ಅಧ್ಯಾ, ೧೪.] ದಶಮಸ್ಕಂಧನ. ೧೨೪೬ ಹೋಗಿದ್ದರೂ, ಆ ಕೃಷ್ಣನ ಮಾಯೆಯಿಂದ ಮೈಮರೆತಿದ್ದುದರಿಂದ, ಆ ಷ್ಟು ದೀರ್ಘಕಾಲವೂ ಅವರಿಗೆ ಒಂದು ಕ್ಷಣಮಾತ್ರವಾಗಿ ತೋರಿತು. ರಾಜೇಂದ್ರಾ! ಇದೊಂದಾಶ್ರವೆಂದು ತಿಳಿಯಬೇಡ ! ಚರಾಚರಾತ್ಮಕ ವಾದ ಸಕಲಜಗತ್ತೂ, ಆ ಭಗವಂತನ ಮಾಯೆಯಿಂದ ಮೋಹಿತವಾಗಿ, ತನ್ನನ್ನೇ ತಾನು ಮರೆತುಹೋಗುತ್ತಿರುವಾಗ, ಈಸಾಮಾನ್ಯಗೋಪಬಾಲ ಕರು ಮೈಮರೆತು ಮೋಹಿತರಾಗುವುದೊಂದು ದೊಡ್ಡದೆ ? ಅವರು ಆ ಕೃಷ್ಣನ ಮಾಯೆಯಿಂದ ಆ ಒಂದುವರ್ಷಕಾಲದವರೆಗೆ ಹಸಿವುಬಾಯಾ ರಿಕೆಗಳನ್ನೂ ತಿಳಿಯದೆ ಕ್ಷಣಮಾತ್ರವಾಗಿ ಕಳೆದರು, ಆ ಕೃಷ್ಣನುಕರುಗ ಳೊಡನೆ ತಮ್ಮ ಬಳಿಗೆ ಬಂದೊಡನೆ ಆಶ್ಚ ರದಿಂದ “ಕೃಷ್ಣಾ ! ಇದೇ ನಾ ಶರವು! ಇಷ್ಟು ಬೇಗನೆ ಬಂದು ಬಿಟ್ಟೆಯಲ್ಲಾ : ನಮ್ಮ ಮಂದೆಯ ಕರು ಗಳೆಲ್ಲಿ ಹೋಗಿದ್ದುವು? ನಿನಗೆ ಸುಖಾಗಮನವೆ?ಕೃಷ್ಣಾ! ನಿನ್ನನ್ನು ಬಿಟ್ಟು ಒಂದು ತುತ್ತಾದರೂ ನಮ್ಮ ಗಂಟಲಲ್ಲಿ ಇಳಿಯಲಿಲ್ಲ! ಇದೋ ! ನಮ್ಮ ಕೈಯಲ್ಲಿದ್ದ ಕಬಳವನ್ನು ಹಾಗೆಯೇ ಇಟ್ಟುಕೊಂಡಿರುವೆವು ನೋಡು ! ನೀ ನೂ ಬಂದು ಕುಳಿತು ಭೋಜನಮಾಡು!” ಎಂದು ಒಬ್ಬೊಬ್ಬರೂ ಆದ ರಿಸಿ ಕರೆಯುತಿದ್ದರು, ಕಪಟನಾಟಕಸೂತ್ರಧಾರಿಯಾದ ಕೃಷ್ಣನು, ಏ ನೂ ತಿಳಿಯದವನಂತೆ ಅವರ ಮಾತನ್ನು ಕೇಳಿ ನಗುತ್ತ, ಅವರಸಂಗಡಲೇ ತಾನೂ ಸಂತೋಷದಿಂದ ಕಲೆತು ಊಟಮಾಡಿ, ಅವರೆಲ್ಲರನ್ನೂ ತನ್ನೊಡನೆ ಕರೆದುಕೊಂಡು ಬಂದು, ಹಿಂದೆ ತಾನು ಸಂಹರಿಸಿದ ವನ್ನು ಅವರಿಗೆ ತೋರಿಸಿದನು. ಅದನ್ನು ನೋಡಿಕೊಂಡು ಎಲ್ಲರೂ ತಮ್ಮ ಮಂದೆಗೆ ಹಿಂತಿರುಗಿದರು. ಕೃಷ್ಣನು ಹಿಂತಿರುಗಿ ಗೋಕುಲಕ್ಕೆ ಬರುವಾಗ, ಅವನ ವೈಭವವನ್ನೂ ಅವನ ಸುಂದರಾಕಾರವನ್ನೂ ಕೇಳಬೇಕೆ ? ತಲೆಯಲ್ಲಿ ಕಾಡುಹೂವಿನ ದಂಡೆ ! ಅದರಮೇಲೆ ನವಿಲುಗರಿಯದೊಂದೆ : ಅಂದಳ ಮುಂತಾದ ಗೈರಿಕಧಾತುಗಳ ವಿಚಿತ್ರವರ್ಣದಿಂದ ಲೇಪಿತವಾದ ಮೈ ! ಸಂಗಡಿಗರಾದ ಗೊಲ್ಲರ ಮಕ್ಕಳಲ್ಲಿ ಮುಂದೆ ಕೊಳಲನ್ನು ಬಾರಿಸುವರು ಕೆಲ ವರು!ಕೊಂಬನ್ನೂದುವರು ಕೆಲವರು! ತೆಂಗಿನ ಗರಿ, ಬಸರಿಯೆಲೆ, ಮುಂತಾ ದ ಹಸುರೆಲೆಗಳನ್ನು ಸುರುಳಿ ಸುತ್ತಿ,ಅದನ್ನೇ ವಾದ್ಯದಂತೆ ಊದುತ್ತ ಬರು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೬೧
ಗೋಚರ