ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ . ೨೯.] ದುಮಸ್ಕಂಧವು. ೧೬ ದಾಗ ತಾನು ಅವರ ಇತ್ಯವನ್ನು ಕೈಗೂಡಿಸುವುದಾಗಿ ವಾಗ್ದಾನವನ್ನು ಮಾಡಿದನವೆ ? ಆದರಂತೆಯೇ ಈಗ ಲೋಕಮನೋಹರವಾದ ಶರ ತಾಲವು ಪ್ರಾಪ್ತವಾಗಿರುವುದನ್ನು ನೋಡಿ, ಸತ್ಯಸಂಕಲ್ಪನಾದ ಆ ಭಗ ವಂತನು, ಇತರ ಪ್ರಾಕೃತಜನರಂತೆ ವಿಷಯೇಚ್ಛೆಯಿಂದಲ್ಲದೆ, ಯೋಗ ಮಾಯೆಯಿಂದ ಆಗೋಪಸಿಯರ ಕೋರಿಕೆಯನ್ನಿಡೇರಿಸಬೇಕೆಂದು ಉದ್ದೇಶಿಸಿದನು. ಕೃಷ್ಣನ ಮನಸ್ಸಿನಲ್ಲಿ ಈ ಸಂಕಲ್ಪವು ಹುಟ್ಟಿದೊಡನೆ, ಅವನ ಮನಃಪ್ರೀತಿಗಾಗಿ ಚಂದ್ರನು, ಆ ರಾತ್ರಿಯಲ್ಲಿ 'ತನ್ನ ಪೂರ್ಣಕಳೆಗ ಳಿಂದ ಅಪೂಲ್ವಶೋಭೆಯನ್ನು ಬೀರುತ್ತ ಉದಿಸಿಬಂದನು. ಮತ್ತು ಬಹು ಕಾಲದಿಂದ ಕಾಣದಿದ್ದ ಪ್ರಿಯೆಯನ್ನು ನೋಡಿದಾಗ, ನಾಯಕನು ಅವಳ ಮುಖಕ್ಕೆ ತನ್ನ ಕೈಯಿಂದ ಕುಂಕುಮತಿಲಕವನ್ನು ತಿದ್ದಿ ಅಲಂಕರಿಸುವಂತೆ,ಆ ಗ ಚಂದ್ರನು, ಸಂಧ್ಯಾರಾಗಮಿಶ್ರಿತವಾದ ತನ್ನ ಕರಗಳಿಂದ ಪೂರೈದಿ ಕ್ಯಾಂತೆಯನ್ನು ಅಲಂಕರಿಸುತ್ತಿದ್ಧನು ಸಮಸ್ತಪ್ರಾಣಿವರ್ಗಗಳಿಗೂ, ಓಷಧಿ ವರ್ಗಗಳಿಗೂ ಸಂತಾಪಹಾರಕವಾದ ಚಂದ್ರಿಕೆಯುಸುತ್ತಲೂ ಪ್ರಸರಿಸಿತು. ಕುಂಕುಮತಿಲಕದಿಂದಲಂಕೃತವಾದ ಮುಖದಂತೆ, ಸಂಧ್ಯಾ ರಾಗದಿಂದ ಶೋಭಿತವಾಗಿ ಆಕಾಶದಲ್ಲಿ ಬೆಳಗುತ್ತಿರುವ ಪೂರ್ಣಚಂದ್ರ ನನ್ನೂ , ಚಂದ್ರಿಕಾರುಚಿಯಿಂದ ಮನೋಹರವಾದ ಆ ಬೃಂದಾವನಪ್ರದೇ ಶವನ್ನೂ ನೋಡಿ ಕೃಷ್ಣನ ಮನಸ್ಸಿಗೂ ಉತ್ಸಾಹವು ಹುಟ್ಟಿತು. ಆ ರಾತ್ರಿ ಯಲ್ಲಿ ಕೃಷ್ಣನು, ತನ್ನ ಕೊಳಲನ್ನು ಕೈಗೆ ತೆಗೆದುಕೊಂಡು, ಗೋಪಾಂಗನೆ ಯರ ಮನಸ್ಸನ್ನು ಸೂರೆಗೊಳ್ಳುವಂತೆ ಮಧುರಧ್ವಸಿಯಿಂದ ವೇಣುಗಾನ ಮಾಡುತ್ತ ಬೀದಿಯಲ್ಲಿ ಹೊರಟನು. ಆ ಕೃಷ್ಣನ ವೇಣುಗಾನವಾದರೋ ಸಹಜವಾಗಿಯೇ ಎಂತವರಿಗೂ ಕಾಮೋದ್ದಿಪಕವಾದುದು. ಈ ವೇಣುಗಾ ನವನ್ನು ಕೇಳಿದಾಗ, ಮೊದಲೇ ಕೃತ್ಯವವಿಷಯವಾಗಿ ಕಾಮವಿಕಾರದಿಂದ ಕಳವಳಿಸುತಿದ್ದ ಗೋಪಾಂಗನೆಯರ ಸಡಗರವನ್ನು ಕೇಳಬೇಕೆ? ತಮ್ಮ ತಮ್ಮ ಮನೆಯಲ್ಲಿ ಗೃಹಕಾರಗಳನ್ನು ನೋಡುತಿದ್ದ ಆ ಗೋಪಾಂಗನೆಯರೆಲ್ಲ ರೂ, ವೇಣುಧ್ವನಿಯನ್ನು ಕೇಳಿದೊಡನೆ, ತಮ್ಮ ತಮ್ಮ ಕಾವ್ಯಗಳನ್ನು ಆತ್ಮ ಕ್ಕೇ ನಿಲ್ಲಿಸಿ, ಕೃಷ್ಣನನ್ನು ನೋಡುವ ಕುತೂಹಲದಿಂದ, ಒಬ್ಬರ ಪ್ರಯತ್ನ 122 8