೧೪೩ ಶ್ರೀಮದ್ಭಾಗವತವು [ಅಧ್ಯಾ, ೩೦ ಗಳ ಸುವಾಸನೆಯನ್ನು ತಂದು ಹರಡುತ್ತಿರುವ ಮಂದಮಾರುತದಿಂದ ಮ ನೋಹರವಾಗಿಯೂ, ಸುವರ್ಣಛಾಯೆಯುಳ್ಳುದಾಗಿಯೂ ಇದ್ದ ಒಂ ದಾನೊಂದು ಮಳಲುದಿಣ್ಣೆಯಬಳಿಗೆ ಸೇರಿಸಿದನು. ಅಲ್ಲಿ ಆ ಸ್ತ್ರೀಯರೆಲ್ಲ ರನ್ನೂ ಸುತ್ತಲೂ ನಿಲ್ಲಿಸಿಕೊಂಡು, ಒಬ್ಬಳ ಭುಜದಮೇಲೆ ಕೈಹಾಕು ವುದು! ಮತ್ತೊಬ್ಬಳನ್ನು ಕೈನೀಡಿ ಅಪ್ಪಿಕೊಳ್ಳುವುದು! ಒಬ್ಬಳ ಕೈಗೆ ತನ್ನ ಕೈಯನ್ನು ಪೋಣಿಸುವುದು! ಮತ್ತೊಬ್ಬಳಿಗೆ ಮುಂಗುರಳನ್ನು ತನ್ನ ಕೈ ಯಿಂದ ತಿದ್ದುವುದು! ಮತ್ತೊಬ್ಬಳ ಕಾಲನ್ನು ಹಿಡಿಯುವುದು. ಇನ್ನೊಬ್ಬಳ ಸೆರಗನ್ನೆಳೆಯುವುದು ! ಮತ್ತೊಬ್ಬಳ ಎದೆಯಮೇಲೆ ಕೈಯಿಕ್ಕುವುದು! ಇನ್ನೊಬ್ಬಳೊಡನೆ ಹಾಸ್ಯದ ಮಾತುಗಳನ್ನಾಡುವುದು! ಇನ್ನೊಬ್ಬಳಿಗೆ ನ ಖಕ್ಷತವನ್ನು ಮಾಡುವುದು ! ಬೇರೊಬ್ಬಳೊಡನೆ ಆಟವಾಡುವುದು! ಮ ತೊಬ್ಬಳನ್ನು ಅನುರಾಗಸೂಚಕವಾದ ದೃಷ್ಟಿಯಿಂದ ನೋಡುವುದು, ಇ ನ್ನೊಬ್ಬಳನ್ನು ನೋಡಿ ನಗುವುದು! ಈ ವಿಧವಾದ ಚೇಷ್ಟೆಗಳಿಂದ, ಆ ಗೋ ಪಸಿಯರಿಗೆ ಮತ್ತಷ್ಟು ಕಾಮವನ್ನು ಹೆಚ್ಚಿಸಿಬಿಟ್ಟನು. ಹೀಗೆ ಕೃಷ್ಣ ನು ತಮ್ಮಲ್ಲಿ ವಿಶೇಷವಾದ ಸಲಿಗೆಯನ್ನು ತೋರಿಸುತ್ತಿರಲು, ಅವರಿಗೆ ಲೋ ಕದಲ್ಲಿ ತಮಗಿಂತಲೂ ಮೇಲಾದ ಸುಂದರಸಿಯರೇ ಇಲ್ಲವೆಂಬ ಗತ್ವವು ಹುಟ್ಟಿತು. ಹೀಗೆ ಸೌಂದಯ್ಯಮದದಿಂದ ಅವರು ಹೆಮ್ಮೆಗೊಂಡಿರುವುದ ನ್ನು ತಿಳಿದು, ಕೃಷ್ಣನು, ಆ ಗತ್ವವನ್ನು ಮುರಿಯಬೇಕೆಂಬ ಉದ್ದೇಶಡಿಂದ, ಕಣಮಾತ್ರದಲ್ಲಿ ಅವರೊಬ್ಬರಿಗೂ ತಿಳಿಯದಂತೆ ಅಂತರ್ಧಾನಹೊಂದಿ ಕ ಣ್ಮರೆಯಾದನು. ಇದು ಇಪ್ಪತ್ತೊಂಬತ್ತನೆಯ ಅಧ್ಯಾಯವು. ++{ ಗೋಪಸ್ತ್ರೀಯರು ಕಣ್ಮರೆಯಾದ ಗೃಹ ನಗು )
ಹುಡುಕುತ್ತಿದ್ದುದು." ಯಾದ, ಕೃಷ್ಣನನ್ನು }+w ತಮ್ಮ ನಡುವೆ ನಿಂತಿದ್ದ ಕೃಷ್ಣನು, ಇದ್ದಕ್ಕಿದ್ದ ಹಾಗೆ ಕಣ್ಮರೆಯಾ ಗಲು, ಗೋಪಸ್ತ್ರೀಯರೆಲ್ಲರೂ, ಯೂಥಪತಿಯನ್ನಗಲಿದ ಹೆಣ್ಣಾನೆಗಳಂತೆ, ಆ ಕೃಷ್ಣನನ್ನು ಕಾಣದೆ ಪರಿತಪಿಸುತಿದ್ದರು. ಆ ಕೃಷ್ಣನ ನಡೆನುಡಿಗಳಿಂ ದಲೂ, ಅವನು ತನ್ನಲ್ಲಿ ತೋರಿಸುತ್ತಿದ್ದ ಅನುರಾಗಸೂಚಕವಾದ ಮಂ