ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೦೩ ಅಧ್ಯಾ, ೨೨.] ದಶಮಸ್ಕಂಧವು. ಪ್ರಾರ್ಥಿಸಿರಿ! ಹಾಗಿಲ್ಲದೆ ನಿಮ್ಮ ಪಾಪವು ನೀಗಲಾರದು. ಹಾಗೆ ಮಾಡಿ ದಮೇಲೆ ನಿಮ್ಮ ಸೀರೆಗಳನ್ನು ಕೊಟ್ಟುಬಿಡುವೆನು” ಎಂದನು. ಕೃಷ್ಣನು ಹೇಳಿದ ಈ ಮಾತೂ ಧರ್ಮಯುಕ್ತವಾಗಿ ತೋರಿದುದರಿಂದ, ಆ ಕನ್ಯಯ ರೊಬ್ಬೊಬ್ಬರೂ, ಒಂದು ಕೈಯಿಂದಮಾತ್ರ ತಮ್ಮ ನಾಚಿಕೆಯನ್ನು ಮರೆ ಸಿಕೊಂಡು, ಎದೆಯಮೇಲಿದ್ದ ಮತ್ತೊಂದು ಕೈಯನ್ನು ಮೇಲಕ್ಕೆತ್ತಿ, ಆ ಏಕಹಸ್ತದಿಂದಲೇ ನಮಸ್ಕರಿಸಿದರು. ಅದನ್ನು ನೋಡಿ ಕೃಷ್ಣನು ಕೋಪ ವನ್ನು ನಟಿಸುತ್ತ ಛೇ ! ಛೇ ! ಇದೇನಿದು ? ಒಂದು ಕೈಯಿಂದ ನಮ ಸ್ವಾರವೆ : ಓ ಕನೈಯರೆ ! ಒಂದು ಕೈಯಿಂದ ನಮಸ್ಕಾರಮಾಡಿದವ ರಿಗೆ, ಆ ಕೈಯನ್ನು ಕತ್ತರಿಸಿ ಹಾಕುವುದೇ ಉಚಿತದಂಡವೆಂದು ಶಾಸ್ತ್ರಜ್ಞ ರು ವಿಧಿಸಿರುವರು. ಆದುದರಿಂದ ಮನುಷ್ಯನು ಯಾವಾಗಲೂ ಎರ ಡು ಕೈಗಳಿಂದಲೇ ನಮಸ್ಕರಿಸಬೇಕೆಂಬ ನಿಯಮವನ್ನು ನೀವು ಕೇಳಿಲ್ಲವೇನು ? ಈಗ ನೀವು ಅಪರಾಧಕ್ಷಾಪಣಕ್ಕಾಗಿ ಮಾಡಿದ ಕಾರ್ಯವು ನಿಮಗೆ ಮತ್ತಷ್ಟು ಪಾಪಹೇತುವಾಯಿತಲ್ಲಾ! ಎರಡು ಕೈಗ ಛನ್ನೂ ತಲೆಯಮೇಲೆ ಜೋಡಿಸಿಟ್ಟು ನಮಸ್ಕರಿಸಿದವರಿಗಲ್ಲದೆ ನಾನು ಪ್ರಸ ನಾಗಲಾರೆನು.” ಎಂದನು. ಗೋಪಕನೈಯರಿಗೆ ಆ ಮಾತೂ ಯುಕ್ತ ವಾಗಿಯೇ ತೋರಿತು! ಹೇಗಾದರೂ ತಮ್ಮ ವಸ್ತಗಳು ತಮಗೆ ಲಭಿಸಿ, ತಾವು ಕಷ್ಟಪಟ್ಟು ನಡೆಸಿದ ವ್ರತವು ಸಾರ್ಥಕವಾಗಬೇಕೆಂದು ಬಯಸು ತಿದ್ದ ಆ ಕುಮಾರಿಯರು, ಸಮಸ್ತವ್ರತಗಳಿಗೂ ಫಲಭೂತನಾಗಿಯೂ,ಸಮ ಸೃಪಾಪಗಳಿಗೂ ಪ್ರಾಯಶ್ಚಿ ತರೂಪನಾಗಿಯೂ ಇರುವ ಆ ಕೃಷ್ಣನ ಮಾತಿನಂತೆ, ನಿಶೇಷವಾಗಿ ಲಜ್ಜೆಯನ್ನು ಬಿಟ್ಟು, ಎರಡು ಕೈಗಳನ್ನೂ ಮೇ ಲಕ್ಕೆತ್ತಿ, ತಲೆಯಮೇಲಿಟ್ಟು, ಅಂಜಲಿಬಂಧಪೂರ್ವಕವಾಗಿ ನಮಸ್ಕರಿಸಿದರು. ಆಗ ಕೃಷ್ಣನಿಗೆ ಅವರ ನಿಷ್ಕಪಟಭಾವವನ್ನು ನೋಡಿ ಸಂತೋಷವಾಯಿತು. ಆಗಲೂ ಅವರು ಲಜ್ಜೆಯಿಂದ ನೆಟ್ಟಗೆ ನಿಲ್ಲಲಾರದೆ, ಮೈಬಗ್ಗಿ ನಿಂತಿರುವು ದನ್ನು ನೋಡಿ, ಅವರಲ್ಲಿ ಕನಿಕರಗೊಂಡು, ಅವರವರ ವಸ್ತ್ರಗಳನ್ನು ಹಿಂತಿ ರುಗಿ ಕೊಟ್ಟು ಬಿಟ್ಟನು. ರಾಜೇಂದ್ರಾ! ಹೀಗೆ ಕೃಷ್ಣನು, ಆ ಅರಿಯದ ಹುಡುಗಿಯರ ಸೀರೆಗಳೆಲ್ಲವನ್ನೂ ಅಪಹರಿಸಿದನು!ಅವರನ್ನು ಹಾಸ್ಯಮಾಡಿ ಹೆ