೧೮೧೫ ಅಧ್ಯಾ. ೧೨.] ದಶಮಸ್ಕಂಧವು. ಪುರುಷನೊಡನೆ ಆಟವಾಡುತ್ತ, ಅನವರತವೂ ಅವನನ್ನು ತಮ್ಮ ಕಣ್ಣಾರೆ ನೋಡುತ್ತಿರುವ ಆ ಗೋಪಬಾಲಕರ ಭಾಗ್ಯವಿಶೇಷವನ್ನು ಎಂದು ಹೇಳಬಹುದು! ರಾಜೇಂದ್ರಾ ! ಹೀಗೆ ಆ ಗೋಪಬಾಲಕರೆಲ್ಲರೂ ಸಂತೋಷದಿಂದ ಸುತ್ತುತ್ತಿರುವಾಗ, ಮುಂದೆ ಭಯಂಕರವಾದ ಒಂದಾನೊಂದು ಹೆಬ್ಬಾ ವು ಕಾಣಿಸಿಕೊಂಡಿತು. ರಾಜಾ ! ಇದನ್ನು ಸಾಮಾನ್ಯವಾದ ಹಾವೆಂ ದು ತಿಳಿಯಬೇಡ ! ಇವನೊಬ್ಬ ರಾಕ್ಷಸನು! ಇವನಿಗೆ ಅಭೂಸುರನೆಂದು ಹೆಸರು. ದೇವತೆಗಳು ಅಮೃತಪಾನದಿಂದ ಮರಣಭಯವಿಲ್ಲದವರಾಗಿದ್ದರೂ, ಈ ರಾಕ್ಷಸನನ್ನು ಸ್ಮರಿಸಿದಮಾತ್ರಕ್ಕೆ ಮರಣಭಯದಿಂದ ತತ್ತಳಿಸುತ್ತ, ಆ ನೀಚನ ಸಾವನ್ನೇ ಇಡಿರುನೋಡುತ್ತಿದ್ದರು. ಆತನು ಹಿಂದೆ ಹೇಳಿದ ಬಕಾಸು ರನಿಗೂ, ಅವನ ತಂಗಿಯಾದ ಬಕಿಯೆಂಬ ರಾಕ್ಷಸಿಗೂ ಒಡಹುಟ್ಟಿದ ತ ಮೃನು. ಲೋಕಭಯಂಕರನಾದ ಈ ರಾಕ್ಷಸನು, ಕಂಸನಿಂದ ಪ್ರೇರಿತನಾಗಿ ಕೃಷ್ಣನನ್ನು ಕೊಲ್ಲುವುದಕ್ಕಾಗಿಯೇ ಬಂದವನು. ಆ ವನದಲ್ಲಿ ಅನೇಕ ಗೋಪಾಲಕರೊಡನೆ, ಬಲರಾಮಕೃಷ್ಣರಿಬ್ಬರೂ ಸಂತೋಷದಿಂದ ಅಜವಾಡುತ್ತಿರುವುದನ್ನು ಕಂಡು, ಸಹಿಸಲಾರದ ಕೋಪದಿಂದ ಮುಂದೆಬಂ ದನು. ಆ ಗೋಪಬಾಲಕರ ನಡುವೆ ವ್ಯತೇಜಸ್ಸಿನಿಂದ ಬೆಳಗುತ್ತಿದ್ದ ರಾಮ ಕೃಷ್ಣರನ್ನು ನೋಡಿ ಆ ರಾಕ್ಷನಿಗೆ ಮಿತಿಮೀರಿದ ಕೋಪವುಂಟಾ ಯಿತು. ಅದರಲ್ಲಿಯೂ ಮುಖ್ಯವಾಗಿ ಕೃಷ್ಣನನ್ನು ಕಂಡಾಗ ಆ ರಾಕ್ಷಸನು << ಆಹಾ ! ಈ ಬಾಲಕನಲ್ಲವೇ ನನ್ನ ಸಹೋದರನಾದ ಬಕನನ್ನು ಕೊಂದವನು ! ಮೊದಲು ಇವನನ್ನು ತೀರಿಸಿಬಿಡಬೇಕು! ಆಮೇಲೆ ಬಲ ರಾಮನನೂ ಇತರಬಾಲಕರನ್ನೂ ಫಲಸಮಾಡುವೆನು. ಇವರರೆಲ್ಲರ ರಕ ದಿಂದಲೇ ನೆಣ್ಣಣ್ಣಸಿಗೆ ತಿಲತರ್ಪಣವನ್ನು ಬಿಡುವೆನು!ಮೊದಲು ಈ ಮಕ್ಕಳ ನ್ನು ಕೊಂದುಬಿಟ್ಟರೆ,ಗೋಕುಲದಲ್ಲಿರುವ ಗೊಲ್ಲರೆಲ್ಲರನ್ನೂ ಕೊಂದಂತೆಯೇ ? ಆಗುವುದು. ಲೋಕದಲ್ಲಿ ಜನರಿಗೆ ತಮ್ಮ ತಮ್ಮ ಪುತ್ರರೇ ಪ್ರಾಣಸಮಾನ ರಾಗಿರುವರು.ಪ್ರಾಣವು ಹೋದಮೇಲೆ ಮೃತಶರೀರವು ಯಾವ ಕೆಲಸಕ್ಕೆ ಬರುವುದು. ? ಆದುದರಿಂದ ಈ ಬಾಲಕರನ್ನು ಕೊಂದಮೇಲೆ,ಗೊಲ್ಲರೆಲ್ಲರೂ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೨೯
ಗೋಚರ