ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೭೮ ಶ್ರೀಮದ್ಭಾಗವತವು [ಅಧ್ಯಾ. ೧೮. ಹಳವಾಗಿ ಸುಕ್ಕಿ ಬೆಂಡಾಗಿ ಮಲಗಿದ್ದರು. ಇಷ್ಟರಲ್ಲಿ ಸಮೀಪದ ಕಾಡಿನಲ್ಲಿ ಒಂದು ಕಾಡುಗಿಚ್ಚು ಹುಟ್ಟಿ, ಸುತ್ತಲೂ ವ್ಯಾಪಿಸುತ್ತಬಂದಿತು. ಕ್ರಮಕ್ಕೆ ಮವಾಗಿ, ಇಲ್ಲಿ ಮಲಗಿದ್ದ ಮಂದೆಯನ್ನೂ ಆವರಿಸಿಕೊಂಡಿತು. ಎಲ್ಲರೂ ಆ ಕಾಡುಗಿಚ್ಚಿನ ಬೇಗೆಯಲ್ಲಿ ಸಿಕ್ಕಿ ಸಾಯುವ ಸ್ಥಿತಿಯಲ್ಲಿದ್ದರು, ಅಲ್ಲಲ್ಲಿ ಮ ಆಗಿದ್ದವರೆಲ್ಲರೂ ಸಂರ್ಭಮದಿಂದೆದ್ದು, ಕೃಷ್ಣನ ಬಳಿಗೆ ಬಂದು ಅಯ್ಯೋ! ಇನ್ನೇನುಗತಿ! ಕೃಷ್ಣ! ಕೃಷ್ಣಾ! ಓ ಮಹಾತ್ಮಾ ! ರಾಮಾ ! ಅಮಿತ ಪರಾಕ್ರಮಾ ! ಅದೋ ! ನೋಡಿರಿ : ಭಯಂಕರವಾದ ದಾವಾಗ್ನಿಯು ಸುತ್ತಲೂ ಆವರಿಸಿಕೊಂಡಿರುವುದು. ಅದಕ್ಕೆ ನಾವೆಲ್ಲರೂ ಮೊತ್ತಕ್ಕೆ ಆಹು ತಿಯಾಗುವ ಕಾಲವು ಬಂದಂತಿದೆ. ಕಾಲಾಗ್ನಿ ಯಂತೆ ಉರಿಯುತ್ತ ಬರುವ ಈ ಬೆಂಕಿಯನ್ನು ತಪ್ಪಿಸಿಕೊಳ್ಳುವುದಕ್ಕೆ ಉಪಾಯವೊಂದೂ ನಮಗೆ ತೋ ರಲಿಲ್ಲವಲ್ಲಾ ! ಕೃಷ್ಯಾ ಪ್ರಭೂ ! ಹೇಗಾದರೂ ನಮ್ಮ ಪ್ರಾಣವನ್ನುಳಿ ಸಬೇಕು ” ನಿನ್ನನ್ನು ಬಿಟ್ಟರೆ ಈಗ ನಮಗೆ ಬೇರೆ ದಿಕ್ಕಿಲ್ಲ ! ಎಂದರು. ಅವರ ದೈನ್ಯವನ್ನು ನೋಡಿ ನಗುತ್ತ, ಕೃಪನು ಮುಂದೆ ಹೋಗಿ, (ಹೋಮಾಂತ ದಲ್ಲಿ ಅಗ್ನಿ ಯನ್ನು ಆತ್ಮಸಮಾರೋಪಣಮಾಡುವಂತೆ) ಆ ಬೆಂಕಿಯನ್ನು ಕೈಯಿಂದ ಕುಡಿದುಬಿಟ್ಟನು. ಇದು ಹದಿನೇಳನೆಯ ಅಧ್ಯಾಯವು.

  • ಗ್ರೀಷ್ಮರ್ತು ವರ್ಣನವ. ರಾಜಾ! ಕೇಳು ! ಆ ರಾತ್ರಿಯು ಕಳೆದು ಬೆಳಗಾದಮೇಲೆ,

ಕೃನು ತನ್ನ ಸಮಸ್ತಬಂಧುಮಿತ್ರರೊಡನೆ ಅಲ್ಲಿಂದ ಹೊರಟನು ದಾರಿಯುದ್ದ ಈ ಗೋಪಾಲಕರು ಆ ಕೃಷ್ಣನ ವೈಭವವನ್ನೇ ಹೇಳಿಹೇಳಿ ಕೊಂಡಾ ಡುತ್ತಬಂದರು. ಎಲ್ಲರೂ ಹಿಂತಿರುಗಿ ಮಂದೆಗೆ ಬಂದು ಸೇರಿದರು. ರಾಮ ಕೃಷ್ಣರಿಬ್ಬರೂ ಹೀಗೆ ತಮ್ಮ ಪರಸ್ವರೂಪವನ್ನು ಮರೆಸಿಕೊಂಡು, ಗೊ ಲ್ಲರ ಮಕ್ಕಳಂತೆ ವಿವಿಧವಿನೋದಗಳಿಂದ ಕಾಲವನ್ನು ಕಳೆಯುತ್ತಿರುವಾಗ, ವಸಂತಋತುವು ಕಳೆದು ಗ್ರೀಷ ಕಾಲವು ಪ್ರಾರಂಭಿಸಿತು ಈ ಗ್ರೀಷ್ಮ ಕಾಲವೆಂಬುದು, ಬಿಸಿಲಿನ ತಾಪದಿಂದ ಪ್ರಾಣಿಗಳಿಗೆ ಅಷ್ಟಾಗಿ, ಸುಖಕರವ ಲ್ಲದಿದ್ದರೂ, ಈ ಬೃಂದಾವನವಾಸಿಗಳಿಗಮಾತ್ರ, ಅಲ್ಲಿನ ದೇಶಗುಣದಿಂದ,