ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೫೪ ಶ್ರೀಮದ್ಭಾಗವತವು [ಅಧ್ಯಾ, ೧೫ ಕೌಂಚಪಕ್ಷಿಗಳೂ, ಚಕ್ರವಾಕಗಳೂ, ಭರದ್ವಾಜಗಳೂ, ನವಿಲುಗಳೂ ಕೂಗುವ ಧ್ವನಿಯನ್ನು ಕೇಳಿ ಅದರಂತೆಯೇ ತಾನೂ ಕೂಗುವನು. ಹುಲಿ, ಸಿಂಹ, ಮೊದಲಾದ ಕ್ರೂರಮೃಗಗಳನ್ನು ಕಂಡು ಭಯಪಟ್ಟು ಓಡುತ್ತಿರು ವ ಮೃಗಗಳನಡುವೆ, ತಾನೂ ಭಯಪಟ್ಟಂತೆ ಓಡುವನು. ಬಲರಾಮ ನು ಈ ಆಟಪಾಟಗಳಿಂದ ಬಹಳವಾಗಿ ಆಯಾಸಪಟ್ಟು, ಶ್ರಮಪರಿ ಹಾರಾರವಾಗಿ ಯಾವನಾದರೂ ಒಬ್ಬ ಸ್ನೇಹಿತನ ತೊಡೆಯಮೇಲೆ ತಲೆ ಯಿಟ್ಟು ಮಲಗಿದಾಗ, ಕೃಷ್ಣನು ತಾನಾಗಿಯೇ ಬಂದು, ತನ್ನ ಕೈಯಿಂದ ಅವನ ಕಾಲುಗಳನ್ನೂ ತಿ ಉಪಚರಿಸುವನು. ಅಲ್ಲಲ್ಲಿ ಗೋಪಬಾಲಕರು ವಿನೋದದಿಂದ ಕುಣಿದಾಡುತ್ತಿರುವಾಗಲೂ, ಹಾಡುತ್ತಿರುವಾಗಲೂ, ಓ ಡುತ್ತಿರುವಾಗಲೂ, ಒಬ್ಬರಿಗೊಬ್ಬರು ಕೈ ಕಲೆತು ವಿನೋದದಿಂದ ಜಗಳ (ಕುಸ್ತಿ) ವಾಡುತ್ತಿರುವಾಗಲೂ, ರಾಮಕೃಷ್ಣರಿಬ್ಬರೂ ಒಬ್ಬೊಬ್ಬನ ಹ ಕವನ್ನು ಹಿಡಿದು “ಭಲೆ' ಶಹಬಾಸು” ಎಂದು ಬೆನ್ನು ತಟ್ಟಿ ಪ್ರೋತ್ಸಾಹಿ ಸುತ್ತ, ನೋಡಿ ನಗುತ್ತಿರುವರು. ಮತ್ತೊಮ್ಮೆ ಕೃಷ್ಣನು ತನಗೆ ಸಮಾನ ನಾದ ಗೋಪಬಾಲಕನೊಡನೆ ಬಾಹುಯುದ್ಧವನ್ನು ಮಾಡಿ, ಆಯಾಸ ಪರಿಹಾರಾರವಾಗಿ ಮರದಕೆಳಗೆ ಪಲ್ಲವಗಳನ್ನು ಹಾಸಿಕೊಂಡು, ತನ್ನ ಸ್ನೇ ಹಿತನೊಬ್ಬನ ತೊಡೆಯಮೇಲೆ ತಲೆಯಿಟ್ಟು ಮಲಗುವನು. ಆಗ ಕೃಷ್ಣ ನಿಗೆ ಕೆಲವರು ಕಾಲೊತ್ತುವರು ! ಕೆಲವರು ಬೀಸುವರು. ಕೆಲವರು ಅವನ ಸುತ್ತಲೂ ಕುಳಿತು ಮಧುರಧ್ವನಿಯಿಂದ ಹಾಡುತ್ತಿರುವರು. ಹೀಗೆ ಕೃ. ಪ_ನು ತನ್ನ ಸ್ವರೂಪವನ್ನೂ 'ಮಹಿಮೆಯನ್ನೂ ಬೇರೊಬ್ಬರಿಗೆ ತಿಳಿಸದಂತೆ, ತನ್ನ ಮಾಯೆಯಿಂದ ಗೊಲ್ಲರೊಡನೆ ಗೊಲ್ಲನಾಗಿ ನಟನಗಳನ್ನು ಮಾಡುತ್ತಿ ಹೃನು. ತಾನು ಸಾಕ್ಷಾಲಕ್ಷ್ಮಿ ದೇವಿಯ ಕರಕಮಲದಿಂದ ಒತ್ತಲ್ಪಟ್ಟ ಪಾ ದಾರವಿಂದವುಳ್ಳವನಾಗಿದ್ದರೂ, ಪ್ರಾಕೃತರಾದ ಗೊಲ್ಲಮಕ್ಕಳೊಡನೆ ತಾನೂ ಪ್ರಾಕೃತನಂತೆ ಕಾಣುತ್ತ, ನಡುನಡುವೆ ತನ್ನ ಅದ್ಭುತಕಾರಗಳಿಂ ದ ತನ್ನ ಸದ್ವೇಶ್ವರತ್ವವನ್ನು ಹೊರಪಡಿಸುತ್ತಿದ್ದನು. ಹೀಗಿರುವಾಗ ಒ ಮೈ ಬಲರಾಮಕೃಷ್ಣರಿಗೆ ಪರಮಮಿತ್ರನಾದ ಶ್ರೀದಾಮನೆಂಬ ಗೋ ಪಾಲನೊಬ್ಬನು, ಸುಬಲ, ಶ್ಲೋಕ, ಕೃಷ್ಣ, ಮೊದಲಾದ ಇತರ