ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ ಶ್ರೀಮದ್ಭಾಗವತವು [ಅಧ್ಯಾ, ೧೩ ಆ ಕರುಗಳನ್ನು ಕಾಯುತ್ತಿದ್ದ ಗೋಪಬಾಲಕರೂ, ತನ್ನ ತೇಜಸ್ಸಿನಿಂದಲೇ ಸಮಸ್ತ ಪ್ರಪಂಚವನ್ನೂ ಬೆಳಗಿಸತಕ್ಕ ಸಾಕ್ಷಾತ್ಪರಬ್ರಹ್ಮ ಸ್ವರೂಪದಿಂದ ತೋರುತ್ತಿರುವುದನ್ನು ಕಂಡೊಡನೆ, ಬ್ರಹ್ಮನು ಏನೊಂದೂ ತೋರದೆ ಆ ಶರದಿಂದ ಸಬ್ದನಾಗಿ ನಿಂತುಬಿಟ್ಟನು. ಆ ಚತುರು ಖನ ಏಕಾದಶೇಂದ್ರಿಯ ಗಳೂ ಅವರ ತೇಜಸ್ಸಿನಿಂದ ಶಕ್ತಿಗುಂದಿ ಪರವಶವಾಗಿದ್ದುವು. ಆಗ ಬ್ರ ಹೈನು, ಗೋಕುಲದೇವತೆಯ ಮುಂದೆ, ಕ್ರಿಡಾರವಾಗಿ ನಿಲ್ಲಿಸಿದ ಬಂಗಾರದ ಬೊಂಬೆಯಂತೆ ನಿಶ್ಚಲವಾಗಿ ನಿಂತುಬಿಟ್ಟನು. ಹೀಗೆ ಸ್ವಯಂ ಪ್ರಕಾಶವಾಗಿಯೂ, ಅಪರಿಮಿತಸುಖಾತ್ಮಕವಾಗಿಯೂ, ಪ್ರಕೃತಿಗಿಂತ ಲೂ ವಿಲಕ್ಷಣವಾಗಿಯೂ, ಪ್ರತ್ಯಕ್ಷಾನುಮಾನಾದಿಪ್ರಮಾಣಗಳಿಂದ ಹೀ 1ಂದೂಹಿಸುವುದಕ್ಕೂ ಅಸಾಧ್ಯವಾದ ಮಹಿಮೆಯುಳ್ಳದಾಗಿಯೂ, ಪ್ರ ಕೃತಿ ಪುರುಷರಿಗಿಂತ ವಿಲಕ್ಷಣವಾದ ಸ್ವರೂಪಸ್ವಭಾವಗಳುಳ್ಳುದಾ ಗಿ, ಕೇವಲ ವೇದಾಂತವಾಕ್ಯಗಳಿಂದಲೇ ತಿಳಿಯಲ್ಪಡತಕ್ಕುದಾಗಿಯೂ ಇರು ವಆ ಭಗವತೃರೂಪವನ್ನು ನೋಡಿ ಬ್ರಹ್ಮನು, ಅದರ ನಿಜಸ್ಥಿತಿಯನ್ನೂ ಮಹಿಮೆಯನ್ನೂ ಹೀಗೆಂದು ತಿಳಿಯಲಾರದೆ ಕಳವಳಿಸುತ್ತಿದ್ದನು. ಬ್ರ ಹೈನು ಹೀಗೆ ಕಳವಳಿಸುತ್ತಿರುವುದನ್ನು ನೋಡಿ,ಸರೋತ್ತಮನಾಗಿಯೂ, ಕರಾಠೀನವಾದ ಜನನಮರಣಗಳಿಲ್ಲದವನಾಗಿಯೂ ಇರುವ ಭಗವಂತನು, ಮೊದಲಿನಂತೆಯೇ ತನ್ನ ರೂಪವನ್ನು ಕರುಗಳನ್ನಾಗಿಯೂ, ಗೋಪಾಲ ಕರನಾಗಿಯೂ ಅವನಿಗೆ ತೋರಿಸುವದಕಾಗಿ, ಆ ಬ್ರಹ್ಮ ಮುಂದೆ ತನ. ಪರಸ್ವರೂಪವನ್ನು ಮರೆಸತಕ್ಕ ಮಾಯೆಯೆಂಬ ತೆರೆಯನ್ನು ಬೀಸಿದನು. ಒಡನೆಯೇ ಬ್ರಹ್ಮನಿಗೆ ಇಂದ್ರಿಯಗಳಲ್ಲಿ ಪಟುತ್ವವುಂಟಾಯಿತು. ಮೃತ ಶರೀರಕ್ಕೆ ಜೀವವು ಕೂಡಿದಂತೆ ಅವನಿಗೆ ಪ್ರಜ್ಞೆಯುಂಟಾಯಿತು. ಮೆಲ್ಲಗೆ ಕಣ್ಣುಗಳನ್ನು ತೆರೆದು ಮುಂದೆ ನೋಡಿದನು. ಅವನ ಕಣ್ಣಿಗೆ ಜಗತ್ತೆಲ್ಲವೂ ಮೊದಲಿನ ಸ್ಥಿತಿಯಲ್ಲಿಯೇ ಗೋಚರಿಸಿತು, ತಾನೂ ಚತುರಖಬ್ರಹ್ಮನೆಂ ಬ ಭಾವವು ಹುಟ್ಟಿತು. ಅವನಿಗೆ ಕಾಣಿಸಿದ ಭಗವದಾಕೃತಿಗಳೆಲ್ಲವೂ ಅ ಗೋಚರವಾದುವು. ಸುತ್ತಲೂ ತಿರುಗಿ ನೋಡುವಾಗ, ಅನೇಕ ಜನರ ಳಿಗೆ ಜೀವನಾಶ್ರಯವಾಗಿ, ನಾನಾಬಗೆಯ ವೃಕ್ಷಗಳಿಂದ ನಿಬಿಡವಾದ