ಅಧ್ಯಾ ೨] ದಶಮಸ್ಕಂಧವು ೧೯೨೬ ಹೇಗೆ? ಮತ್ತು ಇವನು ಒಂದು ವರ್ಷದ ಮಗುವಾಗಿದ್ದಾಗ, ತೃಣಾವರ್ತ ನೆಂಬ ರಾಕ್ಷಸರು ಸುಳಿಗಾಳಿಯಾಗಿ ಬಂದು ಆಕಾಶಕ್ಕೆ ಹಾರಿಸಿಕೊಂಡು ಹೋಗುತ್ತಿರುವಲ್ಲಿ, ಅವನ ಕಂಠವನ್ನು ಹಿಸುಕಿಕೊಂದನಲ್ಲಾ! ಈ ಆತ್ಮ "ವನ್ನೇ ನೆಂದು ಹೇಳಬಹುದು. ಅದರಿಂದಾಚೆಗೆ ಇವನು, ಮನೆಯಲ್ಲಿ ಹಾ ಲು, ಮೊಸರು, ಬೆಣ್ಣೆ ಮುಂತಾದುವುಗಳನ್ನು ಕದ್ದು ತಿನ್ನುವುದನ್ನು ನೋ ಡಿ, ತಾಯಿಯು ಇವನನ್ನು ಒರಳಿಗೆ ಕಟ್ಟಿಹಾಕಿದಾಗ, ಎರಡು ಮರಗಳ ನಡುವೆ ನುಗ್ಗಿ, ತನ್ನ ಎಳೆದಾಟದಲ್ಲಿ ಆ ದೊಡ್ಡ ಮರಗಳನ್ನೇ ಮುರಿದು ಹಾಕಿದನಲ್ಲಾ ! ಈ ವೈಚಿತ್ರ್ಯವನ್ನೇನೆಂದು ಹೇಳಬಹುದು ? ಅದರಿಂದಾ ಚೆಗೆ ಇವನು, ತನ್ನ ಸಂಗಡಿಗರೊಡನೆ ಕಾಡಿನಲ್ಲಿ ಮಂದೆಯನ್ನು ಮೇಯಿ ಸತ್ಯ, ತನ್ನನ್ನು ನುಂಗುವುದಕ್ಕಾಗಿ ಬಂದ ಬಕಾಸುರನನ್ನು ಕೈಗಳಿಂದಲೇ ಎರಡತ:೦ಡಾಗಿ ಸೀಳಿದನು ! ಆಮೇಲೆ ಕರಪಿನ ಆಕಾರದಿಂದ ತನ್ನ ನು ಕೊಲ್ಲುವುದಕ್ಕಾಗಿ ಬಂದ ವತ್ಸಾಸುರನನ್ನು ಕೊಂದು,ಆ ಮೃತಶರೀರದಿಂದ ಮಗದಲ್ಲಿದ್ದ ಬೇಲದ ಹಣ್ಣುಗಳೆಲ್ಲವನ್ನೂ ಉಬರಿಸಿದನು ಆದರಿಂದಾ ಜೆಗೆ ಅಣ್ಣನಾದ ಬಲರಾಮನೊಡಗೂಡಿ, ಗರ್ದಭಾಸುರನೂ , ಅವನ ಬಂ ಧುಗಳನ್ನೂ ಸಂಹರಿಸಿ, ಫಲಸಮೃದವಾದ ತಾಳೆ ಯ ತೋಪನ್ನು ನಿರುಪ ದ್ರವವಾಗಿ ಮಾಡಿದನು ಇದರಿಂದಾಚೆಗೆ ಬಲರಾಮನ ಕೈಯಿಂದ ಹೊರ ನಾದ ಪ್ರಲಂಬಾಸುರನನ್ನು ಕೊಲ್ಲಿಸಿದನು. ಗೋವ್ರಗಳನ್ನೂ , ಗೋವಾ ಲಕರನ್ನೂ ಕೇಡುಗಿಚ್ಚಿ ಸಿಂದ ತಪ್ಪಿಸಿ ರಕ್ಷಿಸಿದನು. ಕೊರವಿಷವಳ ಕಾ ಳಿಯನೆಂಬ ಮಹಾಸರ್ಪವನ್ನು ಕಾಲಿಂದ ಮೆಟ್ಟಿ, ಅವನ ಕೊಬ್ಬನ್ನು ಮು ರಿದು, ಅವನು ಆಕ್ರಮಿಸಿಕೊಂಡಿದ್ದ ಆ ಮಡುವಿನ ನೀರನ್ನು , ವಿಷದೋ ಪವಿಲ್ಲದಂತೆ ಮಾಡಿದನು.) ಇದರಮೇಲೆ ಮತ್ತೊಂದು ವಿಶೇಷವೇನೆಂದರೆ? ಓ ಪೂಜ್ಯಾ! ನಂದಾ! ಕೃಷ್ಣನು ನಿನ್ನ ಮಗನಾಗಿದ್ದರೂ, ನಮ್ಮೆಲ್ಲರಿಗೂ ಅವನಲ್ಲಿ ನಮ್ಮ ನಮ್ಮ ಮಕ್ಕಳಲ್ಲಿರುವುದಕ್ಕಿಂತಲೂ ಅತಿಶಯವಾದ ಪುತ್ರ ಪ್ರೇಮವು ಹುಟ್ಟುತ್ತಿರುವುದು ನಮಗೆ ಜನ್ಮಸಿದ್ಧವಾಗಿ ಬಂದ ಆ ಪ್ರೀತಿ ಯನ್ನು ಯಾವವಿಧದಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದೇನಾಶ್ಚಠ್ಯವು ! ಆ ಕೃಷ್ಣನ ಹುಟ್ಟನ್ನು ನೋಡಿದರೆ, ನಮ್ಮಂತೆಯೇ ಗೊಲ್ಲನಾಗಿರುವನು. ಆ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೪೯
ಗೋಚರ