೧೯೨೮ ಶ್ರೀಮದ್ಭಾಗವತವು ಅಧ್ಯಾ, ೨4. ವನು ನಡೆಸತಕ್ಕ ಕಾರಗಳಾದರೋ ಮನುಷ್ಯಶಕ್ತಿಯನ್ನು ಮೀರಿರುವುದು. ಇದರಿಂದ ಅವನು ನಿಜವಾಗಿ ನಿನ್ನ ಮಗನೋ, ಅಲ್ಲವೋ ಎಂದು ನಮಗೆ ಸಂ ದೇಹವಾಗಿದೆ! ಏಳುವರ್ಷದ ಬಾಲಕನೆಂದರೇನು ? ಅಷ್ಟು ದೊಡ್ಡ ಪ್ರತ ವನ್ನು ಕೈಯಿಂದೆತ್ತಿ ಹಿಡಿಯುವುದೆಂದರೇನು? ಈ ಸಂದೇಹವನ್ನು ನೀನೇ ನೀಗಿಸಬೇಕು” ಎಂದರು. ಅದಕ್ಕಾ ನಂದನು ಗೋಪಾಲಕರನ್ನು ಕುರಿತು” ಎಲೈ ಮಿತ್ರರೆ!ಕೇಳಿರಿ! ನಿಮಗೆ ನನ್ನ ಮಗನ ವಿಷ ಯದಲ್ಲಿರುವ ಸಂದೇಶವ ನ್ನು ನೀಗಿಸುವೆನು. ಈ ಕುಮಾರನವಿಷಯವಾಗಿ ಗರ್ಗಾಚಾತ್ಯರು ನನಗೆ ಕೆಲವು ಸಂಗತಿಗಳನ್ನು ಸೂಚಿಸಿರುವರು. ಅದನ್ನೇ ನಿಮಗೆ ಹೇಳುವೆನು. ಆ ಗರ್ಗಾಚಾರೈರು ಹಿಂದೊಮ್ಮೆ ನನ್ನನ್ನು ಕರೆದು, 'ನಂದಾ ! ನಿನ್ನ ಮಗನು ಇದಕ್ಕೆ ಹಿಂದಿನ ಕೃತ, ತ್ರೇತಾ, ದ್ವಾಪರಗಳೆಂಬ ಮರುಯುಗಗಳಲ್ಲಿ, ಕ್ರ ಮವಾಗಿ ಬಿಳುಪು, ಕೆಂಪು, ಹಳದಿಬಣ್ಣಗಳಿಂದ ಹುಟ್ಟಿದ್ದು, ಈಗ ಕಪ್ಪ ಬಣ್ಣದಿಂದ ಜನಿಸಿ, ಕೃಷ್ಣನೆಪಿಸಿರುವನು. ಹಿಂದೊಮ್ಮೆ ಇವನೇ ವಸುದೇವ ನ ಮಗನಾಗಿ ಹುಟ್ಟಿದ್ದುದರಿಂದ, ವಾಸುದೇವನೆಂದೂ ಕರೆಯಲ್ಪಡು ವನು. ಇದಲ್ಲದೆ ಇವನಿಗೆ, ಗುಣಗಳಿಗೂ, ಕುಗಳಿಗೂ ತಕ್ಕಂತೆ, ಇನ್ನೂ ಬೇರೆಬೇರೆ ಅನೇಕನಾಮರೂಪಗಳುಂಟು! ಅದನ್ನು ನಾನು ಮಾತ್ರ ಬಲ್ಲೆ ನೇ ಹೊರತು ಬೇರೊಬ್ಬರಿಗೂ ತಿಳಿಯದು. ಇವನಿಂದ ನಿಮಗೆ ಮುಂದೆ ಅನೇಕವಿಧವಾದ ಶ್ರೇಯಸ್ಸುಂಟಾಗುವುದು. ನಿಮ್ಮ ಗೋಕುಲ, ಗೋ ಪಾಲಕರಿಗೂ ಇವನು ಆನಂದವರ್ಧಕನಾಗುವನು. ಇವನಿಂದ ನಿಮಗೆ ಆ ಕಕಸ ಗಳು ತಪವುವು. ಹಿಂದೊಮ್ಮೆ ರಾಜ್ಯವು ಅರಾಜಕವಾಗಿ ಚೆ ರ (ಶತ್ರು) ಬಾಧೆಯು ಹೆಚ್ಚಿ, ಸಾಧುಗಳು ಸಂಕಟಪಡುತಿದ್ದರು. ಕೊನೆಗೆ ಈತನಸಹಾಯದಿಂದಲೇ ಅವರೆಲ್ಲರೂ ತಮ್ಮ ಶತ್ರುಗಳನ್ನು ಜಯಿಸಿ,ವೃದ್ಧಿಗೆ ಬಂದು ಕ್ಷೇಮವನ್ನು ಪಡೆದರು. ನಂದಾ : ಮಹಾತ್ಮನಾದ ಈ ನಿನ್ನ ಮಗ ನಲ್ಲಿ ಯಾರು ನಿಜವಾದ ಪ್ರೀತಿಯನ್ನು ಮಾಡುವರೋ, ಅವರನ್ನ , ಏಷ್ಟುಪ ಕ್ಷದವರನ್ನು ರಾಕ್ಷಸರು ಹೇಗೋಹಾಗೆ, ಯಾವಶತ್ರುಗಳೂ ಇದಿರಿಸಲಾರ ರು! ಈ ಬಾಲಕನು ಗುಣಗಳಲ್ಲಿಯೂ, ಕೀರ್ತಿಯಲ್ಲಿಯೂ, ಭಾಗ್ಯದಲ್ಲಿಯೂ, ಮಹಿಮೆಯಲ್ಲಿಯೂ ಸಾಕ್ಷಾನ್ನಾರಾಯಣನಿಗೆ ಸಮಾನನು ! ಆದುದರಿಂದ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೫೦
ಗೋಚರ