ಅಧ್ಯಾ, ೧೪.] ದಶಮಸ್ಕಂಧವು. ೧೮೭೯ ರ್ತಿಯಿಂದಾದುವೇಹೊರತು ನಾನು ಮಾಡಿದುದೇನು?” ಎಂದು ಕೇಳು ವೆಯಾ? ಆ ಅನಿರುದ್ಧಮೂರ್ತಿಯೂ ನೀನಲ್ಲದೆ ಬೇರೆ ಯಾರು ? • ಆಗಿನ ವೃತ್ತಾಂತವೂ ಹೋಗಲಿ! ಈಗ ನೀನು ಈ ಸಾಮಾನ್ಯ ಮನುಷ್ಕಾ ವತಾರವನ್ನೆ ತಿರುವಾಗಲೂಕೂಡ, ಹೊರಗೆ ಕಾಣಿಸುತ್ತಿರುವ ಈ ಪ್ರಪಂ ಚವೆಲ್ಲವನ್ನೂ ನಿನ್ನ ತಾಯಿಯಾದ ಯಶೋದೆಗೆ ನಿನ್ನ ಜಠರದಲ್ಲಿ ಯೇ ತೋರಿಸಿದೆಯಲ್ಲವೆ? ಇದು ನಿನ್ನ ಆಶ್ಚ ರಶಕ್ತಿಯಲ್ಲದೆ ಬೇರೇನು? ಚಿದ ಚಿದಾತ್ಮಕವಾದ ಪ್ರಪಂಚವೆಲ್ಲವೂ ಹೊರಗೆ ನಮ್ಮ ಕಣ್ಣಿಗೆ ಹೇಗೆ ಗೋ ಚರಿಸುತ್ತಿರುವುದೋ, ಅದೇರೀತಿಯಲ್ಲಿ, ಇವೆಲ್ಲವೂ ನಿನ್ನೊಡನೆಯೂ,ನನ್ನೂ ಡನೆಯೂ ನಿನ್ನ ಉದರದಲ್ಲಿ ಕಾಣಿಸಿತಲ್ಲವೆ? ಇದು, ನಿನ್ನ ಮಾಯೆಯಲ್ಲವೆ ? “ ನಾನು ನನ್ನ ತಾಯಿಗೆ ನನ್ನ ಜಠರದಲ್ಲಿ ಸಮಸ್ತವಿ ಶ್ವವನ್ನೂ ತೋರಿಸಿದೆನೆಂಬುದರಲ್ಲಿ ನಿಶ್ಚಯವೇನು? ಅದನ್ನು ಬೇರೆಯಾ ರೂ ಕಂಡವರಿಲ್ಲವಷ್ಟೆ?” ಎಂದು ಹೇಳುವೆಯಾ ? ಆ ವಿಚಾರವೂ ಹೊ ಗಲಿ! ಈಗಲೇ ನೀನು ನನಗೂ ನಿನ್ನ ವಿಚಿತ್ರಶಕ್ತಿಯನ್ನು ತೋರಿಸಿದೆಯ ಲ್ಲವೆ ? ಮೊದಲು ನಾನು ನಿನ್ನ ಕರುಗಳನ್ನೂ, ನಿನ್ನ ಸ್ನೇಹಿತರಾದ ಗೋ ಪಬಾಲಕರನ್ನೂ ಕದ್ದು ಯುವಾಗ, ನೀನೊಬ್ಬನೇ ನನ್ನ ಕಣ್ಣಿಗೆ ಕಾಣಿಸು ತಿದ್ದೆ! ನಾನು ಅವುಗಳನ್ನು ಅಪಹರಿಸಿಕೊಂಡು ಹೋದಮೇಲೆ, ನೀನೇ ಆ ಗೋಪಬಾಲಕರಂತೆಯೂ, ಕರುಗಳಂತೆಯೂ ಅನೇಕಾಕಾರಗಳಿಂದ ಕಾಣಿಸಿಕೊಂಡೆ ! ನಾನು ನೋಡುತಿದ್ದ ಹಾಗೆಯೇ ಸ್ವಲ್ಪಹೊತ್ತಿನಮೇ ಲೆ, ಆ ಆಕೃತಿಗಳನ್ನು ಶಂಖಚಕ್ರಾದಿ ಲಾಂಛನಗಳೊಡಗೂಡಿದ ನಾಲ್ಕು ಭುಜಗಳುಳ್ಳ ನಿನ್ನ ಪರಸ್ವರೂಪಕ್ಕೆ ಮಾರ್ಪಡಿಸಿ ಆ ರೂಪಗಳನ್ನು ನನ್ನೊಡನೆ ಸಮಸ್ತಚರಾಚರಗಳೂ ಉಪಾಸನೆ ಮಾಡುತ್ತಿರುವಂತೆ ಕಾಣಿ ಸಿದೆ! ಒಡನೆಯೇ ಆ ರೂಪಗಳೆಲ್ಲವನ್ನೂ ಸಕಲಜಗದಾತ್ಮಕವಾದ ವಿರಾ ಡ್ಯೂಪದಿಂದ ನನ್ನ ಕಣ್ಣಿಗೆ ತೋರಿಸಿದೆ ! ಕೊನೆಗೆ ಅವೆಲ್ಲವನ್ನೂ ಮರೆಸಿ ಕೊಂಡು, ಮೊದಲಿನಂತೆ ಕೈಯಲ್ಲಿ ಅನ್ನ ದುಂಡೆಯನ್ನು ಹಿಡಿದು, ಕೃಷ್ಣ ನೆಂಬ ಒಂದೇರೂಪದಿಂದ ಕಾಣಿಸಿಕೊಳ್ಳುತ್ತಿರುವೆ ? ಇವೆಲ್ಲವೂ ನಿನ್ನ ಮಾಯಾಶಕ್ತಿಯಲ್ಲವೆ? ನೀನು ವಿಭುವೆಂಬುದರಲ್ಲಿ ಸಂದೇಹವೇನು ?
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೫೩
ಗೋಚರ