೧೯೨೩ ಶ್ರೀಮದ್ಭಾಗವತವು ಅಧ್ಯಾ, ೨೩. ಗೂಡಿ, ಅಲ್ಲಿಂದ ಹಿಂತಿರುಗಿ ಮನೆಗೆ ಬಂದು ಸೇರಿದನು ದಾರಿಯುದ್ದಕ್ಕೂ ಗೋಸಸಿಯರು ಆ ಕೃಷ್ಣನ ಗುಣಗಳನ್ನೇ ಹಾಡುತ್ತ, ಯಾವಾಗಲೂ ಆ ಕೃಷ್ಣನನ್ನ ಹೃದಯದಲ್ಲಿಟ್ಟುಕೊಂಡು ಸಂತೋಷದಿಂದಕ್ಕುತ್ತ, ತ ಮ್ಮ ನಿವಾಸಗಳಿಗೆ ಬಂದರು. ಇದು ಇಪ್ಪತ್ತೈದನೆಯ ಅಧ್ಯಾಯವು - ( ಗೋಪಾಲಕರು ಕೃಷ್ಣನ ಅದ್ಭುತವಾಪಾರಗಳ ) ನ್ನು ನೋಡಿ ಆಶ್ಚದಿಂದ ಒಬ್ಬರಿಗೊಬ್ಬರು : ( ವಿಚಾರಾಡುತ್ತಿದ್ದುದು, ) ಹಿಗೆ ಕೃಷ್ಣನು ಆಗಾಗ ನಡೆಸುತಿದ್ಯ ಅದ್ಭುತ ಕಾವ್ಯಗಳನ್ನು ನೋಡಿ ಅವನ ನಿಜಸ್ಥಿತಿಯನ್ನು 'ಯದ ಗೋಪಾಲಕರೆಲ್ಲರೂ ಆಶ್ಚಯ್ಯ ಭತರಾಗಿ, ನಂದಗೋಪನಬಳಿಗೆ ಬಂದು ಹೀಗೆಂದು ಹೇಳುವರು 'ಪ್ರ ಭೂ! ಇದೇನಿದು? ನಿನ್ನ ಮಗನಾದ ಶ್ರೀ ಕೃಷ್ಣನು ನಡೆಸಿದ ಒಂದೊಂ ದುಕಾರವೂ ಮಹಾದ್ಭುತವಾಗಿರುವುದು. ಆ ಕಾದ್ಯಗಳನ್ನು ನೋಡಿದರೆ, ಇವನು ಸಾಮಾನ್ಯ ಮನುಷ್ಯನಂತೆ ತೋರುವುದಿಲ್ಲ! ಇವನು ಯಾವನೋ ಮಹ ಪುರಷನಾಗಿರಬೇಕು ! ಈತನ ಮಹಿಮೆಯನ್ನು ನೋಡಿದರೆ ಇವನು ಕೇವಲಹೀನವಾದ ನಮ್ಮ ಗೊಲ್ಲರ ಕುಲದಲ್ಲಿ ಹುಟ್ಟಲೇಬಾರದೆಂದು ತೋ ರುವದು (ಆಹಾ ! ಏಳುವರ್ಷದ ಬಾಲಕನು, ಅಷ್ಟು ದೊಡ್ಡ ಪ್ಪತವನ್ನು ಮೀಟಿ ತೆಗೆದು, ಮಹಾಗಜವು ತನ್ನ ಸುಂಡಿಲಿಂದ ಕಮಲವನ್ನಿತ್ತಿದಂತೆ ಶ್ರೀ ಲೆಯಿಂದ ಒಂದೇ ಕೈಯಲ್ಲಿ ಎತ್ತಿಹಿಡಿದನಲ್ಲಾ? ಇದೇನಾ ಶರವ? ಆ ದೂ ಹೋಗಲಿ ! ಅವನು ಇನ್ನೂ ಕಣ್ಣು ಬಿಡಲಾರದ ಸಣ್ಣ ಕೂಸಾಗಿರು ವಾಗಲೇ.ಮಹಾಬಲವುಳ್ಳಪೂತನೆಯೆಂಬ ರಾಕ್ಷಸಿಯ ಸ್ತನ್ಯಪಾನಮಾಡುತ್ತ, ಕಾಲವು ಶರೀರದ ಯೌವನವನ್ನು ಅಪಹರಿಸುವಂತೆ, ಬೆರಿಬ್ಬರಿಗೆ ತಿಳಿ ಯದಹಾಗೆಯೇ, ಆ ರಾಕ್ಷಸಿಯ ಪ್ರಾಣಗಳನ್ನೇ ಹೀರಿಬಿಟ್ಟನು? ಅದರಮೇ ಲೆ ಈತನು ಇನ್ನೂ ಮೂರುತಿಂಗಳ ಕೂಸಾಗಿ, ಹಾಸಿಗೆಯ ಮೇಲೆ ಮಲಗಿ ಕೈ ಕಾಲುಗಳನ್ನೊದರುತ್ತ ಅಳುತ್ತಿರುವಾಗ, ಇವನ ಕಾಲಾವಕ್ಕೆ ದೊಡ್ಡ ಬಂಡಿಯು ತಲೆಕೆಳಗಾಗಿ ಉರುಳಿಬಿದ್ದು ಪುಡಿಪುಡಿಯಾಯಿತಲ್ಲವೆ ? ಇದು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೪೮
ಗೋಚರ