ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦೦ ಶ್ರೀಮದ್ಭಾಗವತವು [ಅಧ್ಯಾ. ೨೨. ಹಾಸಧ್ವನಿಗಳು ಕಿವಿಗೆ ಬಿದ್ದ ಮೇಲೆ, ಆ ಗೋಪಕನೈಯರಿಗೆ ಮೈಮೇಲೆ ಎಚ್ಚರವುಂಟಾಗಿ, ತಿರುಗಿನೋಡುವಾಗ ದಡದಮೇಲೆ ತಾವಿಟ್ಟಿದ್ದ ಕಡೆ ಯಲ್ಲಿ ತನ್ನ ಸೀರೆಗಳಿರಲಿಲ್ಲ! ಕೃಷ್ಣನು ಮರದ ಕೊಂಬೆಯಮೇಲೆ ಕುಳಿತು ನಗುತ್ತಿರುವನು! ಮರದ ಕೆಳಗೆ ಅವನ ಸ್ನೇಹಿತರು ಕೇಕೆಹಾಕಿ ನಗುತ್ತಿ ರುವರು ! ಈ ಸ್ಥಿತಿಯನ್ನು ನೋಡಿದಾಗ ಅವರಿಗುಂಟಾದ ಭಯವನ್ನೂ, ನಾಚಿಕೆಯನ್ನೂ ಕೇಳಬೇಕೆ” ಎಲ್ಲರೂ ತಲೆಯನ್ನು ತಗ್ಗಿಸಿ, ಕಂಠ ಪ್ರಮಾಣದವರೆಗೆ ನೀರಿನಲ್ಲಿ ಮುಳುಗಿ, ಆ ಜಲದಲ್ಲಿಯೇ ತಮ್ಮ ಆವ ಯವಗಳನ್ನು ಮರೆಸಿಕೊಂಡು, ಹಿಂದುಮುಂದು ತೋರದೆ ಕಳವಳಿಸುತಿದ್ದ ರು. ಆಗ ಕೃಷ್ಣನು ಅವರ ಕಳವಳವನ್ನು ನೋಡಿ ನಗುತ್ತ, ಪರಿಹಾಸ ವಾಕ್ಯದಿಂದ ಅವರನ್ನು ಕುರಿತು (( ಎಲೈ ಬಾಲೆಯರೆ ! ಭಯಪಡಬೇಡಿರಿ ! ಇದೇ ! ನಿಮ್ಮ ಸೀರೆಗಳೆಲ್ಲವೂ ನನ್ನಲ್ಲಿರುವುವು ! ನೀವು ಇಲ್ಲಿಗೆ ಬಂದು, ನಿಮ್ಮ ನಿಮ್ಮ ಸೀರೆಗಳನ್ನು ಧಾರಾಳವಾಗಿ ಕೇಳಿ ತೆಗೆದುಕೊಳ್ಳಬಹುದು! ನಾ ನು ಪರಿಹಾಸಕ್ಕಾಗಿ ಹೇಳುವೆನೆಂದು ತಿಳಿಯಬೇಡಿರಿ! ನಿಜವಾಗಿ ಹೇಳುವೆನು ! ಅಯ್ಯೋ ಪಾಪ ! ನೀವು ಕಳೆದ ಒಂದು ತಿಂಗಳಿಂದಲೂ ವ್ರತವನ್ನು ಮಾಡಿ ಎಷ್ಟೊ ಆಯಾಸಪಟ್ಟಿರುವಿರಿ : ನಿಮ್ಮ ಮೈಯೆಲ್ಲವೂ ಬಹಳ ಬಡವಾಗಿ ರುವುದು ! ಈ ಸ್ಥಿತಿಯಲ್ಲಿ ನಿಮ್ಮೊಡನೆ ನನಗೆ ಸರಿಹಾಸವೆ ? ಅಷ್ಟೇಕೆ ? ಇದುವರೆಗೆ ನಾನು ಎಂದಿಗೂ ಸುಳ್ಳಾಡಿದವನಲ್ಲ ! ಈಗ ನೀವು ಒಬ್ಬೊಬ್ಬ ರಾಗಿಯಾಗಲಿ, ಎಲ್ಲರೂ ಒಟ್ಟಾಗಿ ಸೇರಿಯಾಗಲಿ, ಇಲ್ಲಿಗೆ ಬಂದು ನಿಮ್ಮ ನಿಮ್ಮ ವಸ್ತ್ರಗಳನ್ನು ತೆಗೆದುಕೊಳ್ಳಬಹುದು,” ಎಂದನು. ಎಷ್ಟು ಹೇಳಿ ದರೇನು ? ಆ ಗೋಪಕನೈಯರು ಇನ್ನೂ ಮದಿವೆಯಿಲ್ಲದ ಸಣ್ಣ ಹುಡುಗಿ ಯರಾಗಿದ್ದರೂ, ಗಂಡಸರಮುಂದೆ ನಿರ್ವಾಣವಾಗಿ ಬಂದು ನಿಲ್ಲುವುದಕ್ಕೆ ಮನಸೊಪ್ಪವುದೆ ? ಅವರೆಲ್ಲರೂ ನಾಚಿಕೆಯಿಂದ ಬಗ್ಗಿದ ತಲೆಯನ್ನೆತ್ತ ದೆ ಹಾಗೆಯೇ ನೀರಿನಲ್ಲಿ ನಿಂತಿದ್ದರು. ಅವರಿಗೆ ಕೃಷ್ಣನ ಪರಿಹಾಸೋಕ್ಕಿ 'ಯನ್ನು ಕೇಳಿ ಮನಸ್ಸಿನಲ್ಲಿ ಕೋಪವು ಅಂಕುರಿಸುತ್ತಿದ್ದರೂ, ಅವನಲ್ಲಿದ್ದ ಸಹಜವಾದ ಪ್ರೇಮವು,ಅವರ ಕೋಪವನ್ನು ಹಾಗೆಯೇ ಅಡಗಿಸಿಬಿಡುತ್ತಿತ್ತು.