ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮೦ ಶ್ರೀಮದ್ಭಾಗವತವು [ಅಧ್ಯಾ. ೧೮. ವಿನೋಧಿಸಬೇಕೆಂಬ ಉದ್ದೇಶವು ಹುಟ್ಟಿತು. ಒಡನೆಯೇ ಬಲರಾಮ ನನ್ನೂ ಇತರಸ್ನೇಹಿತರನ್ನೂ ಕರೆದುಕೊಂಡು, ತನ್ನ ಮಂದೆಯ ಹಸುಗಳ ನಟ್ಟಿಕೊಂಡು,ಕೊಳಲನ್ನು ನುಡಿಸುತ್ತ ಆ ವನವನ್ನು ಪ್ರವೇಶಿಸಿದನು.ಅಲ್ಲಿ ರಾಮಕೃಷ್ಣರಿಬ್ಬರೂ ತಮ್ಮ ಸ್ನೇಹಿತರೊಡನೆ ಅಲ್ಲಲ್ಲಿ ವಿನೋದದಿಂದ ವಿಹರಿಸುತಿದ್ದರು. ಅವರ ಆಟಪಾಟಗಳ ಸಂಭ್ರಮವನ್ನು ಕೇಳಬೇಕೆ ? ಅಲ್ಲಲ್ಲಿ ಸಿಕ್ಕಿದ ಚಿಗುರುಗಳಿಂದಲೂ, ನವಿಲುಗರಿಗಳಿಂದಲೂ, ಹೂಗೊಂಚ ಲುಗಳಿಂದಲೂ, ಗೈರಿಕಧಾತುಗಳಿಂದ, ಬೇರೆಬೇರೆ ತರದ ಆಭರಣಗಳ ನ್ನು ಮಾಡಿ, ಬೇರೆಬೇರೆ ವೇಷವನ್ನು ಧರಿಸಿ ಕುಣಿದಾಡುವರು. ಆಗಾಗ ಒ ಬ್ಬರಿಗೊಬ್ಬರು ಅವರವರ ಶಕ್ತಿ ತಾರತಮ್ಯವನ್ನು ಪರೀಕ್ಷಿಸುವುದಕ್ಕಾಗಿ, ಬಾ ಹುಯುದ್ಧವನ್ನಾರಂಭಿಸುವರು. ಕೃಷ್ಣನು ಕುಣಿಯುವುದಕ್ಕೆ ತಿಂತಾಗ ಅವನ ಹಿಂದೆ ಕೆಲವರು ಹಾಡುವರು ! ಕೆಲವರು ಕೊಳಲನ್ನು ನುಡಿಸುವರು! ಕೆಲವರು ಮುಂದೆ ನಿಂತು ಅದನ್ನು ನೋಡಿ ಕೃಷ್ಣಾ'ಶಹಬಾಸ್‌'ಭಲೆಭಲೆ” ಎಂದು ಶ್ಲಾಘಿಸುವರು' ನಾಟಕದಲ್ಲಿ ವೇಷಧಾರಿಗಳಾದ ನಟರ, ತಮ್ಮ ತೆಯೇ ವೇಷಧಾರಿಯಾದ ಮತ್ತೊಬ್ಬ ನಟನನ್ನು ಸ್ತುತಿಸುವಂತೆ ಗೋವಾ ಲರೂಪದಿಂದ ದೇವತೆಗಳು, ಗೊಲ್ಲನಾಗಿ ವೇಷವನ್ನು ಧರಿಸಿದ ಪರಮಾತ್ಮ ನನ್ನು , ಆಯಾ ನಟನೆಯನ್ನನುಸರಿಸಿಯೇ ಸ್ತುತಿಸುತಿದ್ದರು. ಕಾಕಪಕ್ಷದಿಂ ದ (ಜುಟ್ಟು ಬಿಡಿಸುವುದಕ್ಕೆ ಮೊದಲು ಮಕ್ಕಳಿಗೆ ಮುಂದಲೆಯಲ್ಲಿ ಎಳೆದು ಕಟ್ಟಿದ ಕೂದಲು) ಶೋಭಿತರಾದ ಆ ರಾಮಕೃಷ್ಣರಿಬ್ಬರೂ ಇತರಬಾಲಕ ರೊಡನೆ ಸೇರಿ, ಒಮ್ಮೊಮ್ಮೆ ಹಿಡಿರಾಟವನ್ನಾಡುವುದು ಒಬ್ಬರಿಗೊ ಬ್ಬರು ಕೈಗೆ ಸಿಕ್ಕದಹಾಗೆ, ನಾನಾಗತಿಯಿಂದ ಸುತ್ತುವದು,, ಹಾರುವು ದು, ಸಮೀಪಕ್ಕೆ ಬಂದವರನ್ನು ಕೆಳಕ್ಕೆ ನೂಕಿ ಓಡುವುದು ದೂರದಲ್ಲಿ ಸಿಂ ತು ತೋಳುಗಳನ್ನು ತಟ್ಟುವುದು, ಎಳೆದಾಡುವುದು, ಕಲ್ಲಯುದ್ಧವನ್ನು ಮಾಡುವುದು, ಹೀಗೆ ವಿಚಿತ್ರವಿನೋದಗಳಿಂದ ಕ್ರೀಡಿತಿದ್ದರು. ಒಮ್ಮೆ ಮ್ಮೆ ತರಬಾಲಕರು ಕುಣಿಯುವುದಕ್ಕೆ ನಿಂತಾಗ, ರಾಮಕೃಷ್ಣರೇ ಅವರ ಹಿಂದೆ, ಹಾಡುತ್ತಲೂ, ವಾದ್ಯಗಳನ್ನು ನುಡಿಸುತ್ತಾ, ತಾಳಹಾಕುತ್ತ ಲೂ ಅವರನ್ನು ಭಲೆ! ಶಹಬಾಸ್” ಎಂದು ಪ್ರೋತ್ಸಾಹಿಸುವರು. ಒ