ಅಧ್ಯಾ, ೨೪.] ದಶಮಸ್ಕಂಧವು. ೧೯೧ ಜೀವನವು ನಡೆದುಹೋಗುವುದು! ಇದರಲ್ಲಿ ಇಂದ್ರನು ಮಾಡಬೇಕಾದ ಕಾ ರವೇನಿದೆ? ಜನಕ ! ನಾವು ಗೊಲ್ಲರು ! ನಮಗೆ ಪಟ್ಟಣಗಳಾಗಲಿ, ಜನಪದಗಳಾಗಲಿ, ಗ್ರಾಮಗಳಾಗಲಿ, ಮನೆಗಳಾಗಲಿ ಯಾವುದೂ ಇಲ್ಲ ! ನಾವು ಯಾವಾಗಲೂ ಕಾಡುಗುಡ್ಡಗಳಲ್ಲಿದ್ದು ಕಾಲವನ್ನು ಕಳೆಯತಕ್ಕ ವರು ಪಶುಗಳಿಂದಲೇ ನಮಗೆ ಜೀವನವು. ಬ್ರಾಹ್ಮಣರು ನಮಗೆ ಕುಲ ಗುರುಗಳು! ಬೆಟ್ಟಗಳು ನಮಗೆ ವಾಸಸ್ಥಾನಗಳು! ಆದುದರಿಂದ ನಾವು ಗೋವುಗಳನ್ನೂ , ಬ್ರಾಹ್ಮಣರನ್ನೂ, ಪಾತಗಳನ್ನೂ ಆರಾಧಿಸಬೇಕಲ್ಲದೆ, ಇಂದ್ರನಿಂದ ನಮಗೇನು? ಈಗ ನೀವೆಲ್ಲರೂ ಆ ಇಂದ್ರನ ಪೂಜೆಗಾಗಿ ಸಿ ದಗೊಳಿಸಿರತಕ್ಕ ಸಾಧನಗಳಿಂದಲೇ, ಈ ಪತ್ರವನ್ನು ಪೂಜಿಸಿರಿ! ಬಗೆಬಗೆ ಯ ಅಡಿಗೆಗಳನ್ನು ಸಿದ್ಧಪಡಿಸಿರಿ ! ತೊವ್ವ, ಪಾಯಸ, ಗೋದುವೆಯನ್ನ, ಚಕ್ಕುಲಿ, ಕಜ್ಞಾಯ ಮುಂತಾದುವುಗಳೆಲ್ಲಾ ಸಿದ್ಧವಾಗಲಿ! ನಮ್ಮ ಮಂದೆ ಯಲ್ಲಿ ಸಿಕ್ಕುವ ಹಾಲು, ಮೊಸರು, ಬೆಣ್ಣೆ ಮುಂತಾದುವುಗಳನ್ನೆಲ್ಲಾ ಸಂ ಗ್ರಹಿಸಿಡಿರಿ: ಬ್ರಹ್ಮವಾದಿಗಳಾದ ಬ್ರಾಹ್ಮಣರ ಮೂಲಕವಾಗಿ ಹೋಮಕಾ ಲ್ಯಗಳನ್ನು ಮಾಡಿಸಿರಿ! ಅವರಿಗೆ ಮೃಷ್ಟಾನ್ನ ಭೋಜನವನ್ನಿ ಡಿರಿ! ಭೂರಿದಕ್ಷಿಣೆ ಗಳನ್ನು ಕೊಡಿರಿ! ಗೋದಾನವನ್ನು ಮಾಡಿರಿ! ಮತ್ತು ನಮ್ಮ ಮಂದೆಯನ್ನು ಕಾಯುತ್ತಿರುವ ನಾಯಿಗಳಿಗೂ, ಚಂಡಾಲರಿಗೂ, ಪತಿತರಿಗೂ ಇತ ರ ಹೀನಜಾತಿಯವರಿಗೂ ಸಮೃದ್ಧವಾಗಿ ಅನ್ನವನ್ನಿಕ್ಕಿ ಸಂತೋಷ ಪಡಿಸಿರಿ! ನಮ್ಮ ಗೋತ್ರಗಳಿಗೆ ಸಮೃದ್ಧವಾಗಿ ಹುಲ್ಲನ್ನು ಹಾಕಿರಿ ! ಈ ಪತಕ್ಕೂ ಬಲಿಯನ್ನು ಕೊಟ್ಟು ಪೂಜಿಸಿರಿ! ನಾವೆಲ್ಲರೂ ಸುಗಂಧವಸ್ತಾ ದಿಗಳಿಂದ ಅಲಂಕೃತರಾಗಿ, ಹಬ್ಬದೂಟವನ್ನು ಮಾಡಿ, ನಮ್ಮ ಗೋವುಗಳೆ ನ್ಯೂ , ಬ್ರಾಹ್ಮಣರನ್ನೂ, ಅಗ್ನಿಗಳನ್ನೂ, ಈ ಪಾತಗಳನ್ನೂ ಪ್ರದಕ್ಷಿಣ ಮಾಡುವೆವು. ಜನಕಾ! ಇದೇ ನನ್ನ ಅಭಿಪ್ರಾಯವು! ಇದರಮೇಲೆ ನಿಮ್ಮ ಇಷ್ಟದಂತೆ ನಡೆಸಬಹುದು!ಮುಖ್ಯವಾಗಿ ಗೋವುಗಳಿಗೂ,ಬ್ರಾಹ್ಮಣರಿಗೂ ಇಪ್ಪತಕ್ಕ ಪೂಜೆಯನ್ನು ನಡೆಸಿದರೆ, ನನ್ನ ಮನಸ್ಸಿಗೆ ತೃಪ್ತಿಯಾಗು ವುದು.” ಎಂದನು. ಓ ಪರೀಕ್ಷಿದ್ರಾಜಾ! ಕಾಲರೂಪಿಯಾದ ಭಗವಂತನು, ಇಂದ್ರನ ಹೆಮ್ಮೆಯನ್ನು ಮುರಿಯಬೇಕೆಂಬ ಉದ್ದೇಶದಿಂದಲೇ ಈ ಮಾತ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೩೯
ಗೋಚರ