ofus ಶ್ರೀಮದ್ಭಾಗವತವು [ಅಧ್ಯಾ. ೨೭' ನನ್ನನ್ನೇ ಪ್ರಭುವೆಂದು ತಿಳಿದಿದ್ಯ ನಾನು, ನನ್ನ ಯಜ್ಞಕ್ಕೆ ಭಂಗವುಂಟಾದು ದನ್ನು ನೋಡಿ ಸಹಿಸಲಾರದೆ, ಗೋಕುಲವನ್ನು ನಾಶಮಾಡುವುದಕ್ಕಾಗಿ ಮಳೆಗಾಳಿಗಳನ್ನು ಹೊರಡಿಸಿ, ನಿನ್ನಲ್ಲಿ ಮಹಾಪರಾಧಿಯಾದೆನು. ಆದರೇನು? ಈ ಅಪರಾಧವೇ ನನಗೆ ಶ್ರೇಯಃ ಕಾರಣವಾಯಿತು! ನನ್ನ ಪ್ರಯತ್ನವು ವಿ ಫಲವಾದುದರಿಂದ, ನನ್ನ ಮನಸ್ಸಿನಲ್ಲಿ ಅಹಂಕಾರವು ಮುರಿಯಿತು! ಸಿ ನ ಅನುಗ್ರಹಕ್ಕೆ ಪಾತ್ರನಾದೆನು, ಓ ಸರೋಶ್ವರಾ! ಸತ್ಯಾತ್ಮನಾಗಿಯೂ, ಸತ್ವಗುರುವಾಗಿಯೂ ಇರುವ ನಿನ್ನಲ್ಲಿ ಮರಕ್ಕೆ ನನ್ನನ್ನು ರಕ್ಷಿಸಬೇಕು” ಎಂದು ಪ್ರಣಾಮಮಾಡಿ ಪ್ರಾರ್ಥಿಸಿದನು. ಆಗ ಕೃಷ್ಣನು, ಇಂದ್ರನ ದೈನ್ಯವನ್ನು ನೋಡಿ ಕನಿಕರಗೊಂಡು, ಮೇಫುಗಂಭೀರಧ್ವಸಿಯಿಂದ ಆತ ನನ್ನು ಕುರಿತು ಮಂದಹಾಸಪೂಕವಾಗಿ ಹೀಗೆಂದು ಹೇಳುವನು. ಇಂ ದ್ರಾ: ನೀನು ನಿನ್ನ ಇಂದ್ರಪದವಿಗಾಗಿ ಬಹಳ ಮ ವಾಂಛನಾಗಿ, ನನ್ನನ್ನೂ ಲಕ್ಷ ಮಾಡಬರುವುದನ್ನು ನೋಡಿ, ನಿನಗೆ ಆ ಗತ್ವವನ್ನು ಮುರಿದು ಯಾ ವಾಗಲೂ ನಿನ್ನ ಮನಸ್ಸು ನನ್ನ ಸ್ಮರಣೆಯಲ್ಲಿರುವಂತೆ ಮಾಡುವುದಕ್ಕಾಗಿ ಯೇ ನಾನು ನಿನ್ನ ಯಜ್ಞಕ್ಕೆ ಭಂಗವನ್ನುಂಟುಮಾಡಿದೆನು. ಆದುದರಿಂದ ಈಗ ನಾನು ನಿನಗೆ ಮಾಡಿದ ಸಿಗ್ರಹವನ್ನು ಅನುಗ್ರಹವೆಂದೇ ತಿಳಿ'ಪ್ರಭುತ್ವ ದಿಂದಲೂ, ಸಂಪತ್ತಿನಿಂದಲೂ ಮbಸಿದವರು ನನ್ನನ್ನು ಮರೆತುಬಿಡುವವು ದು ಸಹಜವು!ಅಂತವರನು ಅನುಗ್ರಹಿಸಬೇಕೆಂಬ ಉದೆಶವು ನನಗೆ ಹುಟ್ಟಿ, ದಪಕ್ಷದಲ್ಲಿ, ಅವರನ್ನು ಮೊದಲು ಆ ಐಶ್ವವ್ಯದಿಂದ ತಪ್ಪಿಸುವೆನು! ಆದುದರಿಂ ದ ಓ ಶಕ್ತಾ!ಇನ್ನು ನೀನು ಹೋಗು! ನಿನಗೆ ಮಂಗಳವಾಗಲಿ! ಇನ್ನು ಮೇಲೆ ನೀನು ಈ ವಿಧವಾದ ಗವನ್ನು ಬಿಟ್ಟು, ಎಚ್ಚರಿಕೆಯಿಂದ ನಿನ್ನ ಅಧಿಕಾ ರವನ್ನು ನಡೆಸುತ್ತಿರು ! ಒಂದೊಂದುವಿಷಯದಲ್ಲಿಯೂ, ನನ್ನ ಆಳ್ವಾಧೀನ ನಾಗಿ ನಡೆಯುತ್ತಿರಬೇಕಾದುದೇ ನಿನ್ನ ಕಾರವು'” ಎಂದನು. ಆಮೇಲೆ ಕಾಮಧೇನುವು ತನ್ನ ಪರಿವಾರಗಳಾದ ಗೋಸಮಹದೊ ಡನೆ ಮುಂದೆ ಬಂದು, ಗೋಪಾಲರೂಪಂಡಿದ್ದ ಸತ್ಯೇಶ್ವರನಾದ ಕೃ ಹನಿಗೆ ನಮಸ್ಕರಿಸಿ, ವಿಜ್ಞಾಪಿಸುವಳು. “ಕೃಷ್ಣಾ ಕೃಷ್ಣಾ! ಓ ಮಹಾ ಯೋಗೀ: ವಿಶ್ವಾತ್ಮಾ! ವಿಶ್ವಕಾರಣಾ' ಸತ್ವಲೋಕಪಾಲಕನಾದ ನಿನ್ನಿಂದ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೫೪
ಗೋಚರ