ವಿಷಯಕ್ಕೆ ಹೋಗು

ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾ, ೨೯.] ದಶಮಸ್ಕಂಧವು. ೧೯೪೧ ಸಿರಿ!ಪತಿಗೂ, ಪತಿಯಬಂಧುಗಳಿಗೂ, ನಿಷ್ಟಾಪಟ್ಯದಿಂದ ಶುಕ್ರೂಷೆಮಾಡು ವುದು, ಮಕ್ಕಳನ್ನು ಪೋಷಿಸುವುದು, ಇದೇ ಗೃಹಿಣಿಯರಿಗೆ ಉತ್ತಮವಾ ದ ವ್ರತವು ಕೆಟ್ಟ ನಡತೆಯುಳ್ಳವನಾಗಿದ್ದರೂ, ಕುರೂಪಿಯಾಗಿದ್ದರೂ, ವೃದ್ಧನಾಗಿದ್ದರೂ, ಜಡನಾಗಿದ್ದರೂ, ರೋಗಿಯಾಗಿದ್ದರೂ, ದರಿದ್ರನಾ ಗಿದ್ದರೂ, ಉತ್ತಮಗತಿಯನ್ನ ಪೇಕ್ಷಿಸತಕ್ಕ ಸ್ತ್ರೀಯರು, ತನ್ನ ಪತಿಯನ್ನು ಅಲಕ್ಷವಾಗಿ ನೋಡಬಾರದು! ಪತಿಯು ಮಹಾಪಾತಕಿಯಾಗಿದ್ದ ಪಕ್ಷದ |ಮಾತ್ರ ಅಂತವನನ್ನು ಬಿಟ್ಟು ಬೇರೆಯಾಗಿರಬಹುದು ! ಕುಲಸ್ತ್ರೀಯರಿಗೆ ಪತಿಯು ಜೀವಿಸಿದ್ದರೂ, ಇಲ್ಲದಿದ್ದರೂ, ಉಪಪತಿಯೊಡನೆ ಸೇರುವುದು ಎಂದಿಗೂ ಯಶಸ್ಕರವಲ್ಲ ' ಅಂತವರಿಗೆ ಯಾವವಿಧದಲ್ಲಿಯೂ ಸದ್ದತಿಯಿಲ್ಲ! ಅವರ ಜನ್ಮವು ಕೇವಲತುಚ್ಛವೆನಿಸುವುದು!ಅವರ ಸ್ಥಿತಿಯು ಯಾವಾಗಲೂ ಭಯಕ್ಕೂ, ದುಃಖಕ್ಕೂ ನೆಲೆ ಯೆನಿಸುವುದು. ಅವರು ಎಲ್ಲರ ಜುಗುಪ್ಪೆಗೂ ಹಾಸ್ಯಕ್ಕೂ ಈಡಾಗುವರು. ಒಂದುವೇಳೆ ನೀವು ನಿಮ್ಮ ನಿಮ್ಮ ಪತಿಯಲ್ಲಿ ಸಹಜವಾದ ಪ್ರೇಮವುಳ್ಳವರಾಗಿದ್ದು, ನನ್ನಲ್ಲಿ ಪರಮಾತ್ಮ ಬುದ್ಧಿಯಿಂದ, ನನ್ನನ್ನೇ ಸತ್ವವಿಧಬಂಧುವನ್ನಾಗಿ ತಿಳಿದಿದ್ದರೂ ಇರಬಹುದು! ಆ ಬುದ್ಧಿ ಯು ನಿಮಗೆ ಹುಟ್ಟಿದ್ದರೂ, ನನ್ನನ್ನು ಉಪಾಸಿಸುವ ಕ್ರಮವು ಇದಾ! ಪ ರೋಕ್ಷದಲ್ಲಿದ್ದು ನನ್ನ ಗುಣಗಳನ್ನು ಕೇಳುವುದು, ಮನಸ್ಸಿನಲ್ಲಿ ನನ್ನನ್ನು ಸಾಕ್ಷಾತ್ಕರಿಸುವುದು, ನನ್ನನ್ನೇ ಯಾವಾಗಲೂ ಧ್ಯಾನಿಸುತ್ತಿರುವುದು, ನನ್ನ ಗುಣಗಳನ್ನು ಕೊಂಡಾಡುತ್ತಿರುವುದು, ಈ ವಿಧವಾದ ಉಪಾಯಗಳಿಂದ ನನ್ನಲ್ಲಿ ಯಾವ ವಿಧವಾದ ಭಕ್ತಿಭಾವವು ಹುಟ್ಟುವುದೋ, ಅದು ನನ್ನೊಡ ನೆ ಕಲೆತಿವಾಗ ನನ್ನ ದೇಹಸಂಬಂಧದಿಂದ) ಹುಟ್ಟಲಾರದು, ಆದುದರಿಂ ದ ನೀವು ನಿಮ್ಮ ನಿಮ್ಮ ಗೃಹದಲ್ಲಿದ್ದುಕೊಂಡೇ ಮನಸ್ಸಿನಲ್ಲಿ ನನ್ನನ್ನು ಧಾ ನಿಸುತ್ತಿರಬಹುದು.” ಎಂದನು. ಕೃಷ್ಣನು ಹೇಳಿದ ಈ ವಾಕ್ಯಗಳು ಗೊಪಿಯುಗ ಬಹಳ ಅಪ್ರಿ ಯನಾಗಿ ತೋರಿತು. ಆತನೊಡನೆ ರಮಿಸಬೇಕೆಂದು ಬಂದ ಆ ಗೋಪಿಯ ರೆಲ್ಲರೂ, ಆಶಾಭಂಗದಿಂದ ದುಃಖಿತರಾಗಿ, ನಿಟ್ಟುಸಿರನ್ನು ಬಿಡುತ್ತ, ಸುಮ್ಮ ನೆ ನಿಂತುಬಿಟ್ಟರು ! ಅವರ ತುಟಿಯು ಒಣಗಿತು! ಅವರ ಕಣ್ಣುಗಳಿಂದ ಪ