ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೧೨ ಶ್ರೀಮದ್ಭಾಗವತದ [ಅಧ್ಯಾ, ೨೩. ಕೃಷ್ಣನು ಈ ಮಾತನ್ನು ಹೇಳಿದಮೇಲೆ, ಅವರೆಲ್ಲರೂ ತಮ್ಮ ಯಜ್ಞವಾ ಟಕ್ಕೆ ಹಿಂತಿರುಗಿದರು. ಅವರ ಪತಿಗಳೂ ಕೂಡ ಮೊದಲು ತಮಗಿದ್ದ ಕೋ ಹವನ್ನು ಮರೆತು, ಅವರನ್ನಾದರಿಸಿ ಕರೆದುಕೊಂಡು, ಪಸಮೇತರಾಗಿ ತಮ್ಮ ಯಜ್ಞಕಾರವನ್ನು ಮುಗಿಸಿದರು. ಕೃಷ್ಣಸಾನ್ನಿಧ್ಯದಿಂದ ಹಿಂತಿ ರುಗಿ ಬಂದ ಅಷ್ಟು ಮಂದಿ ಬ್ರಾಹ್ಮಣಪತ್ನಿ ಯರಲ್ಲಿ, ಒಬ್ಬಳುಮಾತ್ರ, ತನ್ನ ಪತಿಯಿಂದ ತಿರಸ್ಕೃತಳಾಗಿ, “ಕೃಷ್ಣಾ ನೀನೇ ಗತಿ !” ಎಂದು ಸ್ವಲ್ಪ ತಿನವರೆಗೆ ಕೃಷ್ಣನನ್ನು ಸ್ಮರಿಸುತ್ತ, ಆ ಭಾವನಾವಿಶೇಷದಿಂದ ತನ್ನಯ ತ್ವವನ್ನು ಹೊಂದಿ, ಆಗಲೇ ತನಗೆ ಕರಮೂಲಕವಾಗಿ ಬಂದ ದೇಹವನ್ನು ನೀಗಿ, ಮುಕ್ತಿಯನ್ನೂ ಹೊಂದಿದಳು. ರಾಜಾ ! ಇತ್ತಲಾಗಿ ಕೃಷ್ಣನು ಆ ಬ್ರಾಹ್ಮಣಪತ್ನಿ ಯರು ತಂದು ಕೊಟ್ಟ ಭಕ್ಷ್ಯಭೋಜ್ಯಾದಿಗಳನ್ನು ತನ್ನ ಸಂಗಡಿಗರೆಲ್ಲರಿಗೂ ಕೊಟ್ಟು, ತಾ ನೂ ಭೋಜನಮಾಡಿ ಸಂತುಷ್ಟನಾದನು. ಹೀಗೆ ಲೀಲಾಮನುಷ್ಯನಾದ ಭಗವಂತನು, ಲೋಕನಟನೆಯನ್ನು ನಟಿಸುತ್ತ, ಗೋವುಗಳನ್ನೂ, ಗೋ ಪಾಲಕರನ್ನೂ , ಗೋಪಿಯರನ್ನೂ, ತನ್ನ ರೂಪದಿಂದಲೂ,ತನ್ನ ಮಾತುಗಳಿಂ ದಲೂ, ತನ್ನ ಕಾವ್ಯಗಳಿಂದಲೂ ಸಂತೋಷಗೊಳಿಸುತ್ತಿದ್ದನು. ಇಷ್ಟರಲ್ಲಿ ಇ ತಲಾಗಿ ಬ್ರಾಹ್ಮಣರಿಗೂ ವಿವೇಕಜ್ಞಾನವು ಹುಟ್ಟಿತು. ಸಾಕ್ಷಾದ್ಭಗವಂ ತನೇ ಕೃಷ್ಣರೂಪದಿಂದ ಯದುಕುಲದಲ್ಲಿ ಅವತರಿಸಿರುವ ಸಂಗತಿಯೂ ಅವರ ಸ್ಮರಣೆಗೆ ಬಂದಿತು. ಲೀಲಾಮಾನುಷರೂಪದಿಂದಿರುವ ಆ ರಾಮಕ್ಕ, ಹೃರಿಬ್ಬರೂ, ತಮ್ಮಲ್ಲಿ ಅನ್ನಾರ್ಥಿಗಳಾಗಿ ಯಾಚಿಸಿದಾಗ, ಅವರನ್ನು ತಾ ವು ತಿರಸ್ಕರಿಸಿದ ಮಹಾಪರಾಧಕ್ಕಾಗಿ ಪಶ್ಚಾತ್ತಾಪಪಡುತ್ತ, ಮನಸ್ಸಿನಲ್ಲಿ ದುಃಖದಿಂದ ಕುದಿಯುತ್ತಿದ್ದರು. ತಮ್ಮ ಪತ್ನಿಯರಿಗೆ ಆ ಭಗವಂತನಲ್ಲಿರುವ ನಿರ್ಜಿತುಕವಾದ ಭಕ್ತಿಯನ್ನೂ, ತಮ್ಮ ಅಜ್ಞತೆಯನ್ನೂ ನೋಡಿ ತಮ್ಮ ನ್ನು ತಾವೇ ಹೀಗೆಂದು ನಿಂದಿಸಿಕೊಳ್ಳುವರು, .' ನಾವು ಹುಟ್ಟಿ ಫಲ ವೇನು? ನಮ್ಮ ಇಷ್ಟು ಮಂದಿಮಿತ್ರರು! ನಮ್ಮ ಆಚಾರಗಳು! ನಮ್ಮ ವ್ರತ ಗಳು! ನಾವು ಇದುವರೆಗೆ ಅನೇಕಶಾಸ್ತ್ರಗಳನ್ನೊದಿದುದು! ನಮ್ಮ ಕುಲೋ ಇತಿ! ನಮ್ಮ ಯಜ್ಞಾದಿಕ್ರಿಯೆಗಳು ನಮ್ಮ ಕಲ್ಮಶಕ್ತಿ! ಇವೆಲ್ಲವನ್ನೂ