ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨fo ಶ್ರೀಮದ್ಭಾಗವತವು [ಅಧ್ಯಾ, ೨೦, ಬರುತಿದ್ದರು. ಕೆಚ್ಚಲಿನ ಭಾರದಿಂದ ನಡೆಯಲಾರದ ಹಸುಗಳೂ ಕೂಡ, ಕೃ ಹ್ಮನು ತಮ್ಮ ಹೆಸರನ್ನು ಹಿಡಿದು ಕರೆದೊಡನೆ,ಸಂತೋಷದಿಂದ ಹಾಲನ್ನು ತೊರೆಯಿಕ್ಕುತ್ತೆ, ಗುಡಗುಡನೆ ಅವನಹಿಂದೆ ಓಡುತಿದ್ದುವು. ಹೀಗೆ ಕೃಷ್ಣ ನು ಸಮಸ್ತ ಪರಿವಾರಗಳೊಡನೆ ವನವನ್ನು ಪ್ರವೇಶಿಸಿ, ಆ ವರ್ಷಾಕಾಲದಲ್ಲಿ ಅಲ್ಲಲ್ಲಿ ಸೊಂಪೇರಿ ಬೆಳೆದು ಮಕರಂದವನ್ನು ಸ್ರವಿಸುತ್ತಿರುವ ವಕ್ಷಗಳ ಸಾಲನ್ನೂ, ಅಲ್ಲಲ್ಲಿ ಸಂತೋಷದಿಂದ ವಿಹರಿಸುತ್ತಿರುವ ವನಚರಪ್ರಾಣಿಗ ಳನ್ನೂ, ಅಲ್ಲಲ್ಲಿ ಗಂಭೀರಧ್ವನಿಯಿಂದ ಪ್ರವಹಿಸುತ್ತಿರುವ ಗಿರಿನದಿಗಳನ್ನೂ, ಅಲ್ಲಲ್ಲಿರುವ ಗುಹೆಗಳನ್ನೂ ನೋಡಿ ಆನಂದಿಸುತ್ತಿದ್ದನು. ಎಡೆಬಿಡದೆ ಮಳೆ ಬಿಳುವುದಕ್ಕಾರಂಭಿಸಿದಾಗ, ಕೃಷ್ಣನು ಅಲ್ಲಿಯೇ ಯಾವುದಾದರೂ ಒಂದು ಮರದಡಿಯಲ್ಲಿಯಾಗಲಿ, ಗುಹೆಯಲ್ಲಿಯಾಗಲಿ ಸೇರಿ, ಅಲ್ಲಲ್ಲಿ ಸಿಕ್ಕಿದ ಗಡ್ಡೆಗೆ ಣಸುಗಳನ್ನೇ ತಿಂದು ನಿಂತವಾಗಿದ್ದು ಬಿಡುವನು. ಒಮ್ಮೊಮ್ಮೆ ಮನೆಯಿಂ ದ ಕಟ್ಟಿಕೊಂಡು ಬಂದ ಮೊಸರನ್ನದ ಬುತ್ತಿಯನ್ನು ಹೊಳೆಗಳ ದಡದ ಲ್ಲಿರುವ ಕಲ್ಲು ಬಂಡೆಯಮೇಲಿಟ್ಟುಕೊಂಡು, ಸಂಗಡಿಗರಾದ ಗೋಪಾಲಕ ರೊಡನೆಯೂ, ಬಲರಾಮನೊಡನೆಯೂ ವಿನೋದದಿಂದ ಭುಜಿಸುವನು. ಒಮ್ಮೊಮ್ಮೆ ಅಲ್ಲಲ್ಲಿನ ಹಸುರುಹುಲ್ಲಿನ ನೆಲದಮೇಲೆ ಕುಳಿತು, ತನ್ನ ಮಂ ದೆಯ ಗೋವುಗಳನ್ನು ನೋಡಿ ಆನಂದಿಸುತ್ತಿರುವನು. ಒಂದುಕಡೆಯಲ್ಲಿ ವೃಷಭಗಳು ಫಲವಾಗಿ ಮೇದು ಮರದಿಂದ ಕಣುಚಿ ಮೆಲುಕಾಡು ನಿಂತಿರುವುವು. ಮತ್ತೊಂದು ಕಡೆಯಲ್ಲಿ ಹಸುಗಳು ಕೆಚ್ಚಲಿನ ಭಾರ ರಿಂದ ತೂಗಾಡುತ್ತ ನಡೆಯುವುವು. ಕರುಗಳು ಬಾಲವನ್ನು ನಿಗುರಿಸಿ ಸಂತೋಷದಿಂದ ಹಾರಿಹಾರಿ ನೆಗೆಯುತ್ತ ಓಡಾಡುವುವು. ಹೀಗೆ ಸಮಸ್ತ ಪ್ರಾಣಿಗಳಿಗೂ ಉಲ್ಲಾಸಕರವಾದ ಆ ವರ್ಷಾಕಾಲದ ಸೊಗಸನ್ನು ನೋಡಿ, ಕೃಷ್ಣನು, ತನ್ನಿಂದ ಸೃಷ್ಟವಾದ ಕಾಲಮಹಿಮೆಯನ್ನು ತನ್ನಲ್ಲಿ ತಾನೇ ಕೊಂಡಾಡುತ್ತಿದ್ದನು. ಶರದೃತುವರ್ಕನು. ಹೀಗೆ ರಾಮಕೃಷ್ಣರಿಬ್ಬರೂ ಸಂತೋಷದಿಂದ ವನಪ್ರದೇಶಗಳಲ್ಲಿ ವಿಹರಿಸುತ್ತ ಆ ಎರಡು ತಿಂಗಳ ಕಾಲವನ್ನು ಕಳೆದರು. ಆಮೇಲೆ ಶರದೃ