೧ff ಅಧ್ಯಾ, ೨೯.] ದಶಮಸ್ಕಂಧವು. ಆಗ ಪರೀಕ್ಷಿದ್ರಾಜನು ಶುಕಮಹರ್ಷಿಯನ್ನು ಕುರಿತು « ಮುನೀಂ ದ್ರಾ: ಏನಾಶ್ಚರವಿದು! ಆ ಗೋಪಸ್ತ್ರೀಯರು ಕೃಷ್ಣನನ್ನು ಜಾರ ನೆಂದು ತಿಳಿದಿದ್ದರೇ ಹೊರತು ಪರಬ್ರಹ್ಮವೆಂದು ತಿಳಿದಿರಲಿಲ್ಲ ! ಈ ವಿ ಧವಾದ ವಿಷ ಯಾಸಕಿಯ ಮೇಲೆಮೇಲೆ ಸಂಸಾರಬಂಧಕ್ಕೆ ಕಾರಣ ವೆನಿಸಬೇಕೇ ಹೊರತು ಮುಕ್ತಿಗೆ ಸಾಧನವಾಗಲಾರದು. ಆ ಗೋಪಸ್ತಿ ಯರಿಗೆಮಾತ್ರ ಅದು ಮುಕ್ತಿಗೆ ಕಾರಣವಾದುದು ಹೇಗೆ ? ಇದರ ರಹಸ್ಯವ ನ್ನು ನನಗೆ ತಿಳಿಸಬೇಕು” ಎಂದನು. ಅದಕ್ಕಾ ಶುಕಮುನಿಯು “ಓ ಪರೀಕ್ಷೆ ದ್ರಾಜಾ ? ಈ ವಿಚಾರವನ್ನು ನಿನಗೆ ನಾನು ಮೊದಲೇ ತಿಳಿಸಿರುವೆನಲ್ಲವೆ ? ಶಿಶುಪಾಲನು ಕೃಷ್ಣನಲ್ಲಿ ಜನ್ಮ ದ್ವೇಷವನ್ನಿಟ್ಟಿದ್ದರೂ ಅವನಿಗೆ ಮುಕ್ತಿ, ಯುಂಟಾಗಲಿಲ್ಲವೆ? ಹೀಗಿರುವಾಗ ಆ ಕೃಷ್ಣನನ್ನು ಪ್ರೀತಿಯಿಂದ ಭಾವಿಸು ತಿದ್ದ ಗೋಪಿಯರಿಗೆ, ಮುಕ್ತಿಯುಂಟಾಗುವುದೇನಾತ್ಮರವು ? ಮನೋ ವಾಕ್ಕುಗಳಿಗೆ ಅಗೋಚರನಾಗಿಯೂ, ಪಾಕೃತಗುಣರಹಿತನಾಗಿಯೂ, ಅನಂತಕಲ್ಯಾಣಗುಣವಿತಿಷ್ಟನಾಗಿಯೂ ಇರುವ ಆ ಭಗವಂತನು, ಅವ್ಯ ಕ್ಯನೆಸಿಸಿದ್ದರೂ, ದೇವರಲ್ಮನುಷ್ಯಾಸಗಳಿಂದ ಜನಗಳಿಗೆ ವ್ಯಕ್ತ ವಾಗಿ ಕಾಣಿಸಿಕೊಳ್ಳುವುದು ಮನುಷ್ಯರ ಶ್ರೇಯಸ್ಸಿಗಾಗಿಯೇ ಹೊರತು ಬೇರೆಯಲ್ಲ' ಆದುದರಿಂದ ಮನುಷ್ಯರಿಗೆ ಅವನಲ್ಲಿ ಭಕ್ತಿಯೊಂದೇ ಮುಕ್ತಿ ಸಾಧನವೆಂದು ತಿಳಿಯಬಾರದು! ಕಾಮದಿಂದಾಗಲಿ, ಕ್ರೋಧದಿಂದಾಗಲಿ, ಭಯದಿಂದಾಗಲಿ, ಸ್ನೇಹದಿಂದಾಗಲಿ, ಬಂಧುತ್ವದಿಂದಾಗಲಿ, ಪ್ರೀತಿಯಿಂ ದಾಗಲಿ, ಯಾವವಿಧದಿಂದಲಾದರೂ, ಅವನನ್ನು ಅನವರತವೂ ಭಾವಿಸುತ್ತಿ ರುವವರು, ಆ ಭಾವನಾವಿಶೇಷದಿಂದಲೇ ತನ್ಮಯತ್ವವನ್ನು ಹೊಂದುವರು. ಅದೇ ಮುಕ್ತಿಗೆ ಕಾರಣವಾಗುವುದೆಂದು ತಿಳಿ! ಆದುದರಿಂದ ಯೋಗೀಶ ರನಾದ ಆ ಭಗವಂತನವಿಷಯದಲ್ಲಿ ಇದೊಂದಾಶ್ರವಲ್ಲ! ಅವನು ಇಂ ಪ್ರಿಯಗಳ ದುಷ್ಪವೃತ್ತಿಗಳನ್ನಡಗಿಸಿ,ತನ್ನಲ್ಲಿ ಐಕ್ಯಹೊಂದಿಸಿ,ಯಾವುದಾ ದರೂ ವಿಧದಿಂದ ತನ್ನ ನ್ನು ಒಂದಾವರ್ತಿ ಧ್ಯಾನಿಸತಕ್ಕವರಿಗೆ, ಸ್ಥಾವರಜನ್ಮ ವನ್ನೂ ನೀಗಿಸಬಲ್ಲವನು. ಅದು ಹಾಗಿರಲಿ! ಮುಂದಿನ ವೃತ್ತಾಂತವನ್ನು ಕೇಳು ! ಕಪಟನಾಟಕಸೂತ್ರಧಾರಿಯಾಗಿ ಮಾತುಬಲ್ಲವರಲ್ಲಿ ಮೇಲೆನಿಸಿ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೬೧
ಗೋಚರ