೧೯೪ ಅಧ್ಯಾ ೩೦.] ದಶಮಸ್ಕಂಧವು. ದಹಾಸದಿಂದಲೂ, ಅವನ ಒಯಾರದ ನೋಟಗಳಿಂದಲೂ, ಅವನ ಮೃ ದುಮಧುರವಾಕ್ಯಗಳಿಂದಲೂ, ಅವನ ಆಟಪಾಟಗಳಿಂದಲೂ, ಪರವಶಕ್ಕ ದಯರಾಗಿ, ಅವನನ್ನೇ ಧ್ಯಾನಿಸುತ್ತ, ಆ ಭಾವನಾವಿಶೇಷದಿಂದ ತನ್ಮಯ ತ್ವವನ್ನು ಹೊಂದಿ, ತಾವೂ ಆ ಕೃಷ್ಣನ ಚೇಷ್ಟೆಗಳನ್ನೇ ಅನುಕರಿಸತೊಡ ಗಿದರು. ಅವನಂತೆಯೇ ನಡೆ! ಅವನಂತೆಯೇ ಮಾತು! ಅವನಂತೆಯೇ ಮು ಗುಳ್ಳ ಗೆಯಿಂದ ನಗುವುದು! ಅವನಂತೆಯೇ ಅನುರಾಗವೀಕ್ಷಣದಿಂದ ಒ ಬ್ಬರಿಗೊಬ್ಬರು ನೋಡುವುದು ತಾನೇ ಕೃಷ್ಣನೆಂದು ಒಬ್ಬರಿಗೊಬ್ಬರು ಹೇಳಿಕೊಳ್ಳುವುದು. ಈ ರೀತಿಯಾಗಿ ಸತ್ವವಿಧದಿಂದಲೂ ಆತನನ್ನು ಅನ ಕರಿಸುತ್ತ, ಆ ಕೃಷ್ಣನ ತಾದಾತ್ಮವನ್ನೇ ತಮ್ಮಲ್ಲಿ ತೋರಿಸುತಿದ್ದರು. ಮತ್ತು ಅವರೆಲ್ಲರೂ ಅಲ್ಲಲ್ಲಿ ಗುಂಪುಗೂಡಿ,ಕೃಷ್ಣನ ವಿಷಯವಾದ ಹಾಡುಗ ಳನ್ನು ಹಾಡುತ್ತ ಕಾಡಿಂದ ಕಾಡಿಗೆ ಸುತ್ತುವುದು, ಕೃಷ್ಣಾ! ಎಂದು ಕೂಗಿಕೊಳ್ಳುವುದು, ಇಲ್ಲದ ಕಡೆ ಯಲ್ಲಿ ಹುಡುಕುವುದು, ಈ ರೀತಿಯಾಗಿ ಹುಚ್ಚರಂತೆ ನಡೆಯುತಿದ್ದರು. ಆಕಾಶದಂತೆ ಸಮಸ್ಯಭೂತಗಳ ಒಳಗೂ, ಹೊರಗೂ ವ್ಯಾಪಿಸಿ, ಎಲ್ಲೆಲ್ಲಿಯೂ, ಯಾವಾಗಲೂ ನೆಲೆಗೊಂಡಿರುವ ಆ ಪರಮಪುರುಷನನ್ನು , ಪ್ರಾಕೃತಮನುಷ್ಯರನ್ನು ಹುಡುಕುವಂತೆ, ಅಲ್ಲಲ್ಲಿ ಹು ಡುಕುತ್ತ, ತಮ್ಮ ಕಣ್ಣಿಗೆ ಬಿದ್ದ ಗಿಡಮರಗಳನ್ನೂ ,ಮೃಗಪಕ್ಷಿಗಳನ್ನೂ ಪ್ರ ಶೈ ಮಾಡತೊಡಗಿದರು. ಕೆಲವರು ಆ ಕಾಡಿನಲ್ಲಿದ್ದ ಕೆಲವು ವೃಕ್ಷಗಳನ್ನು ನೋಡಿ ಓ ಅಶ್ವತ್ಥವೃಕ್ಷವೆ? ನಮ್ಮ ಕೃಷ್ಣನನ್ನು ಕಂಡೆಯಾ? ಓ ಔ ಕಾ' ಓ ನಗೊವಾ ' ನೀವೇನಾದರೂ ಆ ಕೃಷ್ಣನನನ್ನು ಕಂಡಿರಾ? ಆ ನಂದಕುಮಾರನು ತನ್ನ ಪ್ರೇಮಸೂಚಕವಾದ ಮಂದಹಾಸದಿಂದಲೂ, ತನ್ನ ನೋಟದಿಂದಲೂ ನಮ್ಮೆಲ್ಲರ ಮನಸ್ಸನ್ನೂ ಕದ್ದು ಝಿರುವನು ಓ ಕುರವಕಾ! ಅಶೋಕಾ! ಓ ನೀಪಾ! ಎಲೈ ಅಯಮರವೆ! ಓ ಚಂದನಾ ! ಅವನು ತನ್ನ ಮಂದಸ್ಮಿತದಿಂದ, ಮಾನಿನಿಯರಾದ ನಮ್ಮ ದರ್ಪವನ್ನು ಕೊಳ್ಳೆಹೊಡೆದುಕೊಂಡು ಹೋಗಿರುವನು. ಎಲೆ ತುಲಸಿ! ಮಂಗಳಸ್ವರೂ ಏಣಿ! ನೀನು ಯಾವಾಗಲೂ ಆ ಗೋವಿಂದನ ಪಾದದಲ್ಲಿಯೇ ನೆಲೆಗೊಂಡಿ ರತಕ್ಕವರು! ಅವನೂಕೂಡ, ಭ್ರಮರಪರಿವಾರಗಳೊಡಗೂಡಿದ ನಿನ್ನನ್ನು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೬೯
ಗೋಚರ