೧೮೩೪ ಶ್ರೀಮದ್ಭಾಗವತವು ಅಧ್ಯಾ, ೧೪: ಮೈ ರೆಸಿಕೊಂಡು, ಆ ಕೃಷ್ಣನ ಮುಖಾರವಿಂದವನ್ನು ನೋಡಿ, ವಿನಯ ದಿಂದ ತಲೆಯನ್ನು ತಗ್ಗಿಸಿ, ಆ ಕೃಷ್ಣನ ಮುಂದೆ ಬದ್ಧಾಂಜಲಿಯಾಗಿ ನಿಂ ತು, ಭಯಭಕ್ತಿಗಳಿಂದ ನಡುಗುವ ಗದ್ದದಶ್ವರದಿಂದ ಹೀಗೆಂದು ಸ್ತುತಿ ಸುವನು. ಇದು ಹದಿಮೂರನೆಯ ಅಧ್ಯಾಯವು.. w+ ಬ್ರಹ್ಮಕೃತಸ್ತೋತ್ರವww «« ಲೋಕವಂದಿತನಾದ ಓ ಕೃಷ್ಣಾ ! ನೀನೇ ಸಕಲಜಗತ್ಕಾರಣ ನಾದ ಪರಮಪುರುಷನಾಗಿದ್ದರೂ, ಸತ್ವಜನಸುಲಭನೆಂಬುದನ್ನು ತೋರಿ ಸುವುದಕ್ಕಾಗಿ ಈಗ ನೀನು ಈ ರೂಪವನ್ನು ಕೈಕೊಂಡಿರುವೆ ! ಆಹಾ! ಇದ ನ್ನು ನಾನೇನೆಂದು ವರ್ಣಿಸಲಿ: ಕಾಳಮೇಘದಂತೆ ಕಪ್ಪಾದ ಮೈ! ಮಿಂಚಿನಂ ತೆ ಹೊಳೆಯುವ ಹೊಂಬಣ್ಣದ ಮಡಿ ! ಗುಲಗಂಜಿಯ ಕರ್ಣಾಭರಣದಿಂದ ಲೂ, ನವಿಲುಗರಿಯ ಶಿಖೆಯಿಂದಲೂ ಅಂದವೇರಿದ ಮುಖದ ಸೊಬಗು ! ಕೊರಲಲ್ಲಿ ಕೊಂಬು ! ಒಂದು ಕಕ್ಷದಲ್ಲಿ ದೊಣ್ಣೆ ! ಮತ್ತೊಂದು ಕಕ್ಷದಲ್ಲಿ ಕೊಳಲು ! ಇಂತಹ ವೇಷದಿಂದ ಗೋಪಾಲಬಾಲನಾಗಿ ನಟಿಸುತ್ತಿರುವ ನಿನಗೆ ನಮಸ್ಕಾರವು. ಓ ದೇವಾ! ಈಗ ನೀನು ತೋರಿಸುತ್ತಿರುವ ಈ ಗೋಪಾಕೃತಿಯೂ ಕೂಡ, ನಮ್ಮನ್ನು ಅನುಗ್ರಹಿಸುವುದಕ್ಕಾಗಿ,ನೀನು ಸೈದ್ಧೆಯಿಂದ ಕೈಕೊಂ ಹುದೇ ಹೊರತು, ಇದು ಇತರಪ್ರಾಣಿಗಳ ಶರೀರದಂತೆ ಪಂಚಭೂತಾತ್ಮಕ ವಾದುದಲ್ಲ!ಮತ್ತು ಇದು ನಿನಗೆ ಕಾಧೀನವಾಗಿ ಬಂದುದೂ ಅಲ್ಲ! ಬ್ರಹ್ಮ ನಾದ ನಾನೂಕೂಡ, ಈ ನಿನ್ನ ಗೊಲ್ಲವೇಷದ ಮಹಿಮೆಯನ್ನೇ ಹೀಗೆಂದು ಮನಸ್ಸಿನಿಂದಲೂ ತಿಳಿಯಲಾರದೆ ಕಳವಳಿಸುವೆನು. ಹೀಗಿರುವಾಗ ನಿನ್ನ ಪರಸ್ವರೂಪದ ಮಹಿಮೆಯನ್ನು ತಿಳಿಯಬಲ್ಲೆನೆ? ಈ ದೇವಾ! ಯಾರು ಜ್ಞಾನಯೋಗಕ್ಕಾಗಿ ವಿಶೇಷಶ್ರಮಪಡದೆ, ತಮ್ಮ ತಮ್ಮ ವರ್ಣಾಶ್ರಮಥರಗಳನ್ನು ಮಾತ್ರ ನಿನ್ನ ಪಾದಾರಣರೂಪವಾಗಿ ತಪ್ಪದೆ ನಡೆಸುತ್ತ, ನಿನಗೆ ಒಂದಾವರ್ತಿ ನಮಸ್ಕರಿಸಿ, ನಿನ್ನಲ್ಲಿ ಶರಣಾಗತರಾ ಗುವರೋ, ಮತ್ತು ಸತ್ಪುರುಷರು ಮನೋವಕಾಯಗಳೆಂಬ ತ್ರಿಕರಣ ಗಳ ಶುದ್ಧಿಯಿಂದ ನಿನ್ನನ್ನು ಕೀರ್ತಿಸತಕ್ಕ ಕಥೆಗಳನ್ನು ಯಾರು ಕಿವಿಯಿಂದ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೪೮
ಗೋಚರ