೧೯೨೨ ಶ್ರೀಮದ್ಭಾಗವತವು [ಅಧ್ಯಾ, ೨೫, ನೋಡಿದಿರಾ ? ಕೇವಲ ಮನುಷ್ಯಮಾತ್ರನಾದ ಆ ಕೃಷ್ಣನ ಮಾತನ್ನು ನಂಬಿ, ದೇವತೆಗಳಾದ ನಮ್ಮನ್ನು ತಿರಸ್ಕರಿಸಿದರಲ್ಲವೆ? ಬುದ್ದಿಕೇಶಕರವಾದ ಆತ್ಮವಿದ್ಯೆಗಾಗಿ ಶ್ರಮಪಡದೆ, ಯಾಗಾಟಕಗಳನ್ನೇ ನಾವೆಯಾಗಿಟ್ಟು ಕೊಂಡು, ಸಂಸಾರಸಮುದ್ರವನ್ನು ದಾಟುವುದು ವಿವೇಕಿಗಳ ಕಾಠ್ಯವು ! ನಮ್ಮಂತಹ ದೇವಕಿಗಳನ್ನಾ ರಾಧಿಸುವುದರಿಂದ, ಅವರವರಿಗೆ ಬೇಕಾದ ಪ ರುಷರಗಳೆಲ್ಲವೂ ಕೈಗೂಡುವುವು. ಹೀಗಿರುವಾಗಲೂ ಬುಯ್ಲಿಲ್ಲದ ಆ ಗೋಪಾಲಕರು, ಬಾಯಾತಿಯಾಗಿಯೂ, ಮರ್ಖನಾಗಿಯೂ, ಅ.ಧೆಯ ನಾಗಿಯೂ, ಏನೂ ತಿಳಿಯದ ಬಾಲನಾಗಿದ್ದರು ಪಂಡಿತಂಮನ್ಯನಾಗಿ ಯೂ ಇರುವ, ಕೇವಲಮನಷ್ಯಮಾತ್ರನಾದ ಆ ಕೃಷ್ಣನ ಮಾತನ್ನು ನಂಬಿ, ನಮ್ಮೆಲ್ಲರಿಗೂ ಇವಮಾನವನ್ನು ಮಾಡಿರುವರು. ಹೀಗೆ ಆ ಕೃಷ್ಣನ ಬಲದಿಂದಲ, ಧನಮದದಿಂದಲೂ ಬೀಗಿ ಬೆರೆಯುತ್ತಿರುವ ಆ ಗೊಲ್ಲರ ಅಹಲಕಾರವನ್ನು ಮುರಿಯದೆ ಬಿಡಬಾರದು. ಆದುದರಿಂದ ಈಗಲೇ ನೀವು ದೊಡ್ಡ ಮಳೆ ಯನ್ನು ಕರೆದು, ಆ ಗೊಲ್ಲರ ಗವನ್ನ ಡಗಿಸಬೇ ಕು ! ಅವರ ಮಂದೆಗಳೆಲ್ಲವೂ ಮಳೆಯಲ್ಲಿ ಸಿಕ್ಕಿ ಸಾಯುವಂತೆ ಮಾಡಬೇ ಕು! ಇನ್ನು ನೀವು ಗೋಕುಲದಕಡೆಗೆ ಹೊರಡಿ! ನಾನೂ ಐರಾವತವನ್ನೆ • ಮಖಾ ವೇಗವು ಸಪ್ತಮಾ ರತಳೊಡನೆ ನಿಮಗೆ ಬೆಂಬಲ ವಾಗಿ ಆ ಲ್ಲಿಗೆ ಬರುವೆನು ನಾವೆಲ್ಲರೂ ಸೇರಿ ಗೋಪಾಲಕರನ್ನು ಧ್ವಂಸಮಾಡಬೇಕು” ಎಂದನು ಈ ಇಂದ್ರಾಳ್ಮೆಯನ್ನು ಕೇಳಿದೊಡನೆ, ಮೆಫುಗಳೆಲ್ಲವೂ ವಾ ಯುಪ್ರೇರಿತಗಳಾಗಿ, ನಿರಂಕುಶವೇಗದಿಂದ ಹೊರಟು, ಗೋಕುಲದಮೇಲೆ ಮಹಾವೃಷ್ಟಿಯನ್ನು ಕರೆಯತೊಡಗಿದವು. ಕ್ಷಣಕ್ಷಣಕ್ಕೂ ಮಿಂಡುಗಳು! ಭಯಕರವಾದ ಗುಡುಗಿನ ಧ್ವನಿಗಳು! ಬೆ! ಇದೊಡ್ಡ ಆಲಿಕಲ್ಲುಗಳು! ಮರದ ತೊಲೆಗಳಂತೆ ಎಡೆಬಿಡದೆ ಬಿಳುಪ್ರಿರುವ ನೀರಿನ ಹನಿಗಳು! ಹೀಗೆ ಆ ಮೇವುಗಳು ತಮ್ಮ ಸ್ವಶಕ್ತಿಯನ್ನೂ ಉಪಯೋಗಿಸಿ, ಎಡೆಬಿಡದೆ ಮ ಲೆಯನ್ನು ಕರೆಯುತ್ತಿದ್ದುವು. ಕ್ಷಣಮಾತ್ರದೊಳಗಾಗಿ ಭೂಮಿಯೆಲ್ಲವೂ ಕೇವಲಜಲಮಯವಾಗಿ, ಹಳ್ಳತಿಟ್ಟುಗಳೇ ಕಾಣದಂತಾಯಿತು. ಮಿತಿಮೀ ೦ದ ಮಳೆ, ಮತ್ತು ಬಿರುಗಾಳಿ,ಇವುಗಳ ಬಡಿತಕ್ಕೆ ತಡೆಯಲಾರದೆ, ದನಕರು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೪೨
ಗೋಚರ