ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯ. ೨೦.] ದಶಮಸ್ಕಂಧವು. ಸರ್ವಪ್ರಾಣಿಗಳಿಗೂ ಜೀವನಹೇತುವಾದ ಮಳೆಗಾಲವು ಪ್ರಾರಂಭಿಸಿತು. ದಿಕ್ಕುಗಳೆಲ್ಲವೂ ಮೋಡಕವಿದು ಪ್ರಕಾಶಹೀನವಾದುವು. ಆಗಾಗ ಆಕಾಶ ಹಿಂದ ಸಿಡಿಲುಗಳು ಬಿಳುತಿದ್ದುವು. ಕಾಲಮೇಘಗಳು ಮಿಂಚುಗುಡುಗ ಳೊಡನೆ ಆಕಾಶದಲ್ಲಿ ದಟ್ಟವಾಗಿ ತುಂಬಿದುವು. ಸಹಜವಾಗಿ ಗುಣಗಳಿಂದ ಮೇಲೆನಿಸಿಕೊಂಡು ಬ್ರಹ್ಮಶಬ್ದ ವಾಚ್ಯನಾದ ಜೀವನು, ಪ್ರಕೃತಿಯಿಂದ ಮರೆಸಲ್ಪಟ್ಟಾಗ, ಸತ್ಯಾದಿಗುಣಗಳಿಗೆ ವಶನಾಗಿ, ಜ್ಞಾನಪ್ರಕಾಶವಿಲ್ಲದಿರು ವಂತೆ, ಮೇಘವೃತವಾದ ಆಕಾಶದಲ್ಲಿ ಸೂರ್ಯಚಂದ್ರಾದಿಗ್ರಹಗಳ ಪ್ರ ಕಾಶವಿಲ್ಲದಂತಾಯಿತು. ವರ್ಷಾಧಿಪತಿಯಾದ ಸೂರ್ಯನು, ಹಿಂದಿನ ಎಂ ಟು ತಿಂಗಳ ಕಾಲವೂ ತನ್ನ ಕಿರಣಗಳ ಮೂಲಕವಾಗಿ ಗ್ರಹಿಸಿದ ಜಲರೂ ಪವಾದ ಧನವೆಲ್ಲವನ್ನೂ, ಕಾಲವಶದಿಂದ ಹೊರಕ್ಕೆ ಕಕ್ಕಬೇಕಾದ ಸಮ ಯವು ಬಂದೊದಗಿತು. ಬಿರುಗಾಳಿಯಿಂದ ತೂರಿಸಲ್ಪಟ್ಟ ಮಹಾಮೇಘ ಗಳು, ವಿಶೇಷವಾದ ಮಿಂಚುಗಳನ್ನು ಹೊರಡಿಸುತ್ತ, ತಮ್ಮ ಕರುಣಾರಸ ವನ್ನು ಸುರಿಸುವಂತೆ, ಪ್ರಾಣಿಗಳಿಗೆ ಜೀವನಭೂತವಾದ ನೀರನ್ನು ಸುರಿಯು ತಿದ್ದುವು. ಕಾಮೃತಪಸ್ಸನ್ನು ಮಾಡಿ ಕೃಶನಾದವನು, ಆ ತಪಸ್ಸಿನಿಂದುಂ ಟಾದ ಫಲವನ್ನನುಭವಿಸುವಾಗ, ಮೈಯ್ಯುಬ್ಬಿ ಬೆಳೆಯುವಂತೆ, ಬೇಸಗೆಯ ತಾಪದಿಂದ ಒಣಗಿದ್ದ ಭೂಭಾಗವೆಲ್ಲವೂ ಮಳೆಯ ನೀರಿನಿಂದ ನೆನೆದು ಉ ಲ್ಲಾ ಸಹೊಂದುತ್ತ ಬಂದಿತು. ಕಲಿಪ್ರಾಬಲ್ಯದಲ್ಲಿ ವೈದಿಕಧರ್ಮಗಳೆಲ್ಲವೂ ಕೆಟ್ಟುಹೋಗಿ, ಪಾಷಂಡಧರ್ಮಗಳು ತಲೆಯೆತ್ತುವಂತೆ, ಸಂಧ್ಯಾಕಾಲಗೆ ಳಲ್ಲಿ ಚಂದ್ರಾದಿಗ್ರಹಗಳ ಕಾಂತಿಯು ತಗ್ಗಿ, ಮಿಂಚುಹುಳುಗಳ ಕಾಂತಿಯು ಹೆಚ್ಚಾಗಿ ತೋರುತ್ತಿದ್ದುವು. ಆಚಾರ್ಯನು ತನ್ನ ನಿತ್ಯಕರ್ಮಗಳಿಗಾಗಿ ಹೋಗಿದ್ದಾಗ, ಸದ್ದಿಲ್ಲದೆ ಸುಮ್ಮನೆ ಕಾಲವನ್ನು ಕಳೆಯುತ್ತಿದ್ದ ಶಿಷ್ಯರು, ಅವನು ನಿತ್ಯಕರ್ಮಗಳನ್ನು ಮುಗಿಸಿಕೊಂಡು ಬಂದಾಗ, ಅವನ ಧ್ವನಿಯನ್ನು ಕೇಳಿದೊಡನೆ ವೇದಾಧ್ಯಯನವನ್ನಾರಂಭಿಸುವಂತೆ, ಜಲಾಶ ಯದ ಸಂದುಗೊಂದುಗಳಲ್ಲಿ ಸದ್ದಿಲ್ಲದೆ ಮಲಗಿದ್ದ ಕಪ್ಪೆಗಳು, ಮೇಘಧ್ಯ ನಿಯನ್ನು ಕೇಳಿದೊಡನೆ ರಟಿರಟಶಬ್ದವನ್ನು ಮಾಡತೊಡಗಿದುವು. ಇಂ ಪ್ರಯಪರವಶರಾದ ಅಲ್ಪ ಮನುಷ್ಯರು, ದಾನಭೋಗಗಳೊಂದೂ ಇಲ್ಲದೆ