೧೮೬೦ ಶ್ರೀಮದ್ಭಾಗವತವು [ಅದ್ಯಾ, ೧೬. ಬಿಟ್ಟನು.” ಎಂದು ಹೇಳಿದ ಶುಕಮಹರ್ಷಿಯ ವಾಕ್ಯವನ್ನು ಕೇಳಿ ತಿರುಗಿ ಪರೀಕ್ಷಿದ್ರಾಜನು ಪ್ರಶ್ನೆ ಮಾಡುವನು, ಓ ಮುನೀಂದ್ರಾ! ಸಣ್ಣ ಬಾಲಕನಾದ ಆ ಕೃಷ್ಣನು. ಅಗಾಧವಾ ದ ಮಡುವಿನಲ್ಲಿ ಸೇರಿಕೊಂಡಿದ್ದ ಆ ಮಹಾಸರ್ಪವನ್ನು ನಿಗ್ರಹಿಸಿದು ದು ಹೇಗೆ? ಆ ಸರ್ಪವು ಬಹುಕಾಲದಿಂದ ಅಲಿ ಸೇರಿಕೊಂಡಿತೆಂದು ಹೇ ಳಿದೆಯಲ್ಲವೆ ? ಆ ಸರ್ಪವು ಅಲ್ಲಿ ಬಂದು ಸೇರುವುದಕ್ಕೆ ಕಾರಣವೇನು ? ಓ ಮಹರ್ಷಿ ! ಮಹಾಮಹಿಮೆಯುಳ್ಳವನಾಗಿಯೂ, ಸರಸ್ವತಂತ್ರನಾಗಿ ಯೂ ಇರುವ ಭಗವಂತನು, ಕೃಷ್ಣರೂಪದಿಂದ ಗೋಪಕುಲದಲ್ಲಿ ಜನಿ ಸಿ ನಡೆಸಿದ ಕಾರವೊಂದೊಂದೂ ಅತ್ಯದ್ಭುತವಾಗಿರುವುದು. ಆತನ ಚರಿ ತ್ರವೊಂದೊಂದೂ ಅಮೃತಪ್ರಾಯವಾಗಿರುವುದು. ಆ ಶ್ರೀಕೃಷ್ಣನ ಚ ರಿತ್ರಾಮೃತವನ್ನು ಪಾನಮಾಡುವುದರಲ್ಲಿ ಯಾವನಿಗೆ ತಾನೇ ತೃಪ್ತಿಯುಂ ಟಾಗುವುದು ! ಆದುದರಿಂದ ನೀನು ಆ ವೃತ್ತಾಂತವನ್ನು ಸವಿಸ್ತರವಾಗಿ ನನಗೆ ತಿಳಿಸಬೇಕು” ಎಂದನು. ಅದಕ್ಕಾ ಶುಕಮಹರ್ಷಿಯು “ಓ ರಾಜೇಂ ದ್ರಾ! ಕೇಳು ! ಆ ಯಮುನಾನದಿಯ ಮಡುವಿನಲ್ಲಿ ಕಾಳಿಯನೆಂಬ ಮಹಾಸರ್ಪವು ಸೇರಿಕೊಂಡುದುಮೊದಲು, ಅದರ ವಿಷಾಗ್ನಿ ಯ ಬೇಗೆಯಿಂದ, ಆ ಮಡುವಿನ ಸೀರೆಲ್ಲವೂ ಕುಡಿಯುತ್ತಿದ್ದಿತು. ಆ ಮಡುವಿ ನಮೇಲೆ ಬೀಸಿ ಬರುವಗಾಳಿಯು ತಗುಲಿದಮಾತ್ರಕ್ಕೆ, ಆಕಾಶದಲ್ಲಿ ಹಾರು ತಿರುವ ಪಕ್ಷಿಗಳೆಲ್ಲವೂ ಬೆಂದುಬಿಳುತಿದ್ದುವು! ಅದರ ತೀರಕ್ಕೆ ಬಂದು ಸಂಚ ರಿಸತಕ್ಕ ಮೃಗಾದಿಗಳೂ, ಅಲ್ಲಿ ಬೆಳೆದ ವೃಕ್ಷಗಳೂ, ಆ ವಿಷದ ಗಾಳಿಯವೇ ಗದಿಂದ ಹಗ್ಗವಾಗುತಿದ್ದುವು. ಇದರಿಂದ ಆ ಮಡುವಿನ ಸುತ್ತಲೂ, ಮೇಲೆಯೂ, ಬಹುದೂರದವರೆಗೆ ಯಾವ ಪ್ರಾಣಿಗಳಾಗಲಿ, ಯಾವಗಿ ಡಗಳಾಗಲಿ ಬದುಕುವುದಕ್ಕೆ ಅವಕಾಶವಿಲ್ಲದಂತಿದ್ದಿತು. ಹೀಗೆ ಅತಿಕ್ಕೂ ರವಿಠ್ಯವುಳ್ಳ ಆ ವಿಷದ ವೇಗದಿಂದ, ಆಮಡುವಿನ ನೀರೆಲ್ಲವೂ ಸ್ನಾನಪಾನ ಗಳಿಗೆ ಯೋಗ್ಯವಲ್ಲದೆ ಕೆಟ್ಟು ಹೋಗಿರುವುದನ್ನು ನೋಡಿ, ದುಷ್ಯನಿಗ್ರಹಾರ ವಾಗಿಯೇ ಲೋಕದಲ್ಲಿ ಅವತಾರವನ್ನೆತಿರುವ ಶ್ರೀಕೃಷ್ಣನು,ಆಸರ್ಪವನ್ನು ನಿಗ್ರಹಿಸಬೇಕೆಂದು ಮನಸ್ಸಿನಲ್ಲಿ ಸಂಕಲ್ಪಿಸಿಬಿಟ್ಟನು. ಒಡನೆಯೇ ಕೃಷ್ಣನು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೭೪
ಗೋಚರ