೧೮೩೮ ಶ್ರೀಮದ್ಭಾಗವತವು [ಅಧ್ಯಾ, ೧೪. ಬ್ಯಾಗ,ಆ ಪ್ರಳಯಜಲದಲ್ಲಿ ನಾರಾಯಣನ ನಾಭಿಕಮಲದಿಂದಲೇ ನಾನು ಹುಟ್ಟಿದವನೆಂಬುದು ಲೋಕಪ್ರಸಿದ್ಧವಾದ ವಿಚಾರವಲ್ಲವೆ ? ಆದುದರಿಂದ ನಾನು ಸತ್ಯೇಶ್ವರನಾದ ನಿನ್ನ ಗರ್ಭದಿಂದ ಬಂದವನೆಂಬುದರಲ್ಲಿ ಸಂ ದೇಹವೇನಿದೆ ? “ನೀನು ನಾರಾಯಣನ ಮಗನಾಗಿದ್ದ ಮಾತ್ರಕ್ಕೆ ನನಗೆ ನಿನಗೆ ಸಂ ಬಂಧವೇನು?” ಎಂದು ಕೇಳುವೆಯಾ? ಕೃಷ್ಣಾ! ಆ ನಾರಾಯಣನೂ ನೀನ ಲ್ಲದೆ ಬೇರೆ ಯಾರು ? ನೀನೇ ನನ್ನ ಜನಕನು ನಾರವೆಂದು ಕರೆಯಲ್ಪಡು ನ ಸಮಸ್ಯದೇಹಿಗಳಿಗೂ ಆಶ್ರಯನಾಗಿ, ನಾರವೆನಿಸುವ ಸಮಸ್ತಲೋ ಕಕ್ಕೂ ಪ್ರವರ್ತಕನಾಗಿ, ಆ ಸತ್ವಲೋಕಕ್ಕೂ ಸಾಕ್ಷಿಯಾಗಿಯೂ ಇರುವ ನಿನ್ನನ್ನು ನಾರಾಯಣನೆಂದು ಹೇಳುವುದರಲ್ಲಿ ಸಂದೇಹವೇನಿದೆ? ಅಥವಾ (ನಾರವೆಂದು ಕರೆಯಲ್ಪಡುವಪ್ರಳಯಜಲರಾಶಿಯಲ್ಲಿ ಮಲಗಿದ್ದವನೇ ನಾ ರಾಯಣನೆಂಬ ಲೋಕಪ್ರತೀತಿಯನ್ನೇ ಪ್ರಮಾಣವಾಗಿಟ್ಟುಕೊಂಡು ಯೋ ಚಿಸಿದರೂ, ಆ ಜಲಶಾಯಿಯಾದ ನಾರಾಯಣನೂ ನಿನ್ನ ಮೂರ್ತಿಯಲ್ಲದೆ ಬೇರೆಯಲ್ಲ ! 44ಆದರೆ ಸಮಸ್ತ ವಿಶ್ವವನ್ನೂ ವ್ಯಾಪಿಸಿರತಕ್ಕವನೇ ನಾರಾಯಣ ನೆಂದು ವೇದಗಳೆಲ್ಲವೂ ಉದ್ಯೋಷಿಸುವಾಗ, ಆ ವಿಶ್ವದಲ್ಲಿ ಏಕದೇಶವಾದ ಜಲದಲ್ಲಿ ಮಲಗಿದ್ದವನನ್ನು ನಾರಾಯಣವೆಂದು ಹೇಳುವುದು ಹೇಗೆ?” ಎಂದು ಕೇಳುವೆಯಾ? ಏಭುವಾದ ನಿನ್ನಲ್ಲಿ ಆ ಸತ್ವಲೋಕಾಧಾರತ್ವವೂ, ಆ ಜಲಶಾಯಿತ್ವವೂ ಎರಡೂ ಸತ್ಯವಾಗಿಯೇ ಇರುವುದು. ದೇವಾ ! ಸೃಷ್ಟಾರಂಭದಲ್ಲಿ ಸಮಸ್ತ ಜಗತ್ತಿಗೂ ಆಧಾರವಾದ ನಿ ನ ಶರೀರವು, ಆ ಜಗತ್ತಿನಲ್ಲಿ ಏಕದೇಶವಾದ ಜಲದಲ್ಲಿ ನನಗೆ ಕಾಣಿಸಲಿಲ್ಲವೆ? ಆ ಜಲದಲ್ಲಿ ಕಾಣಿಸಿದ ರೂಪವೇ ಕ್ಷಣಕಾಲದಮೇಲೆ ನನ್ನ ಹೃದಯದಲ್ಲಿ ಕಾಣಿಸಲಿಲ್ಲವೆ? ಆ ನನ್ನ ಹೃದಯದಲ್ಲಿ ಗೋಚರಿಸಿದ ರೂಪವೇ ಕ್ಷಣಕಾಲ ದಮೇಲೆ ಅದೃಶ್ಯವಾಗಲಿಲ್ಲವೆ? ನಿನ್ನಲ್ಲಿ ವಿಭುತ್ವ (ಸತ್ವವ್ಯಾಪಿ) ವಿಲ್ಲದಿ ದ್ದರೆ, ಈ ವಿಚಿತ್ರ ವ್ಯಾಪಾರಗಳು ಹೇಗೆ ನಡೆಯುತ್ತಿದ್ದುವು ? ಆದರೆ ಪ್ರಳಯಕಾಲದಲ್ಲಿ ನಡೆದ ಈ ವ್ಯಾಪಾರಗಳೆಲ್ಲವೂ ಆಗಿದ್ದ ಅನಿರುದ್ಧ ಮೂ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೫೨
ಗೋಚರ