೧೮೯೨ ಶ್ರೀಮದ್ಭಾಗವತವು [ಅಧ್ಯಾ, ೨೦. ಮೇಲೆ ಸಂಕಟದಿಂದ ಬೇಯುವಂತೆ, ಅಲ್ಪ ಜಲವುಳ್ಳ ಹಳ್ಳಕೊಳ್ಳಗಳಲ್ಲಿ ಸೇರಿಥ ಜಲಜಂತುಗಳಿಗೆ, ಕ್ರಮಕ್ರಮವಾಗಿ ಬಿಸಿಲಿನ ತಾಪವು ತಿಳಿಯುತ್ತ ಬಂದಿತು. ಜ್ಞಾನಿಗಳಿಗೆ, ಆತ್ಮವ್ಯತಿರಿಕ್ತಗಳಾದ ದೇಹಾದಿಗಳಲ್ಲಿ ಕ್ರಮಕ್ರ ಮವಾಗಿ ಅಹಂಕಾರಮಮಕಾರಗಳು ಬಿಟ್ಟುಹೋಗುವಂತೆ ಭೂಮಿಯ ಕಸರೂ, ಸಸ್ಯವರ್ಗಗಳ ಅಪಕ್ವತೆಯೂ, ಮೆಲ್ಲಮೆಲ್ಲಗೆ ನೀಗುತ್ತ ಬಂದುವು. ಆತ್ಮಜ್ಞಾನನಿಷ್ಠನಾದ ಯೋಗಿಯು, ದೇಹಶೇಷಣವಾಗು ತಿದ್ದರೂ, ಅನ್ನ ಪಾನಾದಿಗಳಿಗಾಗಿ ದುಡಿಯದೆ ಶಾಂತನಾಗಿರುವಂತೆ, ಸ ಮುದ್ರವು ಅಲೆಯಾಟಗಳಿಲ್ಲದೆ ನಿಶ್ಚಲವಾದ ನೀರಿನಿಂದ ಶಾಂತವಾಗಿದ್ದಿತು. ಯೋಗಿಗಳು ತಮ್ಮ ಇಂದ್ರಿಯಗಳಮೂಲಕವಾಗಿ ಬಾಹ್ಯವಿಷಯಗಳಿಗೆ ಎಳೆಯಲ್ಪಡುವ ಜ್ಞಾನವನ್ನು, ಪ್ರಾಣನಿರೋಧದಿಂದ, ಆತ್ಮಸಾಕ್ಷಾತ್ಕಾರ ದಕಡೆಗೆ ತಿರುಗಿಸುವಂತೆ, ಕೃಷಿಮಾಡತಕ್ಕವರು, ದೃಢವಾದ ಅಣೆಕಟ್ಟುಗ ಳಿಂದ ಅಲ್ಲಲ್ಲಿನ ಪ್ರವಾಹಗಳನ್ನು ತಡೆದು, ಆ ನೀರನ್ನು ತಮ್ಮ ತಮ್ಮ ಗದ್ದೆ ಗಳಿಗೆ ಸಾಗಿಸುತಿದ್ದರು. ಶ್ರೀಕೃಷ್ಣನು ಗೋಪಸ್ತ್ರೀಯರಿಗೆ ದೇಹಾಭಿ ಮಾನದಿಂದುಂಟಾದ ವಿರಹತಾಪವನ್ನು ಆತ್ಮತತ್ವಬೋಧೆಯಿಂದ ನೀಗಿಸು ವಂತೆ, ಹಗಲಲ್ಲಿ ಸೂರನ ಬಿಸಿಲಿನಿಂದ ಪ್ರಾಣಿಗಳಿಗುಂಟಾದ ತಾಪವನ್ನು , ಚಂದ್ರನು ರಾತ್ರಿಯಲ್ಲಿ ತನ್ನ ಕಿರಣಗಳಿಂದ ನಿವಾರಿಸುತ್ತಿದ್ದನು. ಸತ್ವಗುಣ ಪ್ರಚುರವಾದ ಮನಸ್ಸಿನಲ್ಲಿ ಕಲ್ಮಷವು ನೀಗಿ, ವೇದಾರಗಳು ಸ್ಪಷ್ಟವಾಗಿ ತೋರುವಂತೆ, ಮೇಘುಗಳಿಲ್ಲದೆ ನಿರ್ಮಲವಾದ ಆಕಾಶದಲ್ಲಿ ಗ್ರಹನಕ್ಷತ್ರಾ ದಿಗಳ ಕಾಂತಿಯು ಸ್ಪಷ್ಟವಾಗಿ ತೋರುತ್ತಿದ್ದಿತು. ಭಗವಂತನ ಪೂರ್ಣಾ೦ ಶಭೂತನಾದ ಕೃಷ್ಣನು ಯಾದವರೊಡಗೂಡಿ ಪ್ರಕಾಶಿಸುವಂತೆ, ಆಕಾ ಶ್ರದಲ್ಲಿ ಪೂರ್ಣಚಂದ್ರನು, ನಕ್ಷತ್ರಸಮೂಹದ ನಡುವೆ ಪ್ರಕಾಶಿಸುತ್ತಿದ್ದನು. ಶರತ್ಕಾಲದಲ್ಲಿ ಪುಷ್ಪಸಮೃದ್ದವಾದ ತೋಟಗಳಿಂದ ಬೀಸುತಿದ್ದ ಸಮ ಶೀತೋಷವಾದ ಗಾಳಿಯು, ಸಮಸ್ತ ಜನರ ಸಂತಾಪವನ್ನೂ ನೀಗಿಸುತಿ Wರೂ, ಕೃಷ್ಣನಿಂದ ಮೋಹಿತವಾದ ಮನಸ್ಸುಳ್ಳ ಗೋಪಸ್ತ್ರೀಯರಿಗೆ, ವಿರಹತಾಪವು ಹೆಚ್ಚುತ್ತ ಬಂದಿತು. ಫಲಗಳಿಂದ ಹಿಂಬಾಲಿಸಲ್ಪಡುವ ಭ ಗವದುಪಾಸನಾಕ್ರಿಯೆಗಳಂತೆ, ಈ ಶರದಾಗಮದಲ್ಲಿ ಗೋವುಗಳು, ಹೆ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೦೮
ಗೋಚರ