ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩೮ ಅಧ್ಯಾ ೧೯ .] ದಶಮಸ್ಕಂಧವು. ಹೋಗುವುದಕ್ಕೂ ದಾರಿ ತಿಳಿಯದಂತಾಯಿತು. ಎಲ್ಲಿಯೋ ದೂರದಲ್ಲಿ ಕೆಲವು ಹಸುಗಳು ದಾರಿತಿಳಿಯದೆ ಕೂಗಿಕೊಳ್ಳುವ ಧ್ವನಿಯುಮಾತ್ರ ಇವರ ಕಿವಿಗೆ ಬಿಳುತಿತ್ತು. ಅದರ ದಾರಿಯನ್ನು ತಿಳಿಯುವುದಕ್ಕೂ ದಾರಿತೋರದೆ, ವಿಫಲಪ್ರಯತ್ನಗಾಗಿ ವಾಹದಿಂದಲೂ ಆಯಾಸದಿಂದಲೂ ಬಹಳವಾಗಿ ಬಳಲಿ ಬೇಸತ್ತು, ನಿರಾಶರಾಗಿ ಹಿಂತಿರುಗಿಬಿಟ್ಟರು. ಆದರೆ ಶ್ರೀಕೃಷ್ಣನೊ ಬೃನುಮಾತ್ರ ಧೈರ್ಯಗುಂದದೆ, ಸಮೀಪದಲ್ಲಿ ಕಾಳಮೇಘದಂತೆ ವಿಶಾಲ ವಾಗಿ ಬೆಳೆದಿದ್ದ, ಮಹೋನ್ನತವಾದ ಒಂದು ವೃಕ್ಷವನ್ನೇರಿನಿಂತು, ಸುತ್ತ ಲೂ ಕಣ್ಣಿಟ್ಟು ನೋಡಿದನು. ಅಲ್ಲಿ ಕೆಲವು ಹಸುಗಳು ಆರ್ತಧ್ವಸಿಯಿಂದ ಷ್ಣ ಕರೆಯಲಾರಂಭಿಸಿದನು. ಮೇಘಂಭೀರವಾದ ಈ ಕೃಷ್ಣನ ಕಂಠಧ್ವನಿ ಯನ್ನು ಕೇಳಿ, ಅಲ್ಲಿದ್ದ ಗೋವುಗಳು, ಸಂತೋಷದಿಂದ ಪ್ರತಿಧ್ವನಿಯನ್ನು ಕೊಟ್ಟವು. ಆದರೇನು ? ಇಷ್ಟರಲ್ಲಿ ಆ ಹೊದರಿನ ನಾಲ್ಕು ಕಡೆಗಳಲ್ಲಿ ಯೂ ಅಕಸ್ಮಾತ್ತಾಗಿ ದೊಡ್ಡ ಕಾಡುಗಿಚ್ಚು ತಲೆದೋರಿ, ವಾಯುಸಹಾ ಯದಿಂದ ಉರಿಯನ್ನು ಕೆದರುತ್ತ, ಅಲ್ಲಿನ ವೃಕ್ಷಗಳನ್ನೂ, ಜಂತುಗಳನ್ನೂ ದಹಿಸುತ್ತ ಬರುತಿತ್ತು. ಹೀಗೆ ನಾನಾಕಡೆಗಳಿಂದ ಆವರಿಸಿಬರುತ್ತಿರುವ ಕಾಡುಗಿಯ ನ್ನು ನೋಡಿ, ಗೋವುಗಳೂ, ಗೋಪಾಲಕರೂ ಭಯದಿಂದ ತಳಿಸುತ್ತ, ಮರಣೋನ್ಮುಖರಾದವರು ಭಗವಂತನನ್ನು ಕುರಿತು ಮೊರೆ ಯಿಡುವಂತೆ, ಬಲರಾಮಕೃಷ್ಣರನ್ನು ಕುರಿತು ಕೃಷ್ಣಾ ಕೃಷ್ಣಾ! ಓ ಮಹಾವೀರ್ಯಾ ! ಅಮಿತಪರಾಕ್ರಮವುಳ್ಳ ಓ ರಾಮಾ ! ಇದೋ ! ಇಲ್ಲಿ ನಾವು ಕಾಡುಗಿಚ್ಚಿನಲ್ಲಿ ಸಿಕ್ಕಿ ಸಾಯುತ್ತಿರುವೆವು ! ನಮ್ಮನ್ನು ಕಾಪಾಡಿರಿ! ನೀವಲ್ಲದೆ ಈಗ ನಮಗೆ ಬೇರೆ ದಿಕ್ಕಿಲ್ಲ. ನಿಮ್ಮಲ್ಲಿ ಶರಣಾಗತರಾ ಗಿರುವೆವು. ಕೃಷ್ಮಾ! ನಾವು ನಿಜವಾಗಿ ನಿನಗೆ ಬಂಧುಗಳಲ್ಲವೆ? ನೀನು ತಿಳಿಯದ ಧರ್ಮವಿಲ್ಲ! ನೀನೇ ನಮಗೆ ದಿಕ್ಕು ! ನಿನ್ನನ್ನೇ ನಂಬಿಬಂದ ನಮ್ಮ ಅಪಾಯವನ್ನು ತಪ್ಪಿಸಬಾರದೆ ?” ಎಂದು ಒಂದೇ ಕೂಗಾಗಿ ಕೂ ಗುತಿದ್ದರು. ರಾಜೇಂದ್ರಾ! ಆಗ ಕೃಷ್ಣನು ತನ್ನ ಬಂಧುಗಳೆಲ್ಲರೂ ಹೀಗೆ ದೈನ್ಯದಿಂದ ಮೊರೆಯಿಡುವುದನ್ನು ಕೇಳಿ ಕನಿಕರಗೊಂಡು ಈ ಎಲೈ 4 ಭಯ