ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಥ್ಯಾ. ೨೪.] ದಶಮಸ್ಕಂಧನು. ೧೯೧ ನ ಸುಖದುಃಖ, ಭಯ,ಮುಂತಾದುವುಗಳೂ ಕರಾನುಸಾರವಾಗಿಯೇ ನಡ ಯುವುವು. ಸತ್ತಮೇಲೆ ಅನುಭವಿಸಬೇಕಾದ ಲೋಕಾಂತರಸುಖಗಳೂ ಕ ರಾನುಸಾರವಾಗಿರುವುವು! ಆದರೆ ಅವರವರ ಕಮ್ಮಾನುಸಾರವಾಗಿ, ಅವರ ವರಿಗೆ ಆಯಾಫಲಗಳನ್ನು ತಂದು ಜೋಡಿಸುವುದಕ್ಕಾದರೂ ಈಶ್ವರನೊ ಬೃನಿರಬೇಕಲ್ಲವೆ ?” ಎಂದರೆ, ಜನಕಾ! ಆ ಈಶ್ವರನೂ ಆವರವರ ಕಮ್ಮಾ ನುಸಾರವಾಗಿಯೇ ಫಲವನ್ನು ಕೊಡತಕ್ಕವನು. ಆ ವಿಷಯದಲ್ಲಿ ತಾನು ಸ್ವಾತಂತ್ರವನ್ನು ವಹಿಸದೆ ಆಯಾ ಕರಕರ್ತಗಳನ್ನೇ ಅನುಸರಿಸುವನು. ಹೀಗೆ ಸತ್ಯೇಶ್ವರನೇ ಈ ವಿಷಯದಲ್ಲಿ ಪರತಂತ್ರನಾಗಿ ಕಾವ್ಯವನ್ನು ನಡೆ ಸುತ್ತಿರುವಾಗ, ಆಯಾ ಕಾನುವರ್ತಿಗಳಾಗಿರುವ ಪ್ರಾಣಿಗಳ ವಿಷಯದ | ಇಂದ್ರನು ಮಾಡತಕ್ಕುದೇನಿದೆ? ಸತ್ತಾಟಗುಣಗಳಿಗೆ ತಕ್ಕಂತೆ ಆಯಾ ಪ್ರಾಣಿಗಳ ಸ್ವಭಾವವು ಬೇರ್ಪಡುವುವು. ಆ ಸ್ವಭಾವಕ್ಕೆ ತಕ್ಕಂತೆ ಕರಗ ಇಲ್ಲಿ ಪ್ರವೃತ್ತಿಯುಂಟಾಗುವುದು. ಆಯಾಕರಗಳಿಗೆ ತಕ್ಕಂತೆ ಫಲವನ್ನು ಹೊಂದುವುವು ಹೀಗೆ ಜೀವರಾತಿಯೆಲ್ಲವೂ ತಮ್ಮ ಸ್ವಭಾವಕ್ಕೆ ಕಟ್ಟುಬಿದ್ದು, ಆಸ್ವಭಾವವನ್ನೇ ಅನುವರ್ತಿಸುತ್ತಿರುವುವು. ದೇವಾಸುರಮನುಷ್ಯಾದಿಗಳೊ ಡಗೂಡಿದ ಸಮಸ್ತಪ್ರಪಂಚವೂ, ಸಾತ್ವಿಕ ರಾಜನ ತಾಮಸಗಳೆಂಬ ಸ್ವ ಸ್ವಭಾವದಲ್ಲಿಯೇ ನೆಲೆಗೊಂಡಿರುವುದು ಜನಕಾ! ಈಗ ನೀವು ಆರಾಧಿಸ ಬೇಕೆಂದಿರುವ ಇಂದ್ರನೂ ತು ಕರಾನುಗುಣವಾಗಿಯೇ ನಡೆಸಲ್ಪಡುತ್ತಿ ರುವನು. ಹೀಗೆ ತಾನೇ ಅಸ್ವತಂತ್ರನಾದ ಇಂದ್ರನು, ನಿಮಗೆ ಯಾವ ಪ ರುಷಾರವನ್ನು ಕೈಗೂಡಿಸಬಲ್ಲನು? ತನ್ನ ಸ್ಥಿತಿಯನ್ನೇ ತಾನು ಬದಲಾಯಿಸಿ ಕೊಳ್ಳಲಾರದವನು, ನಿಮಗೆ ಕರಾನುಗುಣವಾಗಿ ಅನುಭವಿಸಬೇಕಾದುದ ನ್ನು ಬದಲಾಯಿಸಬಲ್ಲನೆ? ಸತ್ಯೇಶ್ವರನೊಬ್ಬನುಮಾತ್ರ, ಆಯಾಜೀವಗಳನ್ನು ಸದಸತಾರಗಳಲ್ಲಿ ಪ್ರರಿಸುವುದರಮಲಕವಾಗಿ, ಅವರ ಸುಖದುಃಖ ಗಳಿಗೆ ದಾರಿಯನ್ನು ತೋರಿಸಬಲ್ಲನೇಹೊರತು, ಫಲವನ್ನು ಕೊಡುವಾಗಮಾ ತ್ರ,ತಾನೂ,ಆ ಕರಗಳನ್ನೇ ಆಧಾರವಾಗಿಟ್ಟುಕೊಳ್ಳುವನು. ಈಶ್ವರನೂ ಈ ವಿಷಯದಲ್ಲಿ ಪರತಂತ್ರನೇ! ಕರದಿಂದಲೇ ಪ್ರತಿಜಂತುವೂ ಉತ್ತಮಾಧ ಮಜನ್ಮಗಳನ್ನು ಹೊಂದಿ, ಕೊನೆಗೆ ಅದನ್ನು ಬಿಟ್ಟು ಬಿಡುವುದು, ಶತ್ರುವೆಂ