೧೮೯೧ ಅಧ್ಯಾ, ೨೦.] ದಶಮಸ್ಕಂಧವು ತುವು ಆರಂಭಿಸಿತು. ಕ್ರಮಕ್ರಮವಾಗಿ ಕಾಲಮೇಘಗಳು ಕಣ್ಮರೆಯಾ ದುವು. ಆಕಾಶವು ಸ್ವಚ್ಛವಾಗುತ್ತ ಬಂದಿತು. ಜಲಾಶಯಗಳೆಲ್ಲವೂ ತಿಳಿ ನೀರಿನಿಂದ ಕಂಗೊಳಿಸುತ್ತಿದ್ದುವು. ಬಿರುಗಾಳಿಯು ತಗ್ಗಿ ಸುಖಸ್ಪರ್ಶವಾದ ಮಂದಮಾರುತವು ಬೀಸತೊಡಗಿತು, ಯೋಗಿಗಳ ಮನಸ್ಸುನಡುವೆ ಕಾಲ ವಶದಿಂದ ಯೋಗಭ್ರಷ್ಟವಾದರೂ, ತಿರುಗಿ ಯೋಗಾನುಷ್ಟಾನಬಲದಿಂದ ತನಗೆ ಸಹಜವಾದ ನೈರ್ಮಲ್ಯವನ್ನು ಹೊಂದುವಂತೆ, ವರ್ಷಾಕಾಲವಶದಿಂ ದ ಕೆಸರೇರಿದ ಜಲಾಶಯಗಳೆಲ್ಲವೂ, ಶರತ್ಕಾಲವು ತಲೆದೋರಿದೊಡನೆ, ತ ಮಗೆ ಸಹಜವಾದ ನೈರ್ಮಲ್ಯದಿಂದ ಶೋಭಿಸುತ್ತಿದ್ದುವು. ಬ್ರಹ್ಮಚಯ್ಯ, ಗೃಹಸ್ಯ, ವಾನಪ್ರಸ್ಥ, ಸನ್ಯಾಸಗಳೆಂಬ ನಾಲ್ಕಾಶ್ರಮಗಳಲ್ಲಿರುವವರು, ಕ್ರಮವಾಗಿ ನಡೆಸಬೇಕಾದ ಅಧ್ಯಯನ ಮೊದಲಾದ ಧರಗಳಿಗೆ ಪ್ರತಿಬಂ ಧಕಗಳೆನಿಸಿಕೊಂಡ, ಅಜ್ಞಾನ, ವಿಷಯಾಸಕ್ತಿ, ಅಶಕ್ತಿ, ಕರ ವಾಸನೆಯೆಂ ಬೀನಾಲ್ಕು ದೋಷಗಳೂ ಭಗವದ್ಭಕ್ತಿಯೋಗದಿಂದ ನಿವೃತ್ತವಾಗುವಂತೆ, ಶರತ್ಕಾಲವು ಬಂದೊಡನೆ, ಆಕಾಶದಲ್ಲಿ! ಮೇಷುಗಳೂ, ಕಾಲದಲ್ಲಿ ಮಿಂಚು ಮಳೆಗಾಳಿಗಳ ಸಂಪರ್ಕವೂ, ಭೂಮಿಯಲ್ಲಿ ಕೆಸರೂ, ಜಲದಲ್ಲಿ ಕಾ ಲುಷ್ಯವೂ ಕ್ರಮವಾಗಿ ನೀಗುತ್ತ ಬಂದುವು. ಭಗವದುಪಾಸಕರಾದ ಮು ನಿಗಳು, ಪುತ್ರ ಕಳತ್ರಾದಿಮೋಹಪಾಶಗಳೆಲ್ಲವನ್ನೂ ತೊರೆದು, ಕಲ್ಮಷವ ನ್ನು ನೀಗಿ, ಶಾಂತರಾಗಿ ಪ್ರಕಾಶಿಸುವಂತೆ, ಮೇಫುಗಳು ತಮ್ಮಲ್ಲಿದ್ದ ಜಲ ರೂಪವಾದ ಸರಸ್ವವನ್ನೂ ಬಿಟ್ಟು, ಶುಭಕಾಂತಿಯಿಂದ ಶೋಭಿಸುತಿ ದ್ದುವು. ಜ್ಞಾನಿಗಳು ಯೋಗ್ಯರಾದ ಶಿಷ್ಯರಿಗೆ ಮಾತ್ರ ನಿರ್ಮಲವಾದ ತ ತ್ವಜ್ಞಾನವನ್ನು ಪದೇಶಿಸುವಂತೆ, ಪರೂತಗಳು ಒಂದೊಂದುಕಡೆಯಲ್ಲಿ ಮಾ ತ್ರ ಶುದ್ಧ ಜಲವನ್ನು ಸ್ರವಿಸುತಲಿದ್ದುವು. ಅಜ್ಞಾನಿಗಳು ಕೇವಲಕುಟುಂ ಬಾಸಕ್ತಿಯಲ್ಲಿ ಮುಳುಗಿ,ತಮ್ಮ ಆಯುಃಕಾಲವು ವ್ಯರವಾಗಿ ಕಳೆದು ಹೋ ಗುವುದನ್ನೂ ತಿಳಿಯದಿರುವಂತೆ, ಅಲ್ಪ ಜಲವುಳ್ಳ 'ಕೆರೆಕಟ್ಟೆಗಳ ತಳದ ಲ್ಲಿ ಸೇರಿದ ಜಲಜಂತುಗಳು,ತಾವು ವಾಸಮಾಡತಕ್ಕ ಜಲಾಶಯವು ದಿನದಿನ' ಕೈ ಶೋಷಿಸುತ್ತಿರುವುದನ್ನು ತಿಳಿಯದೆ, ಅಲ್ಪ ಸುಖದಿಂದ ಸಂತೋಷಿಸುತಿ ದ್ದುವು, ದರಿದ್ರರಾದ ಕುಟುಂಬಗಳು, ಹೊಟ್ಟೆಗೆ ಸಾಲದುದಕ್ಕಾಗಿ, ಮೇಲೆ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೦೭
ಗೋಚರ