ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೨ ಶ್ರೀಮದ್ಭಾಗವತವು [ಅಧ್ಯಾ. ೧೪. ದೇವಾ ! ಯಾರು, ಅಜ್ಞಾನಾಂಧಕಾರವನ್ನು ನೀಗಿಸತಕ್ಕ ಗುರು ವೆಂಬ ಸೂ‌ನಿಂದ ಜ್ಞಾನಪ್ರಕಾಶವನ್ನು ಪಡೆದು, ಹೃದಯಗುಹೆಯಲ್ಲಿರ ತಕ್ಕ ನಿನ್ನನ್ನು ಕಂಡುಕೊಳ್ಳುವರೋ, ಅವರೇ ಪಾಪಪುಣ್ಯಪ್ರಚುರವಾದ ಸಂಸಾರವೆಂಬ ಮಹಾಸಾಗರವನ್ನು ದಾಟಬಲ್ಲರು. ದೇವಾ ! ನೀನು ಸಜೀವಾಂತರಾಮಿಯೆಂಬುದನ್ನು ನಿಜವಾಗಿ ತಿಳಿದು ಉಪಾಸನೆಮಾಡಲಾರದವರಿಗೆ, ಆ ಅಜ್ಞಾನವೇ ಸಂಸಾರವನ್ನು ತಗುಲುಕಟ್ಟುವುದು, ಅಂತರಾತ್ಮನಾದ ನಿನ್ನನ್ನು ತಮ್ಮ ಹೃದಯದಲ್ಲಿಯೇ ಸಾಕ್ಷಾತ್ಕರಿಸಬಲ್ಲವರಿಗೆ, ತಮ್ಮ ದೇಹದಲ್ಲಿ ಆತ್ಮಾಭಿಮಾನವೂ, ಆತ್ಮದಲ್ಲಿ ಸ್ವತಂತ್ರಾಭಿಮಾನವೂ ಬಿಟ್ಟು ಹೋಗುವುದರಿಂದ, ಅವರು ಸಂಸಾರವಿಮು ಕರಾಗುವರು, ಹಗ್ಗ ವನ್ನು ನೋಡಿದಾಗ,ಅದನ್ನು ಹಗ ವೆಂದು ತಿಳಿಯಲಾರ ದವರಿಗೇ,ಅದರಲ್ಲಿ ಹಾವೆಂಬ ಭ್ರಾಂತಿಯು ಹುಟ್ಟುವುದೇ ಹೊರತು, ಹಗ್ಗ ವೆಂ ದು ತಿಳಿದಮೇಲೆ ಆ ಭ್ರಾಂತಿಯೂ ಬಿಟ್ಟುಹೋಗವುದಲ್ಲವೆ ? ಅದರಂತೆಯೇ ಸಂಸಾರಬಂಧಕ್ಕೂ, ಮೋಕ್ಷಕ್ಕೂ ಪರಮಾತ್ಯೋಪಾಸನಾರೂಪವಾ ದ ಜ್ಞಾನವಿಲ್ಲದಿರುವಿಕೆಯೂ, ಆ ಜ್ಞಾನೋದಯವೂ ಇವೆರಡೇ ಮೂಲ ವೆನಿಸುವುವು. ಹೀಗಿರುವುದರಿಂದ, ವೇದಾಂತಪ್ರಮಾಣಗಳಮೂಲಕವಾಗಿ ದೇಹಾತ್ಮ ಭ್ರಮರೂಪವಾದ ಅಜ್ಞಾನವನ್ನು ತೊಲಗಿಸಿ, ಜ್ಞಾನಸ್ವರೂ ಪವಾದ ಜೀವಾತ್ಮನಿಗೂ ಅಂತರಾತ್ಮನಾದ ನಿನ್ನನ್ನು ತಮ್ಮಲ್ಲಿಯೇ ತಾವು ಸಾಕ್ಷಾತ್ಕರಿಸಬಲ್ಲವರಿಗೆ, ಸೂಯ್ಯೋದಯದಲ್ಲಿ ಅಂಧಕಾರವು ಹೇಗೋ ಹಾಗೆ ಆ ಸಂಸಾರವೆಂಬುದು ಬಿಟ್ಟು ಹೋಗುವುದು. ಇದನ್ನು ತಿಳಿಯಲಾರದ ಕೆಲವು ಮೂಢರು, ಪ್ರಕೃತಿ ಪುರುಷರಿಗಿಂತ ಲೂ ವಿಲಕ್ಷಣನಾಗಿಯೂ, ಅವೆರಡಕ್ಕೂ ಅಂತರಾಮಿಯಾಗಿ ಧರಿಸಿರತಕ್ಕವ ನಾಗಿಯೂ ಇರುವ ನಿನ್ನನ್ನೇ, ತಮ್ಮ ದೇಹದೊಳಗಿನ ಪ್ರತ್ಯಗಾತ್ಮನನ್ನಾಗಿ ಯೂ, ಆ ಪ್ರತ್ಯಗಾತ್ಮನನ್ನೇ ದೇಹವನ್ನಾಗಿಯೂ ಭಾವಿಸಿ, ಪರಮಾತ್ಮ ನಾದ ನಿನ್ನನ್ನು ಹೊರಗೆಲ್ಲಾ ಹುಡುಕುತ್ತಿರುವರು. ಕಕ್ಷದಲ್ಲಿ ಎತ್ತಿಕೊಂ ಡಿರುವ ಮಗುವನ್ನು ಕೇರಿಕೇರಿಗಳಲ್ಲಿ ಹುಡುಕುವಂತೆ, ತಮ್ಮ ಹೃದಯದಲ್ಲಿ ಯೇ ಕಾಣಬಹುದಾದ ನಿನ್ನನ್ನು ಹೊರಗೆ ಹುಡುಕುವವರ ಅಜ್ಞತೆಯನ್ನೆ ನೆಂದು ಹೇಳಬಹುದು ?