೧೯೩೦ ಶ್ರೀಮದ್ಭಾಗವತವು [ಅಧ್ಯಾ. ೨೭. ತು, ಅಂತಹ ಮಹಾಮಹಿಮನಾದ ಕೃಷ್ಣನಲ್ಲಿ ತಾನು ಮಾಡಿದ ತಪ್ಪಿ ಗಾಗಿ ಪಶ್ಚಾತ್ತಾಪಪಡುತ್ತ, ಆ ಕೃಷ್ಣನಗೆ ತಾನೇ ಬಂದು ಅಪರಾಧಕ್ಕಾ ಪಣವನ್ನು ಮಾಡಿಕೊಳ್ಳಬೇಕೆಂದು ನಿಶ್ಚಯಿಸಿದನು.ಗೋಲೋಕದಿಂದ ಕಾ ಮಧ'ನವೂ ಹೊರಬಂದಿತು.ಇಂದ್ರನು ಏಕಾಂತದಲ್ಲಿ ಕೃಷ್ಣನಬಳಿಗೆ ಬಂದು, ಅವನ ಪಾದಗಳಿಗೆ ತಲೆ ಯನ್ನು ಸೋಕಿಸಿ ಪ್ರಣಾ ಮಮಾಡಿ.ಕೈಮು ಗಿದು ಹೀಗೆಂದು ವಿಜ್ಞಾಪಿಸುವನು, ದೇವಾ 'ನಿನು ನೆಲೆಗೊಂಡಿರತಕ್ಕ ಸ್ಟಾ ನವು ಕೇವಲ ಶುದ್ಧಸತ್ವಮಯವಾದುದು! ಅಲ್ಲಿ ರಜಸ್ತಮಸ್ಸುಗಳ ಗಂಧ ಮಾತ ವೂ ತೋರಲಾರದು. ಆದುದರಿಂದಲೇ ಅದು ರಾಗದ್ವೇಷದಿಗಳೆ ಲ್ಲದೆ, ಕೇವಲ ಶಾಂತವಾಗಿ, ಮಹಾತಪಸ್ಸಿನಿಂದ ಅಭಿಸತಕ್ಕದಾಗಿರುವುದು. ನಿನ್ನ ಮಾಯೆಯಿಂದ ಕಲ್ಪಿತವಾಗಿ, ಸತ್ಯಾದಿಗುಣಕಾರಗಳ ಪ್ರವಾಹವೆನಿ ಸಿಕೊಂಡ ಸಂಸಾರವಾಗಲಿ, ಆ ಸಂಸಾರಮೂಲಕವಾಗಿ ಶರೀರವನ್ನುಂಟು ಮಾಡುವುದಕ್ಕೆ ಕಾರಣವಾದ ಕಾನುಬಂಧವಾಗಲಿ, ಆ ನಿನ್ನ ಸ್ಥಾನವ ನ್ನು ಮುಟ್ಟಲಾರವು. ಹೀಗೆ ಸೀಸಿರತಕ್ಕೆ ಸ್ಥಾನದಲ್ಲಿಯೇ ರಾಗದ್ವೇಷಾ ಹಿಗಳ ಸಂಬಂಧವಿಲ್ಲದಿರುವಾಗ, ಸಾಕ್ಷಾತ್ತಾಗಿ ನಿನ್ನ ವಿಚಾರದಲ್ಲಿ ಹೇಳ ಬೇಕಾದುದೇನು ? ಸಂಸಾರಕೇತಗಳಾಗಿಯೂ, ಆತ್ಮ ಜ್ಞಾನವಿಲ್ಲದ ಅಜ್ಞರಿಗೆ ಲಕ್ಷ ಣವಾಗಿಯೂ ಇರವ ರಾಗದ್ವೇಷಭಾದಿಗಳ ಪ್ರಸಕ್ತಿಯೇ ನಿನ್ನಲ್ಲಿ ಲ್ಲದರೂ ಲೋಕದಲ್ಲಿ ದುಷ್ಯರನ್ನು ನಿಗ್ರಹಿಸಿ, ಧ್ವಸಂಸ್ಥಾಪನವ ನ್ನು ಮಾಡುವುದಕ್ಕಾಗಿ, ನೀನು ನಿನ್ನಲ್ಲಿ ಆ ಗುಣಗಳನ್ನು ತೋರಿಸುತ್ತಿರುವೆ. ಆ ಉದ್ದೇಶsಂದಲೇ ಈಗ ನನ್ನನ್ನೂ ನೀವು ದಂಡಿಸಿದೆ ! ನೀನು ಹೀಗೆ ಕೆಲವರಲ್ಲಿ ಸಿಗ್ರಹವನ್ನೂ , ಬೇರೆ ಕೆಲವರಲ್ಲಿ ಅನುಗ್ರಹವನ್ನೂ ತೋರಿಸಿದ. ರೂ. ಸಿನಗೆ ಅದರಿಂದ ಪಕ್ಷಪಾತದೋಷವು ಬರುವುದಿಲ್ಲ ! ನಿನ್ನ ನಿಗ್ರಹ ವೂ ಅನಗ್ರಹವೇ ! ಹೇಗೆಂದರೆ, ನೀನೇ ಲೋಕಕ್ಕೆ ತಂದೆಯೂ, ಗುರು ವೂ, ಪ್ರಭುವೂ ಆಗಿರುವುದರಿಂದ, ಆಯಾಪ್ರಾಣಿಗಳ ಹಿತಕ್ಕಾಗಿ ಅವರನ್ನು ಆಗಾಗ ದಂಡಿಸಿ ಸನ್ಮಾರ್ಗಕ್ಕೆ ತರತಕ್ಕ ಕಾರವು ನಿನ್ನದಾಗಿರುವು ದು, ಆಹದರಿಂದ ಲೋಕದಲ್ಲಿ ತಾವೇ ಪ್ರಭುಗಳೆಂದು ಗಪಡತಕ್ಕ ನ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೫೨
ಗೋಚರ