೧೮೪೬ ಶ್ರೀಮದ್ಭಾಗವತದ [ಅಧ್ಯಾ, ೧೪, ರಗಳನ್ನೆತ್ತುವುದು, ಆಿತರ ಕಷ್ಟವನ್ನು ನೀಗಿಸಿ ಅವರನ್ನಾನಂದಗೊ ಳಿಸುವುದಕ್ಕಾಗಿಯೇ ಹೊರತು ಬೇರೆಯಲ್ಲ ! ದೇವಾ ! ಲೋಕಾದ್ಭುತವಾ ದ ನಿನ್ನ ಚರಿತ್ರೆಗಳನ್ನೂ, ಊಹಿಸಲಸಾಧ್ಯವಾದ ನಿನ್ನ ಸ್ವರೂಪ ಸ್ವಭಾ ವಾದಿಗಳನ್ನೂ ನಿಜವಾಗಿ ತಿಳಿಯಬಲ್ಲವರು ತಿಳಿಯಲಿ! ಹೆಚ್ಚು ಮಾತಿನಿಂ ದೇನು? ನನ್ನ ಮನೋವಾಕ್ಯಾಯಗಳೆಂಬ ತ್ರಿಕರಣಗಳಿಂದಲೂ ನಾನು ನಿ ನ್ಯ ವೈಭವವನ್ನು ಕಂಡುಕೊಳ್ಳಲಾರೆನು. ಇಷ್ಟು ಮಾತ್ರವೇ ನನಗೆ ತಿಳಿದ ವಿಷಯವು! ಕೃಷ್ಣಾ! ನೀನು ಸಕ್ಷಸಾಕ್ಷಿಯಾದುದರಿಂದ ನಿನಗೆ ತಿಳಿಯದುರಿ ಲ್ಲ ! ನೀನೇ ಸಕಲಜಗನ್ನಾ ಯಕನು! ಈ ಜಗತ್ತೆಲ್ಲವೂ ನಿನ್ನಲ್ಲಿಯೇ ಹುಟ್ಟಿ, ನಿನ್ನಲ್ಲಿಯೇ ಲಯಿಸುವುದು. ನಿನ್ನ ಮುಂದೆ ನಾನೆಷ್ಟುಮಾತ್ರದವನು? ನನ್ನ ಅಪರಾಧವನ್ನು ಮನ್ನಿಸಿ, ನನಗೆ ಅನುಜ್ಞೆಯನ್ನು ಕೊಡು ! ವೃಷ್ಟಿವಂಶ ವೆಂಬ ಕಮಲಕ್ಕೆ ಸೂರಪ್ರಾಯನಾದ ಓ ಕೃಷ್ಣಾ! ನಿನಗೆ ನಮಸ್ಕಾರವು! ಗೋಬ್ರಾಹ್ಮಣಕುಲವೆಂಬ ಸಮುದ್ರಕ್ಕೆ ಪೂರ್ಣಚಂದ್ರನಂತಿರುವ ಓ ಕೃಷ್ಣಾ ! ನಿನಗೆ ನಮಸ್ಕಾರವು! ಆಧರವೆಂಬ ಅಂಧಕಾರವನ್ನು ನೀಗಿಸ ತಕ್ಕ ಓ ಕೃಷ್ಣಾ: ನಿನಗೆ ನಮಸ್ಕಾರವು. ಕಂಸಾದಿರಾಕ್ಷಸರನ್ನು ಕೊಲ್ಲ ತಕ್ಕ ಓ ಕೃಷ್ಣಾ! ನಿನಗೆ ನಮಸ್ಕಾರವು. ಸೂಚಂದ್ರಾದಿಗಳೆಲ್ಲರಿಗೂ ಪೂಜ್ಯನಾದ ಓ ಭಗವಂತಾ ! ನಿನಗೆ ನಮಸ್ಕಾರವು! ಕಲ್ಲಾಂತದವರೆಗೂ ನಿನಗೆ ವಂದನವು!” ಎಂದು ಬ್ರಹ್ಮನು, ಮಹಾಮಹಿಮನಾದ ಆ ಕೃಷ್ಣ ನನ್ನು ಸ್ತುತಿಸಿ, ಮೂರಾವರ್ತಿ ಪ್ರದಕ್ಷಿಣಮಾಡಿ,ಕೃಷ್ಣನ ಪಾದಗಳಲ್ಲಿ ಬಿ ದ್ದು ನಮಸ್ಕರಿಸಿ, ಅವನ ಅನುಜ್ಞೆಯನ್ನು ಪಡೆದು, ತನ್ನ ಲೋಕಕ್ಕೆ ಹಿಂ ತಿರುಗಿದನು. ಆಮೇಲೆ ಇತ್ತಲಾಗಿ ಕೃಷ್ಣನು, ತನ್ನ ಕಣ್ಣಿಗೆ ಬೀಳದಂತೆ ಬ್ರ ಹ್ಮನು ಮರೆಸಿಟ್ಟಿದ್ದ ಕರುಗಳೆಲ್ಲವೂ ಅಲ್ಲಿಯೇ ಇರುವುದನ್ನು ಕಂಡು, ಅವೆಲ್ಲ ವನ್ನೂ ತನ್ನೊಡನೆ ಕರೆದುಕೊಂಡು, ಮೊದಲು ತನ್ನ ಸ್ನೇಹಿತರೊಡನೆ ಕುಳಿ ತು ಊಟಮಾಡುತಿದ್ದ ಮಳಲುದಿಣ್ಣೆಯ ಬಳಿಗೆ ಬಂದನು. ಅಲ್ಲಿ ತನ್ನ ಸಂಗಡಿಗರಾದ ಗೋಪಬಾಲಕರೆಲ್ಲರೂ ತನ್ನನ್ನೇ ನಿರೀಕ್ಷಿಸುತ್ತ ಮೊದಲಿ ನಂತೆ ಕುಳಿತಿದ್ದುದನ್ನು ಕಂಡನು. ಆ ಬಾಲಕರು, ತಮಗೆ ಪ್ರಾಣೇಶ್ವರನಾದ ಕೃಷ್ಣನು ತಮ್ಮನ್ನಗಲಿಹೋಗಿ ಇದುವರೆಗೆ ಒಂದುವರ್ಷಕಾಲವು ಗತಿಸಿ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೬೦
ಗೋಚರ