ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ಶ್ರೀಮದ್ಭಾಗವತವು [ಅಧ್ಯಾ. ೧೩. ತಾಳಿ, ಒಂದು ಸಂವತ್ಸರಕಾಲದವರೆಗೆ ದಿನದಿನವೂ ಕಾಲಕ್ರಮವನ್ನನು ಸರಿಸಿ, ಆಯಾಕೃತ್ಯಗಳನ್ನು ನಡೆಸುತ್ತ, ಹಗಲಿನ ನಾಲ್ಕುಜಾವಗಳನ್ನು ಕಾಡಿನಲ್ಲಿ ಕಳೆದು, ಸಾಯಂಕಾಲದಲ್ಲಿ ಮನೆಗೆ ಬರುತ್ತಿದ್ದನು. ಅಲ್ಲಿ ಮಕ್ಕಳ ರೂಪದಿಂದ, ತಂದೆತಾಯಿಗಳ ಕೈಯಲ್ಲಿ ಮೈಯೊತ್ತಿಸಿಕೊಳ್ಳು ವುದು, ಮನಮಾಡಿಸಿಕೊಳ್ಳುವುದು, ಸ್ಪಷ್ಟ, ಚಂದನ, ತಿಲಕ, ಅಂಜನ ಮೊದಲಾದ ಅಲಂಕಾರಗಳನ್ನಿಡಿಸಿಕೊಳ್ಳುವುದು, ತನ್ನ ಆಟಪಾಟಗಳಿಂ ದ ಅವರ ಮನಸ್ಸನ್ನು ಸಂತೋಷಗೊಳಿಸುವುದು, ಇವೇ ಮೊದಲಾದ ಶ್ರೀ ಲೆಗಳನ್ನೂ ತೋರಿಸುವನು. ಹಾಗೆಯೇ ಮಂಡೆಯ ಕರುಗಳಂತೆ ಸಾಯಂ ಕಾಲದಲ್ಲಿ ಅವರವರ ಮನೆಗೆ ಬಂದಾಗ, ಕೊಟ್ಟಿಗೆಯಲ್ಲಿದ್ದ ಹಸುಗಳು, 04 ಅಂಬೇ” ಎಂದು ಧ್ವನಿಯನ್ನು ತೋರಿಸುತ್ತ. ಆ ಕರುಗಳನ್ನು ಕಂಡ ಡನೆ, ಬಾಲವನ್ನೂ , ಕಿವಿಯನ್ನೂ ನೆಟ್ಟಗೆ ನಿಗುರಿಸಿ, ಪ್ರೇಮದಿಂದ ನಕ್ಕು ವುವು ! ಅವುಗಳಿಗೆ ಮೊಲೆಕುಡಿಸುವುವು. ಹೀಗೆ ಕೃಷ್ಣನು ತಾನೊಬ್ಬನೇ ಅವರವರ ಮಂದೆಯ ಕರುಗಳಂತೆಯೂ, ಗೊಲ್ಲರಂತೆಯೂ ಅನುಕರಿಸು ತಿದ್ದನು. ಓ ರಾಜಾ! ಆ ಬೃಂದಾವನದಲ್ಲಿದ್ದ ಗೋಗೋಪಾಲಕರಲ್ಲಿಯೂ, ಕೃ ಪ_ನು ತೋರಿಸಿದ ಈ ಕಪಟಾಕೃತಿಗಳಲ್ಲಿಯೂ ಅನ್ನೋನ್ಯವಾಗಿದ್ದ ಪ ತ್ರಪ್ರೇಮವೂ, ಪಿತೃವಾತ್ಸಲ್ಯವೂ ಮೊದಲಿನಂತೆಯೇ ಇದ್ದುವು. ಆದರೆ ಗೋಪಿಯರಿಗೆ ಈ ಕೃಷ್ಣನ ಕಪಟಾಕೃತಿಗಳಲ್ಲಿದ್ದ ಸ್ನೇಹವು, ಸಾಕ್ಷಾತ್ತಾ ಗಿ ಕೃಷ್ಣನನ್ನು ನೋಡಿದಾಗ ಅವರಿಗುಂಟಾಗುತ್ತಿದ್ದ ಅಪೂಲ್ಯವಾದ ಪ್ರೇ ಮಾತಿಶಯದಂತಿರಲಿಲ್ಲ. ಕೃಷ್ಣನು ಈ ಕಪಟಾಕೃತಿಗಳಿಂದ ತೋರಿಸುತಿ ಮಾತೃಸ್ನೇಹವೂಕೂಡ, ಪ್ರಾಕೃತಶಿಶುಗಳಿಗಿರುವಂತೆ ಅವರು ತನ್ನ ನ್ನು ಹರದವರು, ತಾನು ಅವರ ಮಗನು” ಎಂಬ ಮಾಯಾಜನ್ಯವಾದ ಮೋಹವಾಗಿರಲಿಲ್ಲ. ಇದುಹೊರತು ಬೇರೆ ಯಾವವಿಧದಲ್ಲಿಯೂ ವ್ಯತ್ಯಾಸ ವಿಲ್ಲ. ಗೋಪಾಲಕರಿಗೆ ಕೃಷ್ಣನಲ್ಲಿ ಮೊದಲೇ ತಮ್ಮ ಮಕ್ಕಳಲ್ಲಿರುವುದ ಕ್ಕಿಂತಲೂ ಹೆಚ್ಚು ಪ್ರೀತಿಯಿದ್ದಿತು. ಈಗ ಆ ಕೃಷ್ಣನೇ ಅವರವರ ಮಕ್ಕ ಳಾಗಿಯೂ ತೋರುತ್ತಿದ್ದುದರಿಂದ, ಆ ಪತ್ರವಾತ್ಸಲ್ಯವೂ ಕಲೆತು, ಆ ಪೈ