೧೮೨೪ ಶ್ರೀಮದ್ಭಾಗವತವು [ಅಧ್ಯಾ, ೧೩, ರಿಗಳಲ್ಲಿಯೂ, ಗಿಡದ ಪೊದರುಗಳಲ್ಲಿಯೂ ಕರುಗಳನ್ನು ಹುಡುಕಹೋ ದನು! ಓ ಪರೀಕ್ಷಿದ್ರಾಜಾ ? ನಿಜವಾಗಿಯೂ ಆ ಮಂದೆಯ ಕರುಗಳು ಹುಗ್ಗಿ ನಾಸೆಯಿಂದ ತಪ್ಪಿಸಿಕೊಂಡುಹೋದುವೆಂದು ತಿಳಿಯಬೇಡ! ಇದರಕಾರ ಣವೇ ಬೇರೆ ! ಹಿಂದೆ ಕೃಷ್ಣನು, ಅಭೂಸುರನೆಂಬ ಮಹಾಸರ್ಪದಿಂದ ನುಂಗಲ್ಪಟ್ಟಿದ್ದ ತನ್ನ ಕಡೆಯಬಾಲಕರನ್ನೂ, ಹಸುಗಳನ್ನೂ ಆ ಮೃತ್ಯುವಿ ನಿಂದ ತಪ್ಪಿಸಿ, ಆ ರಾಕ್ಷಸನನ್ನು ಕೊಂದಾಗ, ಚತುರುಮಿ ಬ್ರಹ್ಮನು ಬಂದು, ಆಕಾಶದಲ್ಲಿ ಆಶ್ಚರಭರಿತನಾಗಿ ನೋಡಿ ಹೊರಟುಹೋದನೆಂದು ಹೇಳಿದೆನಲ್ಲವೆ? ಆ ಚತುರು ಖಬ್ರಹ್ಮನೇ ಈಗ ಮಾಯಾಶಿಶುವಾಗಿರುವ ಆ ಕೃಷ್ಣ ಪರಮಾತ್ಮನ ಮಹಿಮೆಯನ್ನು ಮತ್ತೊಮ್ಮೆ ಪರೀಕ್ಷಿಸಬೇಕೆಂದು ದಕ್ಕಾಗಿ, ಆ ಹಸುಗಳನ್ನು ಬೇರೆಕಡೆಗೆ ಸಾಗಿಸಿ ಮರೆಸಿಟ್ಟನು. ಕೃಷ್ಣನು ಆ ವುಗಳನ್ನು ಹುಡುಕುವುದಕ್ಕಾಗಿ ಹೊರಟುಬಂದಮೇಲೆ,ಇತ್ತಲಾಗಿ ಭೋಜನ ಮಾಡುತ್ತಿದ್ದ ಬಾಲಕರನ್ನೂ ಬೇರೆಕಡೆಗೆ ಸಾಗಿಸಿಬಿಟ್ಟನು. ಕೃಷ್ಣನು ಆತ್ಮ ಲಾಗಿ ಕಾಡುಕಾಡಾಗಿ ಸುತ್ತಿ ಎಲ್ಲಿಯೂ ಒಂದು ಹಸುವನ್ನಾದರೂ ಕಾಣದೆ ಮೊದಲು ತಾನಿದ್ದ ಮಳಲಿನ ಮೈದಾನಕ್ಕೆ ಹಿಂತಿರುಗಿಬಂದನು. ಇಲ್ಲಿ ತನ್ನ ಸಂಗಡಿಗರನ್ನು ಕಾಣದೆ ಇವರನ್ನು ಹುಡುಕುವುದಕ್ಕಾಗಿ ತಿರುಗಿ ಹೊರಟನು. ಕಾಡುಕಾಡಾಗಿ ಸುತ್ತಿದನು. ಎಷ್ಟು ಸುತ್ತಿದರೇನು? ಎಲ್ಲೆಲ್ಲಿ ಹುಡುಕಿದರೂ ತನ್ನ ಹಸುಗಳನ್ನಾಗಲಿ, ತನ್ನ ಸ್ನೇಹಿತರನ್ನಾಗಲಿ ಯಾರನ್ನೂ ಕಾಣಲಿಲ್ಲ.ಓ ರಾಜೇಂದ್ರಾ! ತಾನಿದ್ದ ಕಡೆಯಲ್ಲಿಯೇ ಸಮಸ್ತಲೋಕವ್ಯಾಪಾರವನ್ನೂ ಏಕಕಾಲದಲ್ಲಿ ಕಂಡುಕೊಳ್ಳಬಲ್ಲ ಆ ಪರಮಪುರುಷನಿಗೆ, ಈ ಕಳವನ್ನು ಕಂ ಡುಹಿಡಿಯುವುದೊಂದು ಕಷ್ಟವೆ? ಒಡನೆಯೇ ಅವನ ಮನಸ್ಸಿಗೆ ಅದೆಲ್ಲವೂ ಬ್ರಹ್ಮನು ತನ್ನನ್ನು ಪರೀಕ್ಷಿಸುವುದಕ್ಕಾಗಿ ಮಾಡಿದ ಚೇಷ್ಟೆಯೆಂದು ತಿಳಿ ದುಹೋಯಿತು. ಆಗ ಕೃಷ್ಣನು ಅತ್ತಲಾಗಿ ತನ್ನನ್ನು ಪರೀಕ್ಷಿಸುವುಕ್ಕಾಗಿ ಬಂದ ಬ್ರಹ್ಮನಿಗೆ ತನ್ನ ಮಹಿಮೆಯನ್ನು ತಿಳಿಸಿ ಸಂತೋಷಪಡಿಸುವುದಕ್ಕೂ ಇತ್ತಲಾಗಿ ಮಂದೆಯನ್ನೂ,ಮಕ್ಕಳನ್ನೂ ಕಣದೆ ಗೋಕುಲದಲ್ಲಿರುವ ತಂದೆ ತಾಯಿಗಳು ದುಖಿಸದಿರುವುದಕ್ಕೂ ತಕ್ಕ ಉಪಾಯವೇನೆಂದಾಲೋಚಿಸಿ. ತಾನೇ, ದನಕರುಗಳಂತೆಯೂ, ಗೋಪಬಾಲಕರಂತೆಯೂ ಅನೇಕರೂಪಗ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೩೮
ಗೋಚರ