೧೮೮೨ ಶ್ರೀಮದ್ಭಾಗವತವು [ಅಧ್ಯಾ, ೧೮' ದು ಗುಂಪಿಗೆ ಪ್ರಮುಖರನ್ನಾಗಿ ನಿಲ್ಲಿಸಿದರು. ಕೆಲವರು ರಾಮನ ಪಕ್ಷಕ್ಕೂ, ಮತ್ತೆ ಕೆಲವರು ಕೃಷ್ಯನಪಕ್ಷಕ್ಕೂ ನಿಂತರು. ಈ ಆಟದಲ್ಲಿ ಸೋ ತವರು ಗೆದ್ದವರನ್ನು ತಮ್ಮ ಬೆನ್ನ ಮೇಲೇರಿಸಿಕೊಂಡು, ಒಂದು ಪಾರ್ಶ್ವ ದಿಂದ ಮತ್ತೊಂದು ಪಾರ್ಶ್ವಕ್ಕೆ ಓಡಬೇಕೆಂಬ ನಿಯಮವನ್ನು ಮಾಡಿಕೊಂ ಡಿದ್ದರುಹೀಗೆ ಆ ಉಭಯಪಕ್ಷದವರೂ, ತಮ್ಮ ಜಯಾಪಜಯಗಳಿಗೆ ತಕ್ಕಂತೆ, ಒಮ್ಮೆ ಆರೋಪಕರಾಗಿಯೂ, ಮತ್ತೊಮ್ಮೆ ವಾಹಕರಾಗಿಯೂ ನಾನಾವಿಧವಿನೋದಗಳಿಂದ ಆಟವಾಡುತ್ತ, ತಮ್ಮ ತಮ್ಮ ಮಂದೆಗಳ ನ್ಯೂ ಎಚ್ಚರದಿಂದ ನೋಡಿಕೊಳ್ಳುತ್ತ, ಸಮೀಪದಲ್ಲಿದ್ದ ಭಾಂಡೀರಕವೆಂಬ ಒಂದಾನೊಂದು ಆಲದ ಮರದಬಳಿಗೆ ಬಂದುಸೇರಿದರು. ಅಲ್ಲಿಯೂ ಅವರು ಇದೇ ಆಟವನ್ನಾಡುತ್ತಿರುವಾಗ, ಕೃಷ್ಣಪಕ್ಷದವರಿಗೆ ಆಟವು ಸೋ ತುಹೋಯಿತು, ರಾಮಪಕ್ಷದವರು ಗೆದ್ದರು. ಕೃಷ್ಣನು ರಾಮಪಕ್ಷದವ ನಾದ ಬಾಮನೆಂಬವನನ್ನು ಬೆನ್ನ ಮೇಲೇರಿಸಿಕೊಂಡು ಓಡುತ್ತಿದ್ದನು. ಹಾಗೆಯೇ ಕೃಷ್ಣನಕಡೆಗೆ ಸೇರಿದ್ದ ಭದ್ರಸೇನನೆಂಬವನು ವೃಷಭನೆಂಬವ ನನ್ನು ಹೊತ್ತುಕೊಂಡನು. ಕಪಟವೇಷದಿಂದ ಬಂದ ಪ್ರಲಂಖಾಸು ರನು, ಬಲರಾಮನನ್ನು ಬೆನ್ನ ಮೇಲೇರಿಸಿಕೊಂಡನು. ಈ ಪ್ರಲಂಬನು ಕೃಷ್ಣ ಮನೆ ತಿಕೊಂಡುಹೋಗಬೇಕೆಂಬ ಉದೆಶದಿಂದಲೇ ಬಂದವನಾಗಿದ್ದರೂ, ಹಿಂದೆ ತೃಣಾವರ್ತನಿಗುಂಟಾದ ಅವಸ್ಥೆಯನ್ನು ಸೆನೆಸಿಕೊಂಡು, . ಕೃಷ್ಣ ನನ್ನು ಹೊರುವುದು ಸಾಧ್ಯವಲ್ಲವೆಂದು ತಿಳಿದು, ರಾಮನನ್ನಾದರೂ ಹಾರಿಸಿ ಕೊಂಡು ಹೋಗಬೇಕೆಂಬದುರುದ್ದೇಶದಿಂದಲೇ ಕೃಷ್ಣನ ಪಕ್ಷಕ್ಕೆ ಸೇರಿದ ನು. ರಾಮನು ತನ್ನ ಬೆನ್ನ ಮೇಲೆ ಏರಿ ಕುಳಿತೊಡನೆ, ಈ ಗಾಕ್ಷಸನು, ಇತರ ಬಾಲಕರೆಲ್ಲರಿಗಿಂತಲೂ ಹೆಚ್ಚು ವೇಗದಿಂದ ಓಡಲಾರಂಭಿಸಿ, ಎಷ್ಟು ದೂರದ ವರೆಗೆ ಹೊತ್ತುಕೊಂಡು ಹೋಗಬೇಕೆಂಬ ನಿಯಮವಿದ್ದಿತೋ, ಅದಕ್ಕಿಂತ ಲೂ ಬಹುದೂರದವರೆಗೆ ಸಾಗಿಸಿಬಿಟ್ಟನು. ಎಲ್ಲರೂ ನಿಲ್ಲಬೇಕಾದ ಸ್ಥಳದಲ್ಲಿ ನಿಲ್ಲದೆ ಹೀಗೆ ಅವನೊಬ್ಬನುಮಾತ್ರ, ರಾಮನನ್ನೆತ್ತಿಕೊಂಡು ಬಹುದೂರ ದವರೆಗೆ ಹೋಗುತ್ತಿರುವುದಕ್ಕೆ ಕಾರಣವೇನೆಂದು ಬಾಲಕರೆಲ್ಲರೂ ಸಂಭ್ರಾಂತರಾಗಿ ನೋಡುತಿದ್ದರು. ಪರ್ವತದಂತೆ ಮಹಾಭಾರವುಳ್ಳ ರಾಮ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೯೬
ಗೋಚರ