ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮st ಅಧ್ಯಾ ೧೩.] ದಶಮಸ್ಕಂಧವು ಹಿಂದ ಭುಜಿಸುತ್ತಿದ್ದರು.ಓ ಪರೀಕ್ಷಿದ್ರಾಜಾ! ಆ ಸತ್ಯೇಶ್ವರನ ಲೀಲೆಯನ್ನೂ ಸೌಲಭ್ಯಗುಣವನ್ನೂ ನೋಡಿದೆಯಾ?ತಾನು ಮಹಾ ಯಾಗಗಳಲ್ಲಿ ಹವಿರ್ಭಾಗ ಗಳನ್ನು ಭಜಿಸತಕ್ಕವನಾಗಿದ್ದರೂ, ಗೊಲ್ಲಗೆ ಮಕ್ಕಳ ಗುಂಪಿನಲ್ಲಿ ಈ ನೂ ಒಬ್ಬ ಗೊಲ್ಲನಾಗಿ ಕಲೆತನ!ಅವನ ವೇಷವನ್ನು ಕೇಳಬೇಕೆ? ಊದುವ ಕೊಳಲ ನ್ನು ನಡುವಯಸ್ಲಿನಿಕ್ಕಿಸಿರುವನು!ಒಂದು ಕಕ್ಷವಲ್ಲಿ ದೊಣ್ಣೆ ಮತ್ತೊಂದು ಕಕ್ಷದಲ್ಲಿ ಊದುವಕೊಂಬು! ಎಡಗೈಯ್ಯಲ್ಲಿ ಮೊಸರನ್ನದ ಉಂಡೆ!ಬೆರಳುಗಳ ಸಂದಿನಲ್ಲಿ ಅದಕ್ಕೆ ನಂಜಿಕೊಳ್ಳವುದಕ್ಕಾಗಿ ಬೇಕಾದ ಉಪ್ಪಿನಕಾಯಿ! ಇಂತ ಹವೇಷದೊಡನೆ ಗೊಲ್ಲರ ಗುಂಪಿನ ನಡುವೆ ಕುಳಿತು ತನ್ನ ಚಾತುರದಮಾತು ಗಳಿಂದ ಕ್ಷಣಕ್ಷಣಕ್ಕೂ ಆ ಬಾಲಕರನ್ನು ನಗಿಸುತ್ತ, ಬಾಲಲೀಲೆಯನ್ನು ತೋರಿಸುತ್ತಿದ್ದನು ಈ ವಿಚಿತ್ರವೀಲೆಯನ್ನು ನೋಡುವುದಕ್ಕಾಗಿ ಸ್ವರ್ಗ ಲೋಕವೇ ಹೊರಟುಬಂದಂತೆ, ಆಕಾಶದಲ್ಲಿ ಅನೇಕ ದೇವತೆಗಳು ಗುಂಪ ಕೊಡಿಯರು. ಓ ಪಕ್ಷ ಬಾಜಾ! ಹೀಗೆ ಮಂದೆಯನ್ನಟ್ಟಿಕೊಂಡು ಬಂದ ಗೋಪಾಲಬಾಲಕರೆಲ್ಲರೂ ಆ ಕೃಷ್ಣನಲ್ಲಿಯೇ ನಟ್ಟ ಮನಸ್ಸುಳ್ಳವರಾಗಿ ಹೊತ್ತು ತಂದ ಅಳಯದ ಏಚದಿಂದ ಭೋಜನಮಾಡುತ್ತ ಮೈಮರೆತಿದ್ದರು. ಇಷ್ಟರಲ್ಲಿ ಇತ್ತಲಾಗಿ ಮೇಯುವುದಕ್ಕಾಗಿ ಬಿಟ್ಟಿದ್ದ ಕರುಗಳೆಲ್ಲವೂ, ಮುಂದೆ ಮುಂದೆ ಸೊಂಪಾಗಿ ಬೆಳೆದ ಹುಲ್ಲಿನ ಆಸೆಯಿಂದ ಆ ಕಾಡಿನಲ್ಲಿ ಬಹುದೂರದವರೆಗೆ ಹೊರಟುಹೋದುವು. ಆಮೇಲೆ ಈ ಬಾ ಅಕರೆಲ್ಲರಿಗೂ ತಮ್ಮ ಹಸುಗಳ ನೆನಪಂತಾಯಿತು! ಆ ಸರೋವರದಸು ತಿನ ಮೈದಾನದಲ್ಲಿ, ಬಹುದೂರದವರೆಗೂ ತಮ್ಮ ಹಸುಗಳು ಕಣ್ಣಿಗೆ ಬಿ ಳದಿರುವುದನ್ನು ನೋಡಿ, ಎಲ್ಲರಿಗೂ ಮನಸ್ಸಿನಲ್ಲಿ ಭಯವು ಹುಟ್ಟಿತು. ಹೀಗೆ ತನ್ನ ಸಂಗಡಿಗರೆಲ್ಲರೂ ಭಯಗ್ರಸ್ತರಾಗಿರುವುದನ್ನು ನೋಡಿ ಕೃಷ್ಣನು. ಅವರ ಭೀತಿಯನ್ನು ನೀಗಿಸುವುದಕ್ಕಾಗಿ ಹೀಗೆಂದು ಹೇಳುವನು. (ಎಲೈಮಿ ತ್ರರೆ! ಭಯಪಡಬೇಡಿ! ನೀವು ನಿಶ್ಚಿಂತರಾಗಿ ಭೋಜನವನ್ನು ಮಾಡುತ್ತಿರಿ! ಈಗಲೇ ನಾನು ಹೋಗಿ, ಎಲ್ಲಿದ್ದರೂ ಬಿಡದೆ ಮಂದೆಯನ್ನಟ್ಟಿಕೊಂಡು ಬರುವೆನು” ಎಂದು ಹೇಳಿ,ಕೈಯ್ಯಲ್ಲಿ ಅನ್ನದ ಮುದ್ದೆಯನ್ನು ಹಿಡಿದಹಾಗೆಯೇ ಅಲ್ಲಲ್ಲಿನ ಪರ್ವತಗಳಲ್ಲಿಯೂ, ಗುಹೆಗಳಲ್ಲಿಯೂ, ಸಣ್ಣ ಗವಿಗಳಲ್ಲಿಯೂ, ಕಮ