ಅಧ್ಯಾ. ೧೪.] - ದಶಮಸ್ಕಂಧವು. ೧೮೪೧ ಆದರೆ ಹೀಗೆ ಅಸತ್ತಾದ ಈ ಜಗತ್ತೇ,ನಿನಗೆ ಶರೀರವೆನಿಸಿದ್ದರೂ, ನೀ ನು ಅಸತ್ತೆನಿಸುವುದಿಲ್ಲ. ಏಕೆಂದರೆ ನೀನು ಚೇತನಾಚೇತನಾತ್ಮಕವಾದ ಈ ಜಗತ್ತಿಗಿಂತಲೂ ವಿಲಕ್ಷಣನು. ಪ್ರಕೃತಿಯಂತೆ ನಿನಗೆ ಸ್ವರೂಪವಿಕಾರ ವಿಲ್ಲ! ಜೀವನಿಗಿರುವಂತೆ ನಿನಗೆ ಜ್ಞಾನಸಂಕೋಚವಿಲ್ಲ'! ಮುಕ್ತಜೀವರೂ ಹಿಂದೊಮ್ಮೆ ಸಂಕುಚಿತಜ್ಞಾನವುಳ್ಳವರಾಗಿಯೇ ಇದ್ದುದರಿಂದ, ಅವರಿಗಿಂ ತಲೂ ನೀನು ವಿಲಕ್ಷಣನು. ಏಕೆಂದರೆ ನಿನ್ನ ಜ್ಞಾನಕ್ಕೆ ಎಂದಿಗೂ ಸಂಕೋ ಚವಿದ್ಯುದಿಲ್ಲ ನೀನು ಸ್ವಯಂಪ್ರಕಾಶಸ್ವರೂಪನು. ಎಂದಿಗೂ ಜ್ಞಾನಸಂ ಕೋಚವಿಲ್ಲದ ನಿತ್ಯಸಿದ್ದರು, ಸ್ವಭಾವದಲ್ಲಿ ಅಪರಿಚ್ಛಿನ್ನರಾಗಿದ್ದರೂ ಸ್ವರೂ ಪಪರಿಚ್ಛೇದವುಳ್ಳವರಾದುದರಿಂದ, ಸ್ವರೂಪಸ್ವಭಾವಾಧಿಪರಿಚ್ಛೇದವಿಲ್ಲದ ನೀನು ಆ ನಿತ್ಯಮುಕ್ಕರಿಗಿಂತಲೂ ವಿಲಕ್ಷಣನು, ಮತ್ತು ಜೀವನಂತೆ ನಿನಗೆ ಕ ರಾಧೀನವಾದ ಜನನಮರಣಗಳೆಲ್ಲ ಕಾಯತ್ತವಾದ ದೇಹಸಂಬಂಧವೂ ಇ ಲ್ಲ ಪ್ರಾಕೃತಜೀವರಿಗಿರುವಂತೆ ನಿನಗೆ ಪುಣ್ಯಪಾಪಸಂಬಂಧವಿಲ್ಲದುದರಿಂದ ನಿರಂಜನನೆನಿಸುವೆ? ಪ್ರಕೃತಿಯಂತೆ ನಿನಗೆ ಕರಣಸ್ವಭಾವವಿಲ್ಲದುದರಿಂದ ಆಕ್ಷ ರನೆನಿಸುವೆ: ಕಾಲಪರಿಛೇದವಿಲ್ಲದುದರಿಂದ ನೀನು ನಿತ್ಯನು ! ದೇಶಪರಿಚ್ಛೇ ದವಿಲ್ಲದುದರಿಂದ ಪೂರ್ಣನು! ವಸ್ತುಪರಿಚ್ಛೇದವಿಲ್ಲದುದರಿಂದ ಅದ್ವಯ ನು! ಹೀಗೆ ಪ್ರಕೃತಿಪುರುಷವಿಲಕ್ಷಣನಾದುದರಿಂದ ನೀನು ನಿತ್ಯಾನಂ ದಮಯನಾಗಿ ಬೆಳಗುವೆ. «« ನಿರ್ವ್ಯಾಪಾರನಾದವನಿಗೆ ಜಗತ್ಕಾರಣತ್ವವು ಹೇಗೆ” ಎಂದರೆ, ಸೃಷ್ಟಿಗೆಮೊದಲು ನಾಮರೂಪವಿಭಾಗಗಳಿಲ್ಲದ ಸಮಸ್ಯಚಿದಚಿತ್ತುಗಳನ್ನೂ ಶರೀರವಾಗಿ ಹೊಂದಿಸೀನೊಬ್ಬನೇ ಒಬ್ಬನಾಗಿದ್ದು, ಆ ನಿನ್ನ ಶರೀರದಿಂದಲೇ ಈ ಪ್ರಪಂಚವನ್ನು ವಿಸ್ತರಿಸಿದವನಾದುದರಿಂದ, ಈ ಪ್ರಪಂಚಕ್ಕೆ ನೀನೇ ಉಪಾದಾನಕಾರಣವೆನಿಸುವೆ ಮತ್ತು ಸೀನು, ನಿನಗೆ ಶರೀರಭೂತಗಳಾದ ಆ ಪ್ರಕೃತಿಪುರುಷ ಕಾಲಾದಿಗಳನ್ನು ಕಂಡುಕೊಳ್ಳತಕ್ಕ ಆತ್ಮನಾಗಿಯೂ ಇರುವುದರಿಂದ, ಈ ಜಗತ್ತಿಗೆ ನಿಮಿತ್ತಕಾರಣವೂ ನೀನೇ ! ಹೀಗಿರುವಾಗ ನಿನ್ನನ್ನು ಬಿಟ್ಟು ಈ ಜಗತ್ತಿಗೆ ಬೇರೆ ಯಾರನ್ನು ಕಾರಣವೆಂದು ಹೇಳ ಬಹುದು? 116 B
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೫೫
ಗೋಚರ