೧೨ ಶ್ರೀಮದ್ಭಾಗವತವು [ಅಧ್ಯಾ. ೩೦, ರಿದಂತಿದೆ! ಇದೋ! ಇಲ್ಲಿ ಅವಳನ್ನು ಕೆಳಕ್ಕಿಳಿಸಿರಬೇಕು ! ಇದೋ ಈಗಿಡ ದಲ್ಲಿ ಕೃಷ್ಣನು ಅವಳಿಗಾಗಿ ಹೂಗಳನ್ನು ಕುಯ್ದಂತಿದೆ! ಏಕೆಂದರೆ, ಈ ಗಿಡದಲ್ಲಿ ಮೇಲಿರುವ ಹೂಗಳನ್ನು ಕುಯ್ಯುವುದಕ್ಕಾಗಿ, ಕೃಷ್ಣನು ಪಾದಾ ಗ್ರವನ್ನು ಮಾತ್ರ ನೆಲದಮೇಲೆ ಊರಿ, ಮೆಟ್ಟುಗಾಲಿನಿಂದ ನಿಂತಿರಬೇಕು. ಅದರಿಂದಲೇ ಅವನ ಹಜ್ಜೆಗಳ ಆರ್ಧಭಾಗದ ಗುರುತುಮಾತ್ರ ಕಾಣುತ್ತಿರು ವುದು. ಇದೋ! ಇತ್ತಲಾಗಿ ಕೃಷ್ಣನು ತನ್ನ ಮೊಳಕಾಲುಗಳನ್ನೂರಿ ಕುಳಿ ತಂತೆ ತೋರುತ್ತಿರುವುದು ನೋಡಿರಿ! ಇಲ್ಲಿ ಅವನು ತಾನು ಕುದ್ದು ಹೂ ಗಳನ್ನು ಅವಳ ತಲೆಗೆ ಮುಡಿಸುವುದಕ್ಕಾಗಿ ಹಾಗೆ ಕುಳಿತಿರಬಹುದು.”ಹೀಗೆಂ ದು ಮಾತನಾಡುತ್ತ ಆ ಗೋಪಿಯರು ಇನ್ನೂ ಮುಂದೆಮುಂದೆ ಹುಡುಕು ತ ಹೋದರು. ರಾಜಾ! ಕೃಷ್ಣನು ಅವಾಪ್ತಸಮಸ್ತಕಾಮನಾಗಿ, ಆ ತ್ಯಾನುಭವದಿಂದಲೇ ಆನಂದಿಸತಕ್ಕವನಾಗಿ, ಈ ವಿಧವಾದ ಸಿ ಮೋ ಹಾದಿಗಳಿಗೆ ಈಡಾಗತಕ್ಕವನಲ್ಲವಾದರೂ, ಲೋಕದಲ್ಲಿ ಕಾಮುಕರು ಸ್ತ್ರೀ ಯರಿಗೆ ವಶರಾಗಿ ತೋರಿಸುವ ಹೀನಸ್ವಭಾವವನ್ನೂ, ಸ್ತ್ರೀಯರು ಅವ ರಲ್ಲಿ ಕಾಣಿಸತಕ್ಕ ದೌರ್ಜನ್ಯವನ್ನೂ ತೋರಿಸುವುದಕ್ಕಾಗಿಯೇ, ಬೇರೆ ಗೋಪಿಯರೆಲ್ಲರನ್ನೂ ಉದಾಸೀನಮಾಡಿ, ಯಾವಳೋ ಒಬ್ಬಳನ್ನು ಮಾತ್ರ ತಾನು ಮೋಹಿಸಿದಂತೆ ತೋರಿಸುತ್ತ, ನಿಜವಾಗಿ ಆಕೆಯೊಬ್ಬಳೊಡನೆ ಆ ವನದಲಿ ಕಣ ರೆವಾಗಿ ಸಂಚರಿಸುತಿದನು. ಇದು ಹೀಗಾಯಿತಷೆ ? ಆ ತಲಾಗಿ ಕೃಷ್ಣನು ಯಾವಳನ್ನು ಮಾತ್ರ ತನ್ನೊಡನೆ ಕರೆದುಕೊಂಡು ಹೋದನೋ, ಅವಳಿಗೆ ಮನಸ್ಸಿನಲ್ಲಿ ಗತ್ವವು ಹುಟ್ಟಿತು ! ತನ್ನ ಸೌಂದಯ್ಯ ದಿಂದ ತಾನು ಕೃಷ್ಣನನ್ನೂ ಮೋಹಗೊಳಿಸಿದನೆಂದೂ, ಲೋಕದಲ್ಲಿ ತನಗೆ ಮೇಲೆ ಸುಂದರಿಯರೇ ಇಲ್ಲವೆಂದೂ ತಿಳಿದು, ಹೆಮ್ಮೆಯಿಂದ ಬೀಗಿ ಬೆರೆಯು ತಿದ್ದಳು. ಆಕೆಯು ಕೃಷ್ಣನೊಡನೆ ಸ್ವಲ್ಪ ದೂರ ನಡೆಯುವಷ್ಟರಲ್ಲಿ, ಗ ರೊದ್ರೇಕದಿಂದ ವಿವೇಕಹೀನೆಯಾಗಿ, ಸರೇಶ್ವರನಾದ ಕೃಷ್ಣನನ್ನು ಕು ರಿತು “ಕೃಷ್ಣಾ! ಇನ್ನು ಮೇಲೆ ನಾನು ನಡೆಯಲಾರೆನು! ನನ್ನನ್ನು ಎತ್ತಿ ಕೊಂಡು ಹೋದರೆಮಾತ್ರ ನಾನು ಬರುವೆನು” ಎಂದಳು ಕೃಷ್ಣನು ಆ ವಳ ಗತ್ವವನ್ನು ನೋಡಿ ಮನಸ್ಸಿನಲ್ಲಿ ನಗುತ್ತ, “ಪ್ರಿಯೇ! ಹಾಗಿದ್ದರೆ ನನ್ನ
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೭೪
ಗೋಚರ