! ಓ ಪರೀಕ್ಷಿದ್ರಾಜಾ! ಈ ಗೊಲ್ಲರ ಮಕ್ಕಳ ಭಾಗ್ಯ ವಲ್ಲವೇ ಭಾಗ್ಯವು! ಬ್ರಹ್ಮಾನಂದಾನುಭವದಿಂದ ಸಂತುಷ್ಟರಾದ ಸಾಧುಗಳಿಗೆ ತಾನೇ ಪರದೈವವೆನಿಸಿಕೊಂಡಿದ್ದರೂ, ಪ್ರಕೃತಿಬದ್ದರಾದ ವರಿಗೆ ಸಾಮಾಮನುಷಬಾಲಕನಂತೆ ತೋರುತಿ ರುವ ಆ ಶಿಕ್ಷ ಇನೊಡಗೂಡಿ, ಸಂತೋಷದಿಂದ ವಿಹರಿಸುತ್ತಿದ್ದ ಆ ಗೋಪಬಾಲಕರ ಪುಣ್ಯವಿಶೇಷವನ್ನು ಎಷ್ಟೆಂದು ಹೇಳಬಹುದು! ಅನೇಕಜನ್ಮಗಳ ವರೆಗೆ ದೇಹಶೋಷಣಾದಿಗಳಿಂದ ಅತಿ ಕಷ್ಯವ್ರತಗಳನ್ನು ನಡೆಸಿ, ಅದ ರಿಂದ ತಮ್ಮ ಮನಃಕಾಲುಷ್ಯವನ್ನು ನೀಗಿದ ಮಹಾಯೋಗಿಗಳಿಗೂಕೂಡ, ಯಾವನ ಪಾದಧೂಳಿಯು ದುರ್ಲಭವೆನಿಸಿರುವುದೋ, ಅಂತಹ ಪರಮ