ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೪೪ ಶ್ರೀಮದ್ಭಾಗವತರು [ಅಧ್ಯಾ, ೧೪, ತಿಯಿಂದ ಕುಡಿದೆಯೋ, ಆ ಗೋಪಸಿಯರೂ, ಆ ಗೋವುಗಳೂ ಎಂ ತಹ ಭಾಗ್ಯಶಾಲಿಗಳು ! ಆಹಾ ! ನಂದಗೋಕುಲದವರ ಭಾಗ್ಯವೇ ಭಾಗ್ಯ ವು ! ಪರಮಾನಂದ ಸ್ವರೂಪನೂ, ಪರಿಪೂರ್ಣನೂ, ಆದ ಪರಬ್ರಹ್ಮನೇ ಯಾರಿಗೆ ಸ್ನೇಹಿತನಾಗಿರುವನೋ, ಆ ಗೋಕುಲವಾಸಿಗಳಲ್ಲವೇ ಪರಮ ಧನ್ಯರು ! ಅಥವಾ ಆ ನಂದಾದಿಗಳ ಮಾತು ಹಾಗಿರಲಿ ! ಅಂತರಂಗಚತುವ ಯದಲ್ಲಿ ಅಹಂಕಾರಕ್ಕೆ ಅಧಿಷ್ಟಾನದೇವತೆಯಾದ ಶಿವನೂ, ಮನಸ್ಸು, ಬುದ್ಧಿ, ಚಿತ್ರ, ವೆಂಬವುಗಳಿಗೆ ಅಧಿಷ್ಠಾತೃಗಳಾದ ಚಂದ್ರಾದಿದೇ ವತೆಗಳೂ, ವಾಕ್ಕು ಮೊದಲಾದ ದಶೇಂದ್ರಿಯಗಳಿಗೆ ಅಧಿಷ್ಠಾತೃಗಳೆನಿಸಿ ಕೊಂಡ ವರುಣನೇ ಮೊದಲಾಗಿ ಹನ್ನೊಂದುಮಂದಿಯೂ ಸೇರಿ, ಈ ನಾವು ಹದಿನಾಲ್ಕು ಮಂದಿಯೂ, ಒಂದೊಂದು ಇಂದ್ರಿಯವನ್ನು ಮಾತ್ರ ಪಾತ್ರವಾಗಿಟ್ಟುಕೊಂಡು, ಆಗಾಗ ನಿನ್ನ ಪಾದಾರವಿಂದದ ಮಕರಂದ ವೆಂಬ ಅಮೃತವನ್ನು ಸೇವಿಸಬಲ್ಲೆವು. ಹೀಗೆ ಒಂದೊಂದು ಇಂದ್ರಿಯ ಕ್ಕೆ ಅಭಿಮಾನಿಗಳಾದ ನಾವೇ, ನಿನ್ನ ಕೀರ್ತಿಸೌಂದಯ್ಯಾದಿಗಳನ್ನು ಅಲ್ಪ ಸ್ವಲ್ಪವಾಗಿ ಸೇವಿಸಿ ಅದರಿಂದಲೇ ಕೃತಾರರಾಗುತ್ತಿರುವಾಗ, ನಿನ್ನೊಡ ನೆ ಅನವರತವೂ ಕಲೆತಿದ್ದು,ಸತ್ಯೇಂದ್ರಿಯಗಳಿಂದಲೂ ನಿನ್ನನ್ನು ಅನುಭವಿಸು ತಿರುವ ಈ ಗೊಲ್ಲರ ಭಾಗ್ಯವನ್ನು ಎಷ್ಟೆಂದು ಹೇಳಬಹುದು. ? ಆಡುದರಿಂ ದ ಓ ಕೃಷ್ಣಾ ! ಈಗ ನಾನು ಕೋರತಕ್ಕ ಭಾಗ್ಯವೆಲ್ಲವೂ ಇದೊಂದೇ ! ನನಗೆ ಈಗಿರುವ ಬ್ರಹ್ಮಪದವಿಗಾಗಿಯೂ ನಾನು ಸಂತೋಷಿಸತಕ್ಕವ ನಲ್ಲ ! ವೇದಾಂತಗಳು ಇದುವರೆಗೂ ಹುಡುಕುತ್ತಿದ್ದರೂ ಯಾವನ ಪಾದ ರಜಸ್ಸನ್ನೂ ಕೂಡ ಕಾಣಲಾರದಿರುವುವೋ, ಅಂತಹ ಪರಮಪುರುಷನಾದ ನಿನ್ನನ್ನೇ ಸತ್ವವಿಧಜೀವನವನ್ನಾಗಿ ಪಡೆದಿರುವ ಈ ಗೋಕುಲವಾಸಿಗಳಲ್ಲಿ, ಯಾವನಾದರೂ ಒಬ್ಬ ಗೊಲ್ಲನ ಪಾದರಜಸ್ಸನ್ನು ನಾನು ತಲೆಯಲ್ಲಿ ಧರಿಸು ವಂತೆ ನನಗೆ ಈ ಭೂಲೋಕದಲ್ಲಿ, ಈ ವನಮಧ್ಯದಲ್ಲಿ, ಅದರಲ್ಲಿಯೂ ಈ ಮಂದೆಯಲ್ಲಿ, ಮನುಷ್ಯಜನವುಂಟಾಗುವಂತೆ ಅನುಗ್ರಹಿಸಿದರೆ, ಅದೇ ನನ್ನ ಪರಮಭಾಗ್ಯವೆಂದೆಣಿಸುವೆನು. ಅಥವಾ ನಿನ್ನ ಸಂಗಡಿಗರಾದ