೧೧೮ ಶ್ರೀಮದ್ಭಾಗವತವು [ಅಧ್ಯಾ. ೨೪, ದೂ, ಮಿತ್ರನೆಂದೂ, ಉದಾಸೀನನೆಂದೂ, ಗುರುವೆಂದೂ, ಇಂದ್ರಾದಿ ದೇವತೆಗಳೆಂದೂ ಹೇಳಿಸಿಕೊಳ್ಳುವುದೆಲ್ಲವೂ ಅವರವರ ಕಮ್ಮ ಮಲಕವಾಗಿ ಬಂದ ಸ್ಥಿತಿಗತಿಗಳೇಹೊರತು ಬೇರೆಯಲ್ಲ ! ಹೀಗೆ ಕರವೇ ಅವರವರ ಸು ಖದುಃಖಗಳಿಗೆ ಹೇತುವಾದುದರಿಂದ, ನಿಜಸ್ವಭಾವಕ್ಕೆ ತಕ್ಕಂತೆ ಕರಗಳ ನ್ನು ನಡೆಸತಕ್ಕ ಪುರುಷನು, ತನ್ನ ಸ್ಥಿತಿಗತಿಗೆ ಕಾರಣವಾದ ಕರವನ್ನಲ್ಲವೇ ಗೌರವಿಸಿ ಪೂಜಿಸಬೇಕು ! ಆ ಕ್ಯದ ಪ್ರಭಾವವನ್ನು ಎಷ್ಟೆಂದು ಹೇಳ ಬಹುದು? ಜನಕಾ! ಮುಖ್ಯವಾಗಿ ಲೋಕದಲ್ಲಿ ಯಾವ ಪುರುಷನು ಯಾವ ವೃತ್ತಿಯಿಂದ ಜೀವಿಸುವನೋ ಆ ವ್ಯಕ್ತಿಗೆ ಸಾಧನಗಳಾದ ವಸ್ತುಗಳನ್ನೇ ಅವನು ದೈವವೆಂದು ಭಾವಿಸಿ ಪೂಜಿಸಬೇಕಾದುದುಚಿತವು. ತನಗೆ ಜೀವನ ಹೇತುವಾದ ವಸ್ತುವನ್ನು ಬಿಟ್ಟು ಬೇರೊಂದನ್ನು ಪೂಜಿಸತಕ್ಕವನು, ಎಂದಿ ಗೂ ಅದರಿಂದ ಕ್ಷೇಮವನ್ನು ಪಡೆಯಲಾರನು. ಕೈಹಿಡಿದ ಗಂಡನನ್ನು ಬಿ ಟ್ಟು ಜ ರವನ್ನು ಸೇವಿಸುವ ಹೆಂಗಸಿನ ಸ್ಥಿತಿಯಂತೆ, ಅವನ ಸ್ಥಿತಿಯು ಕೊ ನೆಗೆ ಹಾಸ್ಯಾಸ್ಪದವಾಗುವುದು. ಬ್ರಾಹ್ಮಣನು ವೇದಾಧ್ಯಯನದಿಂದ ಕ್ಷತ್ರಿಯನು ರಾಜ್ಯಪಾಲನದಿಂದಲೂ, ವೈಶ್ಯನು ಕೃಷಿವಾಣಿಜ್ಞಾದಿವಾರ್ತೆ ಯಿಂದಲೂ, ಶೂದ್ರನು ಈ ಮೇಲಿನ ಮೂರುವರ್ಣದವರ ಸೇವೆಯಿಂದ ಲೂ ಜೀವಿಸಬೇಕೆಂಬುದು ಶಾಸ್ತ್ರವಿಧಿಯು! ವಾರ್ತೆಯೆಂಬುದರಲ್ಲಿ ಕೃಷಿ, ವಾಣಿಜ್ಯ, ಗೋರಕ್ಷಣೆ, ಕುಸೀದ ಗಳೆಂಬ (ಹಣವನ್ನು ಬಡ್ಡಿಗೆ ಕೊಟ್ಟು, ಅದರಿಂದ ಜೀವಿಸುವುದು) ನಾಲ್ಕು ಭೇದಗಳುಂಟು! ನಾವು ಯಾವಾಗ ಲೂ ಗೋರಕ್ಷಣೆಯಿಂದ ಜೀವಿಸತಕ್ಕವರು! ಈ ನಮ್ಮ ವೃತ್ತಿಗೂ ಇಂದ್ರ ನಿಗೂ ಸಂಬಂಧವೇನು? ಸತ್ವ, ರಜಸ್ಸು, ತಮಸ್ಸು ಎಂಬೀ ಮೂರುಗು ಣಗಳೂ ಕ್ರಮವಾಗಿ ಪ್ರಾಣಿಗಳ ಉತ್ಪತ್ತಿ, ಸ್ಥಿತಿ, ಲಯಗಳಿಗೆ ಕಾರಣಗಳೆ ನಿಸಿರುವುವು. ಈ ಮೂರುಗಣಗಳಿಂದಲೇ ಪ್ರಪಂಚವ್ಯಾಪಾರವೆಲ್ಲವೂ ನ ಡೆದು ಹೋಗುವುದು. ಇವುಗಳಲ್ಲಿ ರಜೋಗುಣವೆಂಬುದು ಸ್ತ್ರೀ ಪುರುಷರ ಸಂಯೋಗಕ್ಕೆ ಹೇತುವಾಗಿ, ಅದರಿಂದ ಜಗತ್ತಿನ ಉತ್ಪತ್ತಿಕಾವ್ಯವು ನಡೆ ಯುವುದು. ಮೇಘುಗಳೂ ಆ ರಜಸ್ಟಭಾವದಿಂದ ಪ್ರೇರಿಸಲ್ಪಟ್ಟ. ಕಾಲ ಕಾಲಕ್ಕೆ ಮಳೆಯನ್ನು ಸುರಿಸಿಹೋಗುವುವು. ಪ್ರಾಣಿಗಳಿಗೆ ಆ ಮಳೆಯಿಂದ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೩೮
ಗೋಚರ