ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೫.] ದಶಮಸ್ಕಂಧವು. ೧೯೨೩ ಗಳೆಲ್ಲವೂ ನಡುಗುತ್ತಿದ್ದುವು. ಗೋಪಗೋಪಿಯರೆಲ್ಲರೂ ಚಳಿಯ ಬಾಧೆಯಿಂ ದ ತಳಿಸುತಿದ್ದರು. ಆಗ ಸಮಸ್ಯಗೋಪಾಲಕರೂ ಬೇರೆ ದಿಕ್ಕುತೋ ರದೆ ('ಗೋವಿಂದನೇ ಗತಿ' ಎಂದು ಭಗವಂತನಮೇಲೆ ಭಾರವನ್ನು ಹಾಕಿ, ತಮ್ಮ ತಮ್ಮ ಮಕ್ಕಳುಮರಿಗಳನ್ನು ಮೈ ಯಲ್ಲಿ ಹುದುಗಿಸಿಕೊಂಡು, ಮಳೆ ಯಲ್ಲಿ ನಡುಗುತ್ತ ಕೃಷ್ಣನಬಳಿಗೆ ಬಂದು ಮೊರೆಯಿಡವರು. ಕೃಷ್ಣಾ ! ಕೃಷ್ಣ: ಮಹಾಭಾಗಾ ! ಓಪ್ರಭ : ನಿನ್ನನ್ನೇ ನಂಬಿ ಬಂದ ಈ ಗೋಕು ಲವೆಲ್ಲವೂ ಮಳೆಯಲ್ಲಿ ಸಿಕ್ಕಿ ಸಾಯುತ್ತಿರುವುದು ! ಪರ್ಜನ್ಯದೇವನ ತೀ ಕೂಪಕ್ಕೆ ಪಾತ್ರರಾದ ನಮ್ಮನ್ನು ರಕ್ಷಿಸಬೇಕು ದೇವಾ ! ನೀನು ಭಕ್ತವತ್ಸಲನವೆ ?” ಎಂದು ಆ ಕೃಷ್ಣನ ಪಾದಮೂಲದಲ್ಲಿ ಬಿದ್ದು ಶರ ಣಾಗತಿಯನ್ನು ಮಾಡಿದರು ಆಗ ಕೃಷ್ಣನು, ಗೋಪಾಲಕರೆಲ್ಲರೂ ಕಲ್ಲು ಮಳೆಗೆ ಸಿಕ್ಕಿ, ಅಲ್ಲಲ್ಲಿ ಮೂರ್ಛಿತರಾಗಿ ಬೀಳುತ್ತಿರುವುದನ್ನು ಕಂಡು, ಅದು ದೇವೇಂದ್ರನ ಚೇಷ್ಟೆಯೆಂಬುದನ್ನು ತಿಳಿದು, ತನ್ನಲ್ಲಿ ತಾನು ಹೀಗೆಂದಾ ಲೋಚಿಸುವನು. ( ಆಹಾ! ಈಗ ಮಳೆಗಾಲವಲ್ಲರೂ ಭಯಂಕರವಾ ದ ಆಲಿಕಲ್ಲುಗಳೊಡನೆ ಎಡೆಬಿಡದೆ ಮಳೆಯು ಸುರಿಯುತ್ತಿರುವುದು. ಬಿ ರುಗಾಳಿಯ ವೇಗವ್ರ ತಡೆ ಯಲಸಾಧ್ಯವಾಗಿರುವುದು. ಇಂದ್ರನ ತನ್ನ ಯಾ ಗವು ಪ್ರತಿಶತವಾಯಿತೆಂಬ ಕೋಪದಿಂದ, ಈ ಗೋಕುಲವನ್ನು ನಾಶ ಮಾಡುyದಕ್ಕಾಗಿಯೋ ಈ ಕುಚೇಷ್ಯ ನ್‌ ರಂಭಿಸಿದಂತಿದೆ! ಆದರೇನು? ಇರಲಿ! ಅದಕ್ಕೆ ತಕ್ಕ ಪ್ರತೀಕಾರವನ್ನು ನನ್ನ ಸಾ ಮುಂದೆ ಸಾಧಿಸುವೆ ನು. ಈ ವೇ ಲೋಕಪಾಲಕರೆಂದು ತಿಳಿದು, ಅಜ್ಞಾನದಿಂದ ಪ್ರ ವರ್ತಿಸುತ್ತಿರುವ ಆ ದೇವತೆಗಳಿಗೆ, ಐಶ್ವಮದದಿಂದುಂಟಾದ ಅಹಂಕಾರ ವನ್ನು ತಗ್ಗಿಸುವುದಕ್ಕೆ ಇದೇ ತಕ್ಕ ಸಮಯವು ಸತ್ವಗುಣಪ್ರಧಾನವಾದ ದೇವತೆಗಳಿಗೆ, ಸಹಜವಾಗಿ ನನ್ನಲ್ಲಿ ಭಕ್ತಿಯುಂಟು : ನನ್ನಲ್ಲಿ ಭಕ್ತಿಯಳ್ಳವ ರಿಗೆ, ತಾವೇ ಪ್ರಭುಗಳೆಂಬ ಅಹಂಕಾರವು ಹುಟ್ಟುವುದಕ್ಕೆ ಕಾರಣವಿಲ್ಲ ! ಹಾಗಿದ್ದರೂ ಪ್ರಕೃತಿವಶದಿಂದ ಅವರಿಗೆ ತತ್ಕಾಲಕ್ಕೆ ಈ ಗವು ಹುಟ್ಟರ ಬೇಕೆಂದು ತೋರುವುದು ಈಗಲೇ ಈ ಅಹಂಕಾರವನ್ನು ಮುರಿಯ ದಿದ್ದರೆ, ಮುಂದೆ ಅವರಿಗೆ ಕ್ಷೇಮವಾಗಲಾರದು! ಆದುದರಿಂದ ಅವರಿಗೆ