ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ. ೧೨.] ದಶಮಸ್ಕಂಥವು. ೧೮೧ ಗಳಿಗೆ ಪಕ್ಕದಲ್ಲಿರುವ ಈ ಪರತಶಿಖರಗಳೆರಡೂ, ಅದರ ಕೋರೆ ಹಲ್ಲುಗಳಂ ತಿರುವುವು. ಮುಂದೆ ಕಾಣುವ ವಿಶಾಲವಾದ ಈ ರಾಜಮಾರ್ಗವು ಅದರ ನಾಲಗೆಯಂತೆ ಕಾಣುವುದಲ್ಲವೆ ? ಈ ಪಕ್ವತಶಿಖರಗಳ ನಡುವೆ ಕಾಣುವ ಈ ತಲೆಯು, ಅದರ ಬಾಯಿಯ ಒಳಭಾಗದಂತೆ ತೋರುವುದು. ಕಾಡುಗಿಚ್ಚಿನ ಸಂಬಂಧದಿಂದ ಉಗ್ರವಾಗಿಬೀಸುವ ಈ ಬಿರುಗಾಳಿಯನ್ನು ಅದರ ಉಸಿರಾ ಟಕ್ಕೆ ಹೋಲಿಸಬಹುದು ! ಅತ್ತಲಾಗಿ ಕಾಡುಗಿಚ್ ನಲ್ಲಿ ಸಿಕ್ಕಿ ಬೆಂದ ಪ್ರಾಣಿಗಳ ದುರ್ಗಂಧವು, ಆ ಜಂತುವಿನ ಬಾಯಿಂದ ಹೊರಟುಬರುವ ದು ರ್ಗಂಧವೋ ಎಂಬಂತಿರುವುದು. ಸರೂವಿಧದಲ್ಲಿಯೂ ಈ ವನಸನ್ನಿವೇಶವು ನಮ್ಮನ್ನು ನುಂಗುವುದಕ್ಕೆ ಬಾಯಿತೆರೆದಿರುವ ಒಂದು ದೊಡ್ಡ ಜಂತುವನ್ನೇ ಹೋಲುತ್ತಿರುವುದಲ್ಲಾ!ಅಥವಾ ಒಂದುವೇಳೆ ಇದು ನಿಜವಾದ ಜಂತುವೇ ಆಗಿದ್ದು, ನಮ್ಮನ್ನು ನುಂಗಿಬಿಟ್ಟರೆ ಗತಿಯೇನು? ಆಥವಾ ಇದಕ್ಕಾಗಿ ನಾವು ಚಿಂತಿಸಬಾರದು ಹಾಗೆ ನುಂಗಿದರೂ ನುಂಗಲಿ'ಹಿಂದೆ ಕೃಷ್ಣನನ್ನು ನುಂಗಿದ ಬಕದ ಗತಿಯೇ ಇದಕ್ಕೂ ಆಗುವುದರಲ್ಲಿ ಸಂದೇಹವಿಲ್ಲ! ಹೊರಡಿರಿ!” ಎಂದು ಒಬ್ಬರಿಗೊಬ್ಬರು ಕೃಷ್ಣನ ಮುಖವನ್ನು ನೋಡಿನೋಡಿ ನಗುತ್ತ, ಕೈಚಪ್ಪಾ ಳೆಗಳನ್ನು ಹಾಕಿ ಕುಣಿಯುತ್ತ ಮುಂದೆ ಹೊರಟರು, ಸತ್ವಜ್ಞನಾದ ಕೃಷ್ಣ ಮ, ಸಿಜಸ್ಥಿತಿಯನ್ನು ತಿಳಿಯದೆ ಹೀಗೆ ಜಂಭವನು ಕೇಳಿಕೊಳ್ಳುತ್ತಿರುವ ಆ ಗೋಪಬಾಲಕರನ್ನು ನೋಡಿ ನಗುತ್ತ, ಮುಂದಿರುವವನು ರಾಕ್ಷಸನೆಂಬುದನ್ನು ಅವರಿಗೆ ತಿಳಿಸಿ ನಿವಾರಿಸುವಷ್ಟರಲ್ಲಿ, ಆ ಅಜಗರವು ತನ್ನ ಉಸಿರನ್ನೆಳೆದುಕೊಂ ಡು, ಬಹಳಮಂದಿ ಗೋಪಾಲಕರನ್ನೂ, ಗೋವುಗಳನ್ನೂ ನುಂಗಿಬಿಟ್ಟಿತು. ಅವರೆಲ್ಲರೂ ತನ್ನ ಉದರಮಧ್ಯಕ್ಕೆ ಸೇರಿದ್ದಾಗಲೂ, ಆ ಆಫುಸುರನು, ತನ್ನ ಸಹೋದರನನ್ನು ಕೊಂದ ಕೃಷನೂ ತನ್ನ ಬಾಯಿಗೆ ಪ್ರವೇಶಿಸಿದಮೇಲೆ ಬಾಯನ್ನು ಮುಚ್ಚಿಕೊಂಡು, ತನ್ನಲ್ಲಿ ಹೊಕ್ಕವರೆಲ್ಲರನ್ನೂ ಒಂದಾಗಿ ಜೀ ರ್ಣಿಸಿಕೊಳ್ಳಬೇಕೆಂಬ ಆಸೆಯಿಂದ ಕಾದಿದನು . ಇಷ್ಟರಲ್ಲಿ ಸಮಸ್ತಲೋಕಾಭ ಸಪ್ರದನಾದ ಕೃಷ್ಣನು, ಕನಿಕರದಿಂದ ತನ್ನಲ್ಲಿ ತಾ ನು ಆಹಾ! ಈ ಬಾಲಕರೆಲ್ಲರೂ ನನ್ನನ್ನೇ ನಂಬಿ ಬಂದವರು ಈಗ ಇವರಿಗೆ ಬೇರೆ ದಿಕ್ಕಿಲ್ಲ. ಇವರು ಪ್ರಾರಬ್ಧ ಕರವಶದಿಂದ, ಈ ಮೃತ್ಯುವಿನ ಜಾಠ